Virat Kohli: ರಣಜಿ ಪಂದ್ಯಕ್ಕೂ ಮುನ್ನ ಅಭ್ಯಾಸ ಆರಂಭಿಸಿದ ಕೊಹ್ಲಿ
ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವಾಡಿದ್ದು 2012ರಲ್ಲಿ. ಇದೀಗ ಅವರು ರೈಲ್ವೇಸ್ ವಿರುದ್ಧ ಕಣಕ್ಕಿಳಿದರೆ 13 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಿದಂತಾಗುತ್ತದೆ.

Virat Kohli

ದೆಹಲಿ: ಕುತ್ತಿಗೆ ನೋವಿನಿಂದಾಗಿ ಸೌರಾಷ್ಟ್ರ ವಿರುದ್ಧದ ರಣಜಿ(Ranji Trophy) ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಇದೀಗ ಜ.30ರಂದು ನಡೆಯುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕಿಳಿಯುವುದು ಖಚಿತವಾದಂತಿದೆ. ಕೊಹ್ಲಿ ಮಾಜಿ ಬ್ಯಾಟರ್ ಸಂಜಯ್ ಬಂಗಾರ್ ಅವರ ಮಾರ್ಗದರ್ಶನದಲ್ಲಿ ಕಠಿಣ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸದ ಫೋಟೊ ಮತ್ತು ವಿಡಿಯೊಗಳು ವೈರಲ್ ಆಗಿದೆ.
Virat Kohli working with Sanjay Banger in Mumbai. 🙇♂️ pic.twitter.com/T4zEhC2D2f
— Mufaddal Vohra (@mufaddal_vohra) January 25, 2025
ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವಾಡಿದ್ದು 2012ರಲ್ಲಿ. ಇದೀಗ ಅವರು ರೈಲ್ವೇಸ್ ವಿರುದ್ಧ ಕಣಕ್ಕಿಳಿದರೆ 13 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಿದಂತಾಗುತ್ತದೆ. ಮೂಲಗಳ ಪ್ರಕಾರ ಕೊಹ್ಲಿ ಕೊನೇ ಲೀಗ್ ಪಂದ್ಯದಲ್ಲಿ ಆಡಲು ತಾನು ಲಭ್ಯನಿದ್ದೇನೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಈಗಾಗಲೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ತವರಿನ ನ್ಯೂಜಿಲ್ಯಾಂಡ್ ಮತ್ತು ಆಸೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಇದೇ ಕಾರಣದಿಂದ ಬಿಸಿಸಿಐ ಹಿರಿಯ ಆಟಗಾರರು ಕೂಡ ದೇಶೀಯ ಪಂದ್ಯವನ್ನಾಡುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತಂದೆ. ಈಗಾಗಲೇ ನಾಯಕ ರೋಹಿತ್ ಶರ್ಮ, ಶುಭಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಸೇರಿದಂತೆ ಕೆಲ ಆಟಗಾರರು ರಣಜಿ ಆಡಿದ್ದರು. ಆದರೆ ರೋಹಿತ್ ಮತ್ತು ಪಂತ್ ಸಂಪೂರ್ಣ ವಿಫಲರಾಗಿದ್ದರು.
2020ರ ಆರಂಭದಿಂದಲೂ ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರೀ ವೈಫಲ್ಯ ಎದುರಿಸುತ್ತಿದ್ದಾರೆ. 2020ರ ಆರಂಭದಿಂದ 39 ಟೆಸ್ಟ್ ಪಂದ್ಯಗಳಲ್ಲಿ, ವಿರಾಟ್ ಕೇವಲ 30.72 ರ ಸರಾಸರಿಯಲ್ಲಿ 2,028 ರನ್ ಗಳಿಸಿದ್ದಾರೆ. ಕೇವಲ ಮೂರು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ.