ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Crime: ರಿಕ್ಷಾ ಚಾಲಕನಿಗೆ ಚಪ್ಪಲಿಯಿಂದ ಬಾರಿಸಿದ ಹಿಂದಿವಾಲಿ, ಕೇಸು ಹಾಕಿದಾಗ ಕಾಲಿಗೆ ಬಿದ್ದಳು!

Bengaluru Crime: ಈಕೆಯ ಬೈಕಿಗೆ ಆಟೋ ಟಚ್​ ಆದ ವಿಚಾರಕ್ಕೆ ಬಿಹಾರದ ಮಹಿಳೆ ಹಾಗೂ ಬೆಂಗಳೂರಿನ ಆಟೋ ಡ್ರೈವರ್​ ನಡುವೆ ಗಲಾಟೆ ನಡೆದಿತ್ತು. ಜಗಳದ ನಡುವೆ ಬಿಹಾರದ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಳು. ಈ ಘಟನೆ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು.

ರಿಕ್ಷಾ ಚಾಲಕನಿಗೆ ಥಳಿಸಿದ ಹಿಂದಿವಾಲಿ, ಕೇಸು ಹಾಕಿದಾಗ ಕಾಲಿಗೆ ಬಿದ್ದಳು!

ಆರೋಪಿ ಯುವತಿ ಪನ್ಪೂರಿ ಮಿಶ್ರಾ -

ಹರೀಶ್‌ ಕೇರ
ಹರೀಶ್‌ ಕೇರ Jun 2, 2025 8:56 AM

ಬೆಂಗಳೂರು: ಪರಭಾಷಿ ಮಹಿಳೆಯೊಬ್ಬಳು ಬೆಂಗಳೂರಿನ (Bengaluru Crime News) ರಿಕ್ಷಾ ಚಾಲಕರೊಬ್ಬರ ಮೇಲೆ ದರ್ಬಾರ್‌ ನಡೆಸಲು ಹೋಗಿ ತಾನೇ ಕ್ಷಮೆ ಕೇಳುವ ಪರಿಸ್ಥಿತಿ ತಂದುಕೊಂಡಿದ್ದಾಳೆ. ಆಟೋ ಡ್ರೈವರ್ (Auto driver)​ ಜೊತೆ ಕಿರಿಕ್ ಮಾಡಿಕೊಂಡ ಬಿಹಾರದ ಮಹಿಳೆಯೊಬ್ಬಳು, ಚಪ್ಪಲಿಯಿಂದ ಡ್ರೈವರ್​ಗೆ ಹೊಡೆದಿದ್ದಳು. ಇಂದು ಆತನ ಕಾಲಿಗೆ ಬಿದ್ದಿದ್ದಾಳೆ. ನಾನೇನೂ ಮಾಡಿಲ್ಲ, ತಪ್ಪು ನನ್ನದಲ್ಲ ಎಂದು ಹಿಂದಿಯಲ್ಲಿ ದಬಾಯಿಸಿದ್ದ ಆಕೆ ಇದೀಗ ತಪ್ಪಾಯ್ತು ಅಂತ ಕನ್ನಡಿಗರ ಕ್ಷಮೆ ಕೇಳಿದ್ದಾಳೆ.

ಈಕೆಯ ಬೈಕಿಗೆ ಆಟೋ ಟಚ್​ ಆದ ವಿಚಾರಕ್ಕೆ ಬಿಹಾರದ ಮಹಿಳೆ ಹಾಗೂ ಬೆಂಗಳೂರಿನ ಆಟೋ ಡ್ರೈವರ್​ ನಡುವೆ ಗಲಾಟೆ ನಡೆದಿತ್ತು. ಜಗಳದ ನಡುವೆ ಬಿಹಾರದ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಳು. ಈ ಘಟನೆ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಪ್ರತಿಭಟನೆಗೆ ಮುಂದಾಗಿದ್ದರು. ಆಟೋ ಚಾಲಕರ ಆಕ್ರೋಶಕ್ಕೆ ಮಂಡಿಯೂರಿದ ಮಹಿಳೆ, ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ. ಎಲ್ಲರ ಮುಂದೆ ಆಟೋ ಚಾಲಕನ ಕಾಲಿಗೆ ಬಿದ್ದು, ಕ್ಷಮೆ ಕೇಳಿದ ಮಹಿಳೆ ಮತ್ತು ಅವರ ಪತಿ, "ನಮ್ಮಿಂದ ತಪ್ಪಾಗಿದೆ" ಎಂದು ಕೇಳಿಕೊಂಡಿದ್ದಾರೆ.

ಆಟೋ ಚಾಲಕ ಲೋಕೇಶ್ ಮತ್ತು ಅವರ ಕುಟುಂಬದ ಮುಂದೆ ಮಹಿಳೆ ಕ್ಷಮೆಯಾಚನೆ ಮಾಡಿದ್ದು, "ನನ್ನಿಂದ ತಪ್ಪಾಗಿದೆ, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ" ಎಂದಿದ್ದಾರೆ. ಎಲ್ಲಾ ಆಟೋ ಚಾಲಕರು ಮತ್ತು ಕನ್ನಡಿಗರ ಬಳಿ ಮಹಿಳೆ ನಿನ್ನೆ ಸಂಜೆಯೇ ಕ್ಷಮೆ ಕೇಳಿದ್ದಾರೆ. ಬಿಹಾರ ಮೂಲದ ಪನ್ಪೂರಿ ಮಿಶ್ರಾ (28) ಎಂಬ ಮಹಿಳೆಯು ಈ ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಳ್ಳಂದೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ನಿನ್ನೆ ಮಹಿಳೆಯನ್ನು ಠಾಣೆಗೆ ಕರೆಸಿದ ಪೊಲೀಸರು, ಅವರ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳುಹಿಸಿದರು.

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ

ಬೆಂಗಳೂರಿನ ರಸ್ತೆಯಲ್ಲಿ ಆಟೋಗೆ ಬೈಕ್ ಟಚ್ ಆದ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ಮಾತಿಗೆ ಮಾತು ಬೆಳೆದ ಬಳಿಕ ಮಹಿಳೆ ಚಪ್ಪಲಿಯಿಂದ ಹಾಗೂ ಕೈಯಿಂದ ಆಟೋ ಚಾಲಕನಿಗೆ ಹೊಡೆದಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆಟೋ ಡ್ರೈವರ್ ಆರೋಪ ಮಾಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಘಟನೆ ನಂತರ ಮಹಿಳೆ ಸ್ಥಳದಿಂದ ತೆರಳಿದ್ದಾರೆ. ಆದರೆ, ಬೈಕ್ ನಂಬರ್ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದರು. ಯುವತಿಗೆ ನೋಟಿಸ್ ನೀಡಿದ್ದು, ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ರು

ತನ್ನ ಪತಿ ಜೊತೆ ಬೆಂಗಳೂರಿನಲ್ಲಿ ನೆಲೆಸಿರುವ ಪನ್ಪೂರಿ ಮಿಶ್ರಾ, ಪೊಲೀಸರು ಕರೆ ಮಾಡಿದಾಗ ಠಾಣೆಗೆ ಬಂದು, ನಾನು ಗರ್ಭಿಣಿ ಆಗಿದ್ದು, ಆಸ್ಪತ್ರೆಗೆ ಹೋಗಿ ಬರ್ತಿದ್ದೆ. ಈ ವೇಳೆ ಬೈಕಿಗೆ ಹಿಂದಿನಿಂದ ಆಟೋ ಡಿಕ್ಕಿ ಹೊಡೆದಿತ್ತು ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರೇ ನನ್ನನ್ನು ಬೈದು ಹಲ್ಲೆಗೆ ಯತ್ನಿಸಿದ್ದ ಎಂದು ಮಹಿಳೆ ಆರೋಪ ಮಾಡಿದ್ದರು. ಈ ವೇಳೆ ನಾನು ಕೂಡ ಕೋಪಗೊಂಡು ಚಪ್ಪಲಿಯಿಂದ ಹಲ್ಲೆ ಮಾಡಿದೆ ಎಂದು ಮಹಿಳೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ರಾಜ್ಯದಲ್ಲಿ ಅನ್ಯಭಾಷಿಕರ ಅಟ್ಟಹಾಸ! ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ