ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

yo-yo fitness Test: ಮತ್ತೆ ಯೋ-ಯೋ ಟೆಸ್ಟ್‌ ಜಾರಿಗೆ ಮುಂದಾದ ಬಿಸಿಸಿಐ!

yo-yo fitness Test: ಯೋ-ಯೋ ಟೆಸ್ಟ್‌ ಮಾತ್ರವಲ್ಲದೆ ಡೆಕ್ಸಾ ಪರೀಕ್ಷೆ ಕೂಡ ಕಡ್ಡಾಯ ಎನ್ನಲಾಗಿದೆ. ಡೆಕ್ಸಾ ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನವಾಗಿದೆ.

yo-yo fitness Test: ಮತ್ತೆ ಯೋ-ಯೋ ಟೆಸ್ಟ್‌ ಜಾರಿಗೆ ಮುಂದಾದ ಬಿಸಿಸಿಐ!

yo-yo fitness Test

Profile Abhilash BC Jan 16, 2025 4:50 PM

ಮುಂಬಯಿ, ಜ.16, 2025: ಟೀಮ್‌ ಇಂಡಿಯಾದ ಸತತ ಸೋಲಿನಿಂದ ಬೇಸತ್ತಿರುವ ಬಿಸಿಸಿಐ ಇದೀಗ ಆಟಗಾರರ ವಿರುದ್ಧ ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆಟಗಾರರ ಆಯ್ಕೆಗೆ ಮಾನದಂಡವಾಗಿರುವ ಯೋ-ಯೋ ಟೆಸ್ಟ್‌ ವಿಧಾನವನ್ನು ಮರಳಿ ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದ ವೇಳೆ ತಂಡದ ಆಯ್ಕೆಗೆ ಯೋ-ಯೋ ಟೆಸ್ಟ್‌ ಕಡ್ಡಾಯವಾಗಿತ್ತು. ಆದರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಈ ನಿಯಮವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ವಿಧಾನವನ್ನು ಮರಳಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.

ಕ್ರಿಕೆಟಿಗರ ಯೋ-ಯೋ ಟೆಸ್ಟ್‌ ಎಂದರೆ 23 ಹಂತಗಳ ಪರೀಕ್ಷೆ, ಕ್ರಿಕೆಟಿಗರಿಗೆ 5ನೇ ಹಂತದಿಂದ ಆರಂಭ, ಒಬ್ಬ ಕ್ರಿಕೆಟಿಗ 20 ಪ್ಲಸ್‌ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸಬೇಕು. ಹಂತಗಳ ಸಂಖ್ಯೆ ಹೆಚ್ಚಿದಂತೆ ದೂರವನ್ನು ಕ್ರಮಿಸುವ ಸಮಯ ಕಡಿಮೆಯಾಗುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ. ಇದನ್ನು ಇದು ಯೋ-ಯೋ ಎಂದು ಕರೆಯುತ್ತಾರೆ.

ಶುಭಮನ್‌ ಗಿಲ್‌, ರವೀಂದ್ರ ಜಡೇಜ, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಸೇರಿ ಮೊದಲಾದ ಕ್ರಿಕೆಟಿಗರು ಫಿಟ್‌ನೆಸ್‌ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ಪದೇಪದೆ ಗಾಯಗೊಂಡು ತಂಡದಿಂದ ಹೊರಗುಳಿಯುತ್ತಿದ್ದಾರೆ.

ಇದನ್ನೂ ಓದಿ Champions Trophy schedule: ಫೆ 23ಕ್ಕೆ ಭಾರತ-ಪಾಕ್‌ ಪಂದ್ಯ, ಚಾಂಪಿಯನ್ಸ್‌ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ!

ಯೋ-ಯೋ ಟೆಸ್ಟ್‌ ಮಾತ್ರವಲ್ಲದೆ ಡೆಕ್ಸಾ ಪರೀಕ್ಷೆ ಕೂಡ ಕಡ್ಡಾಯ ಎನ್ನಲಾಗಿದೆ. ಡೆಕ್ಸಾ ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯ. ಇಲ್ಲಿ ನಡೆಸಲಾಗುವ ಎಕ್ಸ್‌-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷದಲ್ಲಿ ನಡೆಯುವ ಪರೀಕ್ಷೆಯಾಗಿದೆ.