#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಬಾಯಾರಿಕೆ ತಾಳಲಾರದೇ ಕೋತಿ ಏನ್‌ ಮಾಡಿತು ಗೊತ್ತಾ? ವಿಡಿಯೊ ನೋಡಿ

ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿಯೊಂದು ನೀರಿಗಾಗಿ ಶಾಲಾ ಹುಡುಗನ ಬ್ಯಾಗ್‌ನಲ್ಲಿದ್ದ ನೀರಿನ ಬಾಟಲಿನ ಮೇಲೆ ಹಾರಿದೆ. ಇದನ್ನು ಕಂಡ ಆತನ ತಾಯಿ ನೀರಿನ ಬಾಟಲಿ ತೆಗೆದು ಅದಕ್ಕೆ ನೀರು ಕುಡಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮನ ಗೆದ್ದಿದೆ.

ಬಾಯಾರಿದ ಕೋತಿಗೆ ನೀರುಣಿಸಿದ ಮಹಾತಾಯಿ! ಹೃದಯಸ್ಪರ್ಶಿ ವಿಡಿಯೊ ವೈರಲ್

Viral Video

Profile pavithra Jan 28, 2025 12:34 PM

ಮಕ್ಕಳು ಹಸಿವು ಯಾರಿಗೆ ಗೊತ್ತಾಗದಿದ್ದರೂ ತಾಯಿ ಕರುಳಿಗೆ ಗೊತ್ತಾಗುತ್ತದೆಯಂತೆ! ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಶಾಲಾ ಹುಡುಗರ ಗುಂಪಿನ ಪಕ್ಕದಲ್ಲಿ ನಿಂತಿದ್ದ ತಾಯಿಯೊಬ್ಬಳು ಕೋತಿ ತನ್ನ ಮಗನ ಬ್ಯಾಗ್‍ನ ಮೇಲೆ ಜಿಗಿಯುವುದನ್ನು ನೋಡಿದ್ದಾಳೆ. ಅವಳು ತನ್ನ ಮಗನ ಸುರಕ್ಷತೆಯ ಜೊತೆಗೆ ಕೋತಿಯ ಬಾಯಾರಿಕೆಯನ್ನು ಅರ್ಥಮಾಡಿಕೊಂಡಿದ್ದಾಳೆ. ಬಾಯಾರಿಕೆಯಿಂದ ದಣಿದ ಕೋತಿಗೆ ಆ ತಾಯಿ ಮಗನ ಬ್ಯಾಗ್‌ನಿಂದ ಬಾಟಲಿ ತೆಗೆದು ಕುಡಿಯಲು ನೀರುಕೊಟ್ಟಿದ್ದಾಳೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಕೋತಿ, ನೀರನ್ನು ಹುಡುಕುತ್ತಾ, ಶಾಲಾ ಬಾಲಕನ ಬ್ಯಾಗ್‌ನಲ್ಲಿ ಕಾಣಿಸುತ್ತಿದ್ದ ಬಾಟಲಿನ ಮೇಲೆ ಹಾರಿದೆ. ಕೋತಿ ತನ್ನ ಮೇಲೆ ದಾಳಿ ಮಾಡುವುದನ್ನು ಕಂಡು ಹುಡುಗ ಹೆದರಿದ್ದಾನೆ. ಆದರೆ ಈ ದೃಶ್ಯವನ್ನು ಗಮನಿಸಿದ ತಾಯಿ ಮಧ್ಯಪ್ರವೇಶಿಸಿ ಕೋತಿಯ ಪರಿಸ್ಥಿತಿಯನ್ನು ಗಮನಿಸಿ ಅದಕ್ಕೆ ಸಹಾಯ ಮಾಡಿದ್ದಾಳೆ. ಮಹಿಳೆ ಭಯಪಡದೇ, ಹುಡುಗನ ಬ್ಯಾಗ್‍ನಿಂದ ನೀರಿನ ಬಾಟಲಿಯನ್ನು ತೆಗೆದು ಕೋತಿಗೆ ನೀರು ಕುಡಿಸಿದ್ದಾಳೆ. ಆ ತಾಯಿ ಕೋತಿಗೆ ತನ್ನ ಕೈಗಳಿಂದ ನೀರನ್ನು ಕುಡಿಸಿದ ಹೃದಯಸ್ಪರ್ಶಿ ಕ್ಷಣವನ್ನು ಅಲ್ಲಿದ್ದವರು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ.



ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ನೆಟ್ಟಿಗರು ಆ ಮಹಿಳೆ ಮಾಡಿದ ಕೆಲಸವನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮನುಷ್ಯರಿಗಿಂತ ತಾನೇನು ಕಮ್ಮಿ ಇಲ್ಲ... ಕೋತಿ ಟ್ಯಾಲೆಂಟ್‌ ನೋಡಿದ್ರೆ ಶಾಕ್‌ ಆಗುತ್ತೆ!

"ಮಾ ಅಖಿರ್ ಮಾ ಹೋತಿ ಹೈ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. “ನಿಜವಾದ ತಾಯಿ ಎಲ್ಲರಿಗೂ ತಾಯಿಯ ಪ್ರೀತಿಯನ್ನು ತೋರಿಸುತ್ತಾಳೆ” ಎಂದು ಮತ್ತೊಬ್ಬರು ಬರೆದಿದ್ದಾರೆ. ಅನೇಕರು ಆ ಮಹಾತಾಯಿಯ ಕಾರ್ಯಕ್ಕೆ ಸೆಲ್ಯೂಟ್‌ ನೀಡಿದ್ದಾರೆ.