#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಗುಜರಾತ್‌ ಜೈಂಟ್ಸ್‌ಗೆ ಆಶ್ಲೀಗ್ ಗಾರ್ಡ್ನರ್ ನೂತನ ನಾಯಕಿ

ಈ ಬಾರಿ ಟೂರ್ನಿಯ 4 ನಗರದಲ್ಲಿ ನಡೆಯಲಿದೆ. ಮೊದಲ ಚರಣ ಫೆ.14 ರಿಂದ 19ರ ವರೆಗೆ ವಡೋದರಾದಲ್ಲಿ ನಡೆದರೆ, ಬಳಿಕ ಬೆಂಗಳೂರಿನಲ್ಲಿ ಫೆ.21ರಿಂದ ಮಾ.1 ರವರೆಗೆ ಪಂದ್ಯಗಳು ನಡೆಯಲಿವೆ. ಮಾ.3ರಿಂದ 8ರ ವರೆಗೆ ಲಕ್ನೋದಲ್ಲಿ, ಮಾ.10ರಿಂದ 15ರವರೆಗೆ ಫೈನಲ್‌ ಸೇರಿ 4 ಪಂದ್ಯಗಳಿಗೆ ಮುಂಬೈ ಆತಿಥ್ಯ ವಹಿಸಲಿದೆ.

WPL 2025: ಗುಜರಾತ್‌ ಜೈಂಟ್ಸ್‌ಗೆ ಆಶ್ಲೀಗ್ ಗಾರ್ಡ್ನರ್ ನೂತನ ನಾಯಕಿ

Ashleigh Gardner

Profile Abhilash BC Feb 5, 2025 4:49 PM

ಅಹಮದಾಬಾದ್‌: ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌(WPL 2025) ಟೂರ್ನಿ ಇದೇ ಫೆ.14ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ ಮತ್ತು ಗುಜರಾತ್‌ ಜೈಂಟ್ಸ್‌(Gujarat Giants) ತಂಡಗಳು ಮುಖಾಮುಖಿಯಾಗಲಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಗುಜರಾತ್‌ ಜೈಂಟ್ಸ್‌ ತಂಡ ಬೆತ್‌ ಮೂನಿ ಬದಲು ಆಶ್ಲೀಗ್ ಗಾರ್ಡ್ನರ್(Ashleigh Gardner) ಅವರನ್ನು ತಂಡದ ನೂತನ ನಾಯಕಿಯಾಗಿ ನೇಮಕ ಮಾಡಿದೆ.

ಆಶ್ಲೀಗ್ ಗಾರ್ಡ್ನರ್ ಅವರು ಕಳೆದ ಎರಡು ವರ್ಷಗಳಿಂದ ಗುಜರಾತ್‌ ಜೈಂಟ್ಸ್‌ ತಂಡದ ಪ್ರಮುಖ ಭಾಗವಾಗಿದ್ದರೆ. ಎರಡು ಆವೃತ್ತಿಯಲ್ಲಿ ಒಟ್ಟು 324 ರನ್‌ ಮತ್ತು17 ವಿಕೆಟ್‌ಗಳನ್ನು ಪಡೆದಿದ್ದಾರೆ.

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಗಾರ್ಡ್ನರ್ ನಿರ್ಣಾಯಕ ಪಾತ್ರ ವಹಿಸಿದರು. 2023 ರ ದಕ್ಷಿಣ ಆಫ್ರಿಕಾದಲ್ಲಿ ನಡೆದ T20 ವಿಶ್ವಕಪ್‌ನಲ್ಲೂ ಇವರ ಕೊಡುಗೆ ಅಪಾರ ಪ್ರಮಾಣದ್ದಾಗಿತ್ತು.

'ಕಳೆದ ಎರಡು ವರ್ಷಗಳಿಂದ ತಂಡದ ಭಾಗವಾಗಿದ್ದ ನನಗೆ ಈ ಬಾರಿ ನಾಯಕತ್ವದ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಈ ಬಗ್ಗೆ ಖುಷಿ ಇದೆ. ಭಾರತೀಯ ಪ್ರತಿಭೆಗಳ ಜತೆಗೆ ವಿಶ್ವದ ಹಲವು ಯುವ ಮತ್ತು ಅನುಭವಿ ಆಟಗಾರ್ತಿಯರೊಂದಿಗೆ ಕೆಲಸ ಮಾಡಲು ಮತ್ತು ನಮ್ಮ ಅಭಿಮಾನಿಗಳಿಗೆ ಹೆಮ್ಮೆ ತರಲು ನಾನು ಎದುರು ನೋಡುತ್ತಿದ್ದೇನೆ' ಎಂದು ಆಶ್ಲೀಗ್ ಗಾರ್ಡ್ನರ್ ಹೇಳಿದರು.



ಈ ಬಾರಿ ಟೂರ್ನಿಯ 4 ನಗರದಲ್ಲಿ ನಡೆಯಲಿದೆ. ಮೊದಲ ಚರಣ ಫೆ.14 ರಿಂದ 19ರ ವರೆಗೆ ವಡೋದರಾದಲ್ಲಿ ನಡೆದರೆ, ಬಳಿಕ ಬೆಂಗಳೂರಿನಲ್ಲಿ ಫೆ.21ರಿಂದ ಮಾ.1 ರವರೆಗೆ ಪಂದ್ಯಗಳು ನಡೆಯಲಿವೆ. ಮಾ.3ರಿಂದ 8ರ ವರೆಗೆ ಲಕ್ನೋದಲ್ಲಿ, ಮಾ.10ರಿಂದ 15ರವರೆಗೆ ಫೈನಲ್‌ ಸೇರಿ 4 ಪಂದ್ಯಗಳಿಗೆ ಮುಂಬೈ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ WPL 2025: ಚಾಂಪಿಯನ್ ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾ ಸ್ಟಾರ್‌ಗಳು!

ಗುಜರಾತ್‌ ಜೈಂಟ್ಸ್‌ ತಂಡ

ಆಶ್ಲೀಗ್ ಗಾರ್ಡ್ನರ್ (ನಾಯಕ), ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ಕಶ್ವೀ ಗೌತಮ್, ಪ್ರಿಯಾ ಮಿಶ್ರಾ, ಮನ್ನತ್ ಕಶ್ಯಪ್, ಭಾರತಿ ಫುಲ್ಮಾಲಿ, ಸಯಾಲಿ ಸಿಮ್ರಾನ್ ಸತಾರೆ, ಡಿ ಸಿಮ್ರಾನ್ ಸತಾರೆ, ಡಿ. ಗಿಬ್ಸನ್, ಪ್ರಕಾಶಿಕಾ ನಾಯ್ಕ್