ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Bill: ಹೀಗೆ ಬಿಟ್ರೆ ಏರ್‌ಪೋರ್ಟ್‌, ರೈಲ್ವೇ ಸ್ಟೇಷನ್‌ ಎಲ್ಲವೂ ವಕ್ಫ್‌ ಪಾಲಾಗುತ್ತವೆ; ತಿದ್ದುಪಡಿ ಮಸೂದೆಗೆ ಕಿರಣ್‌ ರಿಜಿಜು ಸಮರ್ಥನೆ

Waqf Bill:ಲೋಕಸಭೆಯಲ್ಲಿ ಇಂದು ಮಹತ್ವದ ವಕ್ಫ್‌ ಮಸೂದೆ ತಿದ್ದುಪಡಿ ಮಂಡನೆಯಾಗಿದೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಈ ತಿದ್ದುಪಡಿ ಮಸೂದೆಯಿಂದ ದೇಶದಲ್ಲಿರುವ ಯಾವುದೇ ಮಸೀದಿಗೆ ತೊಂದರೆಯುಂಟಾಗುವುದಿಲ್ಲ ಎಂದರು

ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ಮಸೂದೆ ಮಂಡನೆ

Profile Rakshita Karkera Apr 2, 2025 12:46 PM

ನವದೆಹಲಿ: ಬಹುಚರ್ಚಿತ ಹಾಗೂ ವಿವಾದಿತ ವಕ್ಫ್‌ ಮಸೂದೆಯನ್ನು(Waqf amendment bill) ಇಂದು ಕೇಂದ್ರ ಸರ್ಕಾರ ಲೋಕಸಭೆ ಮುಂದಿಟ್ಟಿದೆ. ವಿರೋಧಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸಚಿವ ಕಿರಣ್‌ ರಿಜಿಜು(Kiren Rijiju) ಮಸೂದೆಯನ್ನು ಮಂಡಿಸಿದ್ದು, ಇದರಿಂದ ದೇಶದಲ್ಲಿರುವ ಯಾವುದೇ ಮಸೀದಿಗೆ ತೊಂದರೆಯುಂಟಾಗುವುದಿಲ್ಲ ಎಂದರು. ಮಸೂದೆ ಮಂಡನೆಗೆ ಆಗತ್ಯವಾದ ಎಲ್ಲಾ ಕಾನೂನು ಕ್ರಮವನ್ನು ನಾವು ಅನುಸರಿಸಿದ್ದೇವೆ. ವಕ್ಫ್‌ ಮಸೂದೆಯನ್ನು ಸಂಸತ್‌ ಅನುಮೋದಿಸಿದೆ. 25 ರಾಜ್ಯಗಳ ವಕ್ಫ್‌ ಬೋರ್ಡ್‌ ಅಭಿಪ್ರಾಯವನ್ನು ನಾವು ಸಂಗ್ರಹಿಸಿದ್ದೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಎರಡೂ ಸದನಗಳ ಸದಸ್ಯರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಒಟ್ಟಾರೆಯಾಗಿ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳ 284 ನಿಯೋಗಗಳು ಜೆಪಿಸಿಯಲ್ಲಿ ತಮ್ಮ ವಾದಗಳನ್ನು ಮಂಡಿಸಿದ್ದವು. ಅವುಗಳನ್ನು ಪರಿಗಣಿಸಿಯೇ ಮಸೂದೆಯನ್ನು ರಚಿಸಲಾಗಿದೆ ಎಂದರು.

ವಕ್ಫ್‌ ಮಸೂದೆಯನ್ನು ಹಲವು ಬಾರಿ ತಿದ್ದುಪಡಿ ಮಾಡಲಾಗಿತ್ತು. ಶಿಯಾ ಸುನ್ನಿ ಎಂದು ಮುಸ್ಲಿಮರನ್ನು ಇಬ್ಬಾಗ ಮಾಡಲಾಗಿತ್ತು. ಹಾಗಿರುವಾಗ ಈ ಮಾತ್ರ ಏಕೆ ವಿರೋಧ ವ್ಯಕ್ತವಾಗುತ್ತಿದೆ? ನಾವು ಬಡ ಮುಸ್ಲಿಮರಿಗಾಗಿ ಈ ಮಸೂದೆ ಮಂಡನೆ ಮಾಡುತ್ತಿದ್ದೇವೆ ಎಂದು ರಿಜಿಜು ಮಸೂದೆ ಮಂಡನೆಯನ್ನು ಸಮರ್ಥಿಸಿಕೊಂಡರು. ಹೀಗೆ ಬಿಟ್ಟರೆ ಎಲ್ಲಾ ಆಸ್ತಿಗಳನ್ನು ವಕ್ಫ್‌ ಬೋರ್ಡ್‌ಗೆ ಕೊಟ್ಟು ಬಿಡುತ್ತಾರೆ. ಏರ್‌ಪೋರ್ಟ್‌, ಬಸ್‌ಸ್ಟ್ಯಾಂಡ್‌, ರೈಲ್ವೇ ನಿಲ್ದಾಣ ಸೇರಿದಂತೆ ಎಲ್ಲವೂ ವಕ್ಫ್‌ ಪಾಲಾಗುತ್ತದೆ. ಹೀಗಾಗಿ ಮಸೂದೆಯಲ್ಲಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಮಸೂದೆ ವಿಚಾರವಾಗಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧವೇಕೆ? ವಕ್ಫ್ ಹೊಂದಿರುವ ಭೂಮಿ ಎಷ್ಟು ಗೊತ್ತೇ?

ಈ ವೇಳೆ ಸಿಟ್ಟಿಗೆದ್ದ ಪ್ರತಿಪಕ್ಷ ನಾಯಕರು ಮೋದಿ ಸರ್ಕಾರ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಸಮಗ್ರ ಚರ್ಚೆಗೆ ಅವಕಾಶ ಕೊಡದೇ ಮಸೂದೆ ಮಂಡಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.