ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WI vs PAK: 34 ವರ್ಷದ ಬಳಿಕ ಪಾಕ್‌ನಲ್ಲಿ ಟೆಸ್ಟ್‌ ಪಂದ್ಯ ಗೆದ್ದ ವಿಂಡೀಸ್‌

ಗೆಲುವಿಗೆ 254 ರನ್‌ ಗುರಿ ಪಡೆದ ಪಾಕಿಸ್ತಾನ ಈ ಮೊತ್ತವನ್ನು ಸುಲಭವಾಗಿ ಬಾರಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. 4 ವಿಕೆಟ್‌ಗೆ 76 ರನ್‌ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಪಾಕ್‌ ಕೇವಲ 133 ಆಲೌಟ್‌ ಆಗುವ ಮೂಲಕ ಇನ್ನೆರಡು ದಿನ ಬಾಕಿ ಇರುವಂತೆ ಸೋಲೊಪ್ಪಿಕೊಂಡಿತು.

West Indies

ಮುಲ್ತಾನ್‌: ಪಾಕಿಸ್ತಾನ(WI vs PAK) ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 120 ರನ್‌ಗಳ ಗೆಲುವು ಸಾಧಿಸಿದೆ. ಇದು ಪಾಕ್‌ ನೆಲದಲ್ಲಿ 34 ವರ್ಷದ ಬಳಿಕ ವಿಂಡೀಸ್‌ಗೆ ಒಲಿದ ಮೊದಲ ಗೆಲುವಾಗಿದೆ. ವೆಸ್ಟ್‌ ಇಂಡೀಸ್‌ ತಂಡ ಪಾಕ್‌ನಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯ ಗೆದ್ದದ್ದು 1990 ರಲ್ಲಿ.

ಶನಿವಾರ ಆರಂಭಗೊಂಡ ಈ ಟೆಸ್ಟ್‌ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯ ಕಂಡಿತು. ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 163 ರನ್‌ ಬಾರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್‌ ಬೀಸಿದ ಪಾಕಿಸ್ತಾನ ಜೋಮೆಲ್ ವಾರಿಕನ್(4) ಮತ್ತು ಗುಡಾಕೇಶ್ ಮೋತಿ(3) ಬೌಲಿಂಗ್‌ ದಾಳಿಗೆ ತತ್ತರಿಸಿ 154 ರನ್‌ಗೆ ಸರ್ವಪತನ ಕಂಡಿತು.

ಮೊದಲ ಇನಿಂಗ್ಸ್‌ನ 9 ರನ್‌ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌, ನಾಯಕ ಕ್ರೈಗ್ ಬ್ರಾಥ್‌ವೈಟ್(52) ಅರ್ಧಶತಕದ ನೆರವಿನಿಂದ 244 ರನ್‌ ಗಳಿಸಿತು. ಪಾಕಿಸ್ತಾನ ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ನೋಮನ್ ಅಲಿ ತಲಾ 4 ವಿಕೆಟ್‌ ಪಡೆದರು. ಆದರೆ ಪಂದ್ಯ ಸೋತ ಕಾರಣ ಇವರ ಬೌಲಿಂಗ್‌ ಸಾಹಸ ವ್ಯರ್ಥವಾಯಿತು.

ಇದನ್ನೂ ಓದಿ IND vs ENG 3rd T20: ಮೂರನೇ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ, ಸಂಭಾವ್ಯ ತಂಡ ಹೀಗಿದೆ

ಗೆಲುವಿಗೆ 254 ರನ್‌ ಗುರಿ ಪಡೆದ ಪಾಕಿಸ್ತಾನ ಈ ಮೊತ್ತವನ್ನು ಸುಲಭವಾಗಿ ಬಾರಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. 4 ವಿಕೆಟ್‌ಗೆ 76 ರನ್‌ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಪಾಕ್‌ ಕೇವಲ 133 ಆಲೌಟ್‌ ಆಗುವ ಮೂಲಕ ಇನ್ನೆರಡು ದಿನ ಬಾಕಿ ಇರುವಂತೆ ಸೋಲೊಪ್ಪಿಕೊಂಡಿತು. 2 ಪಂದ್ಯಗಳ ಈ ಸರಣಿಯಲ್ಲಿ ಮೊದಲ ಪಂದ್ಯವನ್ನು ಪಾಕ್‌ ಗೆದ್ದಿತ್ತು. ಹೀಗಾಗಿ ಸರಣಿ 1-1 ಸಮಬಲದೊಂದಿಗೆ ಮುಕ್ತಾಯ ಕಂಡಿತು.



ದ್ವಿತೀಯ ಇನಿಂಗ್ಸ್‌ನಲ್ಲಿ ಮಾಜಿ ನಾಯಕ ಬಾಬರ್‌ ಅಜಂ(31) ಮತ್ತು ಮೊಹಮ್ಮದ್‌ ರಿಜ್ವಾನ್‌(25) ಹೊರತುಪಡಿಸಿ ಉಳಿದವರೆಲ್ಲ ವಿಫಲರಾದರು. ದ್ವಿತೀಯ ಇನಿಂಗ್ಸ್‌ನಲ್ಲಿ ವಿಂಡಿಸ್‌ ಪರ ಜೋಮೆಲ್ ವಾರಿಕನ್ 5 ವಿಕೆಟ್‌ ಗೊಂಚಲು ಪಡೆದರು. ಮೊದಲ ಇನಿಂಗ್ಸ್‌ ಸೇರಿ ಒಟ್ಟು 9 ವಿಕೆಟ್‌ ಕಿತ್ತ ಸಾಧನೆಗೈದರು. ಕೆವಿನ್ ಸಿಂಕ್ಲೇರ್(3) ಮತ್ತು ಮೋತಿ(2) ವಿಕೆಟ್‌ ಉರುಳಿಸಿದರು.