ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಸ್ಸಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಕಂಡಕ್ಟರ್; ವಿಡಿಯೊ ವೈರಲ್

ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಜೆಸಿಟಿಎಸ್‍ಎಲ್) ಬಸ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಸ್ ಕಂಡಕ್ಟರ್ ನಡುವೆ ಮಾರಾಮಾರಿ ನಡೆದಿದ್ದು, ಅಧಿಕಾರಿಯನ್ನು ಬಸ್ ಕಂಡೆಕ್ಟರ್ ಥಳಿಸಿದ್ದಾರೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಜೈಪುರ: ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಜೆಸಿಟಿಎಸ್‍ಎಲ್) ಬಸ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಸ್ ಕಂಡಕ್ಟರ್ ನಡುವೆ ಮಾರಾಮಾರಿ ನಡೆದಿದ್ದು, ಅಧಿಕಾರಿಯನ್ನು ಬಸ್ ಕಂಡೆಕ್ಟರ್ ಥಳಿಸಿದ್ದಾರೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ  ವೈರಲ್(Viral Video) ಆಗಿದೆ. 10 ರೂ.ಗಳ ಶುಲ್ಕ ವಿವಾದದ ಬಗ್ಗೆ ಜಗಳ ಶುರುವಾಯಿತು ಎಂದು ವರದಿಯಾಗಿದೆ.
ವರದಿ ಪ್ರಕಾರ, ಜೈಪುರದ ಲೋ ಫ್ಲೋರ್ ಬಸ್‍ನಲ್ಲಿ ಶುಕ್ರವಾರ (ಜನವರಿ 10) ಬೆಳಿಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಆರ್.ಎಲ್.ಮೀನಾ ಪ್ರಯಾಣಿಸುವಾಗ ಬಸ್ ಕಂಡಕ್ಟರ್ ನಡುವೆ ಶುಲ್ಕದ ವಿಚಾರಕ್ಕೆ ವಾಗ್ವಾದ ನಡೆದಿದೆಯಂತೆ. ಮೀನಾ ಅವರು ಇಳಿಯಬೇಕಾಗಿದ್ದ ನಿಲ್ದಾಣವಾದ ಕನೋಟಾದಲ್ಲಿ ಕಂಡಕ್ಟರ್ ಬಸ್ ನಿಲ್ಲಿಸದಿದ್ದಾಗ ಗಲಾಟೆ ಭುಗಿಲೆದ್ದಿತು. ಬಸ್ ನೈಲಾಗೆ ಚಲಿಸಿದ ಕಾರಣ ಕಂಡಕ್ಟರ್ ಹೆಚ್ಚುವರಿ 10 ರೂ.ಗಳನ್ನು ಕೇಳಿದ್ದಾರೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
राजधानी मे #कंडक्टर ने #रिटायर्ड_IAS_अधिकारी के साथ की #मारपीटऐसे लोगो को प्रशासन, कानून के होने का अहसास करवाये!ये वीडियो #जयपुर_शहर का बताया जा रहा है मामला कुछ भी हो लेकिन एक #बुजुर्ग_व्यक्ति के साथ इस तरह का व्यवहार बिल्कुल उचित नही था इस पर #तुरंत_संज्ञान_लेना_चाहिए। pic.twitter.com/3AjzcDyWR5— एक नजर (@1K_Nazar) January 11, 2025
ವಾಗ್ವಾದದ ಸಮಯದಲ್ಲಿ ಕಂಡಕ್ಟರ್ ಆರ್.ಎಲ್.ಮೀನಾ ಅವರನ್ನು ಥಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಮೀನಾ ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಬಸ್ ಕಂಡಕ್ಟರ್ ಮೀನಾ ಅವರನ್ನು ಸೀಟಿನಿಂದ ಹೊರಗೆಳೆದು ಪದೇ ಪದೇ ಕಪಾಳಮೋಕ್ಷ ಮಾಡಿ ಥಳಿಸಿದ್ದಲ್ಲದೇ ಬಸ್ಸಿನ ಹಿಂದಿನ ಸೀಟಿಗೆ ಎಳೆದುಕೊಂಡು ಹೋಗಿ ಒದ್ದು ಹೊರಗೆ ಹಾಕಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.
ಘಟನೆಯ ನಂತರ, ಮೀನಾ ಕನೋಟಾ ಪೊಲೀಸ್ ಠಾಣೆಯಲ್ಲಿ ಕಂಡಕ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ನಂತರ ಚಲಿಸುವ ಬಸ್‍ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಿ ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅದರಂತೆ  ಜೆಸಿಟಿಎಸ್ಎಲ್ ಕಂಡಕ್ಟರ್ ಘನಶ್ಯಾಮ್ ಶರ್ಮಾ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ:ಚಿನ್ನದ ವ್ಯಾಪಾರಿ ಮೇಲೆ ಫೈರಿಂಗ್- ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಶರ್ಮಾ ಅವರು ಹಿರಿಯ ನಾಗರಿಕ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಮಾನತು ಅವಧಿಯಲ್ಲಿ ನಿಯಮಗಳ ಪ್ರಕಾರ ಶರ್ಮಾ ಜೀವನಾಧಾರ ಭತ್ಯೆಯನ್ನು ಪಡೆಯುತ್ತಾರೆ ಎಂದು ತಿಳಿಸಲಾಗಿದೆ.