2025ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ ವಿಪ್ರೋ
2025ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು 22,500 ಕೋಟಿ ರೂಪಾಯಿ ಒಟ್ಟು ವರಮಾನ ಮತ್ತು 3,570 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ವಿಪ್ರೋ ಬುಧವಾರ ಪ್ರಕಟಿಸಿದೆ. ತ್ರೈಮಾಸಿಕದಲ್ಲಿ ಐಟಿ ಸೇವೆಗಳ ಲಾಭಾಂಶವು ಶೇ 17.5 ರಷ್ಟಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 1.1ರಷ್ಟು ಹೆಚ್ಚಳವಾಗಿದೆ


ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ವರಮಾನವು ಶೇ 6.4ರಷ್ಟು ಹಾಗೂ 2025ನೇ ಆರ್ಥಿಕ ವರ್ಷದಲ್ಲಿ ಶೇ 18.9 ಬೆಳವಣಿಗೆಯಾಗಿದೆ.
ನಾಲ್ಕನೇ ತ್ರೈಮಾಸಿಕ ಲಾಭ ಶೇ 17.5, ವರ್ಷದಿಂದ ವರ್ಷಕ್ಕೆ ಶೇ 1.1 ಹೆಚ್ಚಳ
ದೊಡ್ಡ ಒಪ್ಪಂದಗಳ ಬುಕಿಂಗ್ ವರ್ಷದಿಂದ ವರ್ಷಕ್ಕೆ ಶೇ 48.5 ಹೆಚ್ಚಾಗಿದೆ
ಬೆಂಗಳೂರು: ಪ್ರಮುಖ ತಂತ್ರಜ್ಞಾನ ಸೇವೆಗಳು ಮತ್ತು ಸಲಹಾ ಕಂಪನಿಯಾದ ವಿಪ್ರೋ ಲಿಮಿ ಟೆಡ್ 2025ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅಂತರರಾಷ್ಟ್ರೀಯ ಹಣಕಾಸು ವರದಿ ಮಾನದಂಡಗಳ ಅಡಿಯಲ್ಲಿ ತನ್ನ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ.
ಫಲಿತಾಂಶಗಳ ಮುಖ್ಯಾಂಶಗಳು
- ಒಟ್ಟು ವರಮಾನವು ₹22,500 ಕೋಟಿ ($2,634.2 ಮಿಲಿಯನ್1), ಇದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 0.8 ಮತ್ತು ವರ್ಷದಿಂದ ವರ್ಷಕ್ಕೆ ಶೇ 1.3 ಹೆಚ್ಚಳವಾಗಿದೆ.
- ತ್ರೈಮಾಸಿಕದ ನಿವ್ವಳ ವರಮಾನ ₹3570 ಕೋಟಿ ($417.8 ಮಿಲಿಯನ್1), ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 6.4 ಮತ್ತು ವರ್ಷದಿಂದ ವರ್ಷಕ್ಕೆ ಶೇ 25.9 ಹೆಚ್ಚಳ.
- ಒಟ್ಟು ಬುಕಿಂಗ್‌ಗಳು3 $3,955 ಮಿಲಿಯನ್. ದೊಡ್ಡ ಒಪ್ಪಂದ ಬುಕಿಂಗ್‌ಗಳು4 $1,763 ಮಿಲಿಯನ್, ಸ್ಥಿರ ಕರೆನ್ಸಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 48.5 ಹೆಚ್ಚಳ2.
- ತ್ರೈಮಾಸಿಕದ ಐಟಿ ಸೇವೆಗಳ ಕಾರ್ಯಾಚರಣೆಯ ಲಾಭಾಂಶ5 ಶೇ 17.5, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಸ್ಥಿರ ಮತ್ತು ವರ್ಷದಿಂದ ವರ್ಷಕ್ಕೆ ಶೇ 1.1 ವಿಸ್ತರಣೆ.
- ತ್ರೈಮಾಸಿಕದ ಪ್ರತಿ ಷೇರಿನ ಗಳಿಕೆ ₹3.4 ($0.041), ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 6.2 ಮತ್ತು ವರ್ಷದಿಂದ ವರ್ಷಕ್ಕೆ ಶೇ 25.8 ಹೆಚ್ಚಳ.
ಇದನ್ನೂ ಓದಿ: Wipro GE Healthcare: ವಿಪ್ರೋ ಹೆಲ್ತ್ ಕೇರ್‌ನಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ
2025ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು 22,500 ಕೋಟಿ ರೂಪಾಯಿ ಒಟ್ಟು ವರಮಾನ ಮತ್ತು 3,570 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ವಿಪ್ರೋ ಬುಧವಾರ ಪ್ರಕಟಿಸಿದೆ. ತ್ರೈಮಾಸಿಕದಲ್ಲಿ ಐಟಿ ಸೇವೆಗಳ ಲಾಭಾಂಶವು ಶೇ 17.5 ರಷ್ಟಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 1.1ರಷ್ಟು ಹೆಚ್ಚಳವಾಗಿದೆ. ಈ ತ್ರೈಮಾಸಿಕದಲ್ಲಿ, ಕಂಪನಿಯು $1,763 ಮಿಲಿಯನ್ ದೊಡ್ಡ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಸ್ಥಿರ ಕರೆನ್ಸಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 48.5 ಹೆಚ್ಚಾಗಿದೆ.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶ್ರೀನಿ ಪಲಿಯಾ, ‘ನಾವು ಎರಡು ಮೆಗಾ ಒಪ್ಪಂದಗಳ ಗೆಲುವುಗಳು, ದೊಡ್ಡ ಒಪ್ಪಂದಗಳ ಬುಕಿಂಗ್‌ಗಳಲ್ಲಿ ಹೆಚ್ಚಳ ಮತ್ತು ಹೆಚ್ಚಿನ ಗ್ರಾಹಕರ ಸಂತೃಪ್ತಿ ಅಂಕಗಳೊಂದಿಗೆ ನಮ್ಮ ಉನ್ನತ ಬೆಳವಣಿಗೆಯೊಂದಿಗೆ ವರ್ಷವನ್ನು ಮುಕ್ತಾಯಗೊಳಿಸಿದ್ದೇವೆ. ಹೆಚ್ಚುವರಿಯಾಗಿ, ನಮ್ಮ ಜನರಲ್ಲಿ ಹೂಡಿಕೆ ಮನೋಭಾವ ಮುಂದುವರಿಸುವಾಗ ಮತ್ತು ಸಲಹಾ ಮತ್ತು AI ಸಾಮರ್ಥ್ಯಗಳನ್ನು ನಿರ್ಮಿಸುವ ಸಂದರ್ಭದಲ್ಲಿ ನಾವು ಲಾಭದಲ್ಲಿ ಸುಧಾರಣೆ ಕಂಡಿದ್ದೇವೆ. ಹೆಚ್ಚಿನ ಅನಿಶ್ಚಿತತೆಯಿಂದಾಗಿ ಗ್ರಾಹಕರು ಜಾಗರೂಕ ರಾಗಿರುವುದರಿಂದ, ಸ್ಥಿರವಾದ, ಲಾಭದಾಯಕ ಬೆಳವಣಿಗೆಗೆ ಶ್ರಮಿಸುವಾಗ ಈ ಅವಧಿಯಲ್ಲಿ ಅವರನ್ನು ಮಾರ್ಗದರ್ಶನ ಮಾಡುವುದರ ಮೇಲೆ ನಮ್ಮ ಗಮನವಿದೆ.’