ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yuzvendra Chahal: ವಿಚ್ಛೇದನ ಊಹಾಪೋಹ ಮಧ್ಯೆ ಚಹಲ್‌ ರಹಸ್ಯ ಪೋಸ್ಟ್‌!

Yuzvendra Chahal: 2023ರಲ್ಲಿಯೇ ಧನಶ್ರೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 'ಧನಶ್ರಿ ಚಹಲ್‌' ಎಂದು ಇದ್ದ ಹೆಸರಿನಿಂದ ಚಹಲ್‌ ಎಂಬ ಹೆಸರನ್ನು ತೆಗೆದು ಹಾಕಿದ್ದರು. ಅದಾಗಲೇ ಈ ಜೋಡಿಯ ವಿಚ್ಛೇದನ ವರದಿಗಳು ಹರಿದಾಡಿತ್ತು

ಮುಂಬಯಿ: ಟೀಮ್‌ ಇಂಡಿಯಾದ ಆಟಗಾರ ಯಜುವೇಂದ್ರ ಚಹಲ್‌ ಹಾಗೂ ಪತ್ನಿ ಧನಶ್ರಿ ವರ್ಮ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಶನಿವಾರ ಕೆಲವು ಮಾಧ್ಯಮಗಳು ಸುದ್ದಿ ಪ್ರಕಟಿಸಿತ್ತು. ಇಬ್ಬರು ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫೋಲೊ ಮತ್ತು ಪತ್ನಿಯ ಫೋಟೊವನ್ನು ಚಹಲ್‌ ಡಿಲೀಟ್‌ ಮಾಡಿದ್ದು ಇವರಿಬ್ಬರ ವಿಚ್ಛೇದನಕ್ಕೆ ಪುಷ್ಠಿ ನೀಡಿತ್ತು. ಇದರ ಬೆನ್ನಲ್ಲೇ ಚಹಲ್‌ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಾಕಿ ಡಿವೋರ್ಸ್‌ನ ಸುಳಿವು ಬಿಟ್ಟುಕೊಟ್ಟಿದ್ದಾರೆ.
'ಕಠಿಣ ಪರಿಶ್ರಮವು ಜನರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ಗೊತ್ತಿರುತ್ತದೆ. ನಿಮ್ಮ ನೋವು ನಿಮಗೆ ಗೊತ್ತಿರುತ್ತದೆ. ಈ ಹಂತಕ್ಕೇರಲು ನೀವು ಏನೆಲ್ಲಾ ಮಾಡಿದ್ದೀರ ಎನ್ನುವುದು ನಿಮಗೆ ಹಾಗೂ ಜಗತ್ತಿಗೆ ಗೊತ್ತಿದೆ. ನೀವು ನಿಮ್ಮ ತಂದೆ-ತಾಯಿ ಹೆಮ್ಮೆಪಡುವಂತೆ ಮಾಡಲು ಸಾಕಷ್ಟು ಬೆವರು ಹರಿಸಿರುತ್ತೀರ. ಯಾವಾಗಲೂ ಹೆಮ್ಮೆಯ ಮಗನಾಗಿಲು ಬಯಸುತ್ತೇನೆ' ಎಂದು ಯುಜುವೇಂದ್ರ ಚಹಲ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2023ರಲ್ಲಿಯೇ ಧನಶ್ರೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 'ಧನಶ್ರಿ ಚಹಲ್‌' ಎಂದು ಇದ್ದ ಹೆಸರಿನಿಂದ ಚಹಲ್‌ ಎಂಬ ಹೆಸರನ್ನು ತೆಗೆದು ಹಾಕಿದ್ದರು. ಅದಾಗಲೇ ಈ ಜೋಡಿಯ ವಿಚ್ಛೇದನ ವರದಿಗಳು ಹರಿದಾಡಿತ್ತು. ಈ ವೇಳೆ ಚಹಲ್‌ ಮತ್ತು ಧನಶ್ರಿ ಈ ವರದಿಗಳನ್ನು ತಳ್ಳಿ ಹಾಕಿದ್ದರು, ನಾವಿಬ್ಬರೂ ಜತೆಯಾಗಿದ್ದೇವೆ ಯಾವುದೇ ಸುಳ್ಳು ವರದಿಗಳನ್ನು ನಂಬಬೇಡಿ ಮತ್ತು ಹರಡಬೇಡಿ ಎಂದಸು ಮನವಿ ಮಾಡಿದ್ದರು. ಆದರೆ ಈ ಬಾರಿ ಇವರಿಬ್ಬರು ದೂರ ಆಗುತ್ತಿರುವುದು ಬಹುತೇಕ ಖಚಿತವಾದಂತಿದೆ. ಅಧಿಕೃತವಾಗಿ ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಕೊರೊನ ಲಾಕ್‌ಡೌನ್‌ ಸಮಯದಲ್ಲಿ ನೃತ್ಯಪಟುವಾಗಿದ್ದ ಧನಶ್ರೀ ಅವರಿಂದ ಆನ್‌ಲೈನ್‌ ಮೂಲಕ ಡ್ಯಾನ್ಸ್‌ ಕಲಿಯಲು ಆರಂಭಿಸಿ ಪ್ರೀತಿಯಲ್ಲಿ ಬಿದ್ದಿದ್ದ ಚಹಲ್‌, 2020ರ ಡಿಸೆಂಬರ್‌ 22ರಂದು ವಿವಾಹವಾಗಿದ್ದರು.
ಕಳೆದ ವರ್ಷ ನಡೆದಿದ್ದ ಐಪಿಎಲ್‌ ಮೆಗಾ ಹರಾಜಿನಲ್ಲಿ ಚಹಲ್‌18 ಕೋಟಿ ರೂ. ಪಡೆದು ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದರು. ಇದುವರೆಗೆ 160 ಐಪಿಎಲ್‌ ಪಂದ್ಯಗಳನ್ನಾಡಿ 205 ವಿಕೆಟ್‌ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್‌ ತಂಡದ ಪರ ಆಡಿದ್ದರು. ಇದುವರೆಗೆ ಭಾರತ ಪರ ಚಹಲ್‌ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ.