ಯುದ್ಧನಿರತ ಅಮೆರಿಕವನ್ನು ಒಳಗೊಂಡಂತೆ ಶಾಂತಿ ಮಾತುಕತೆ ನಡೆಯುವ ಸಾಧ್ಯತೆ ಯಿದೆ ಎಂದು ಅಲ್ಲಲ್ಲಿ ಗುಸುಗುಸು ಕೇಳಿ ಬರುತ್ತಿದ್ದರೂ, ‘ಮಧ್ಯಪ್ರಾಚ್ಯ ವಲಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ’ ಎಂದಿದ್ದಾರೆ ಕಾಂಗ್ರೆಸ್ ಸಂಸದ ಶಶಿ ತರೂರ್. ಯುದ್ಧದಲ್ಲಿ ತೊಡಗಿರುವ ಮತ್ತೊಂದು ದೇಶವಾದ ಇರಾನ್‌ನ ವರ್ತನೆಗಳನ್ನು ನೋಡಿದರೆ ಈ ಮಾತಿ ನಲ್ಲಿ ಕಹಿ ವಾಸ್ತವವಿರುವುದು ಅರಿವಾಗುತ್ತದೆ.
ಇದುವರೆಗೆ ಹೊರ್ಮುಜ್ ಜಲಸಂಧಿಯಲ್ಲಿನ ಹಡಗುಗಳ ಸಂಚಾರಕ್ಕೆ ಅಡ್ಡಗಾಲು ಹಾಕಿದ್ದ ಇರಾನ್ ಈಗ, ಯೆಮೆನ್ ಭಾಗದಲ್ಲಿರುವ ‘ಬಾಬ್ ಅಲ್-ಮಂದೇಬ್’ ಜಲಸಂಧಿಯನ್ನೂ ಮುಚ್ಚುವ ಬೆದರಿಕೆಯನ್ನು ಹಾಕಿದೆ; ತನ್ನ ತೈಲ ಸಂಪನ್ಮೂಲದ ಬಹುಮುಖ್ಯ ಭಾಗವಾಗಿ ರುವ ಖಾರ್ಗ್ ದ್ವೀಪ, ಇಸಹಾನ್, ಶಿರಾಜ್ ನಗರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಾಳಯಗಳು ಕೆಂಗಣ್ಣು ಬೀರಿರುವುದಕ್ಕೆ ಇರಾನ್ ಹೂಡಿರುವ ಪ್ರತ್ಯಸ್ತ್ರವಿದು ಎನ್ನಲಾಗು ತ್ತಿದೆ.
ಇದನ್ನೂ ಓದಿ: Vishwavani Editorial: ದಲ್ಲಾಳಿ ದೇಶಕ್ಕೆ ಮುಖಭಂಗ!
ಒಟ್ಟಿನಲ್ಲಿ ‘ವಿಶ್ವ ವ್ಯವಸ್ಥೆ’ಯು ಅವ್ಯವಸ್ಥೆಯ ನೆಲೆವೀಡಾಗುವುದಕ್ಕೆ ಏನೇನೆಲ್ಲಾ ಮಾಡ ಬಹುದೋ ಅವೆಲ್ಲವನ್ನೂ ಪಾಂಗಿತವಾಗಿ ಮಾಡಲು ಈ ದೇಶಗಳು ಟೊಂಕ ಕಟ್ಟಿದಂತಿದೆ. ಮಧ್ಯಪ್ರಾಚ್ಯ ಯುದ್ಧ ಶುರುವಾದಾಗ ಅದು ಇಂಥ ಅತಿರೇಕದ ಮಟ್ಟವನ್ನು ಮುಟ್ಟಲಿದೆ ಅಂತ ಯಾರೂ ಊಹಿಸಿರಲಿಲ್ಲ; ಆದರೆ ದಿನಗಳೆದಂತೆ ಯುದ್ಧೋನ್ಮಾದವೂ ತಾರಕಕ್ಕೇರಿ, ಜಗತ್ತಿನ ಮಿಕ್ಕ ವಲಯಗಳಿಗೂ ಅದರ ಬಿಸಿ ತಟ್ಟತೊಡಗಿದೆ, ಬದುಕು ದುಸ್ತರವಾಗುತ್ತಿದೆ.
ಯುದ್ಧ ಮತ್ತಷ್ಟು ದಿನಗಳವರೆಗೆ ಮುಂದುವರಿದರೆ, ಈ ಜ್ವಾಲೆಯ ಕೆನ್ನಾಲಿಗೆಗಳು ಮತ್ತಷ್ಟು ವಿಸ್ತರಿಸಿಕೊಳ್ಳುತ್ತವೆ ಎಂಬುದರ ಸ್ಪಷ್ಟ ಅರಿವಿದ್ದೂ ಭೂರಾಜಕೀಯದಲ್ಲಿ ನಿಷ್ಣಾತರಾದ ತಥಾಕಥಿತ ಮುತ್ಸದ್ದಿಗಳಿಗೆ ಜ್ಞಾನೋದಯವಾದಂತಿಲ್ಲ.
ಎರಡನೇ ಮಹಾಯುದ್ಧದಲ್ಲಿ ಅಣುಬಾಂಬ್ ಹೊಡೆತಕ್ಕೆ ಸಿಲುಕಿದ ಜಪಾನ್, ಅದರ ಭೀಕರ ಪರಿಣಾಮಗಳಿಂದ ಚೇತರಿಸಿಕೊಳ್ಳುವುದಕ್ಕೆ ದಶಕಗಳನ್ನೇ ತೆಗೆದುಕೊಂಡಿತು ಎಂಬುದು ಗೊತ್ತಿದ್ದರೂ ಕೆಲವರಿಗೆ ಬುದ್ಧಿ ಬಂದಿಲ್ಲ. ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಯುದ್ಧವೊಂದೇ ಮಾರ್ಗೋಪಾಯವಲ್ಲ ಎಂಬುದರ ಅರಿವಿದ್ದರೂ, ಅದನ್ನು ಯುದ್ಧೋ ನ್ಮಾದಿಗಳಿಗೆ ಮನವರಿಕೆ ಮಾಡಿಕೊಡುವುದಕ್ಕೆ ಕೆಲ ಜಾಗತಿಕ ನಾಯಕರು ಇನ್ನೂ ಮೀನ-ಮೇಷ ಎಣಿಸುತ್ತಿರುವುದು ದುರದೃಷ್ಟಕರ.