ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ವಿರಾಟ್‌ ಕೊಹ್ಲಿ or ಸಚಿನ್‌ ತೆಂಡೂಲ್ಕರ್‌ ನಡುವೆ ಬೆಸ್ಟ್‌ ಒಡಿಐ ಆಟಗಾರನನ್ನು ಆರಿಸಿದ ಸಂಜಯ್‌ ಮಾಂಜ್ರೇಕರ್‌!

Sanajay manjrekar on Best ODI Player: ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಇಬ್ಬರೂ ಕೂಡ ದಿಗ್ಗಜ ಆಟಗಾರರು. ಈ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಅಂದ ಹಾಗೆ ಇತ್ತೀಚೆಗೆ ಕೊಹ್ಲಿ ಮತ್ತು ಸಚಿನ್‌ ಅವರ ಪೈಕಿ ಯಾರು ಅತ್ಯುತ್ತಮ ಒಡಿಐ ಆಟಗಾರ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ತಮ್ಮದೇ ಉತ್ತರವನ್ನು ನೀಡಿದ್ದಾರೆ.

ಕೊಹ್ಲಿ-ಸಚಿನ್‌ ನಡುವೆ ಬೆಸ್ಟ್‌ ಒಡಿಐ ಆಟಗಾರನನ್ನು ಆರಿಸಿದ ಮಾಂಜ್ರೇಕರ್‌!

ಸಚಿನ್‌ ತೆಂಡೂಲ್ಕರ್‌-ವಿರಾಟ್‌ ಕೊಹ್ಲಿ

Profile Ramesh Kote Mar 1, 2025 3:17 PM

ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ಮಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ಗ ಕೊಹ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಇವರಿಬ್ಬರ ನಡುವೆ ಅತ್ಯುತ್ತಮ ಏಕದಿನ ಆಟಗಾರ ಯಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಂತೆ ಭಾರತದ ತಂಡದ ಮಾಜಿ ಆಟಗಾರ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಅವರು ಕೂಡ ಇದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸಂಜಯ್‌ ಮಾಂಜ್ರೇಕರ್‌, ಸಚಿನ್‌ ತೆಂಡೂಲ್ಕರ್‌ ಅವರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಸಾಕಷ್ಟು ಅನುಕೂಲಗಳು ಇದ್ದವು. ಆದರೆ, ವಿರಾಟ್‌ ಕೊಹ್ಲಿ ಸರಿಸಾಟಿಯಿಲ್ಲದ ಗುರಿಗಳನ್ನು ಚೇಸ್‌ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಚೇಸಿಂಗ್‌ ಸಂದರ್ಭಗಳಲ್ಲಿ ವಿರಾಟ್‌ ಕೊಹ್ಲಿ 105 ಪಂದ್ಯಗಳನ್ನು ಆಡಿದ್ದಾರೆ ಹಾಗೂ 5,913 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು 96.74ರ ಸರಾಸರಿಯನ್ನು ಹೊಂದಿದ್ದಾರೆ. ಆದರೆ, ಸಚಿನ್‌ ತೆಂಡೂಲ್ಕರ್‌ ಅವರು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ 127 ಪಂದ್ಯಗಳಿಂದ 55.45ರ ಸರಾಸರಿ ಮತ್ತು 90.08ರ ಸ್ಟ್ರೈಕ್‌ ರೇಟ್‌ನಲ್ಲಿ 5,490 ರನ್‌ಗಳನ್ನು ಕಲೆ ಹಾಕಿದ್ದಾರೆ.

ICC ODI Rankings: ಅಗ್ರ ಐದರೊಳಗೆ ಲಗ್ಗೆಯಿಟ್ಟ ವಿರಾಟ್‌ ಕೊಹ್ಲಿ, ಅಗ್ರ ಸ್ಥಾನದಲ್ಲಿ ಶುಭಮನ್‌ ಗಿಲ್‌!

"ಸಚಿನ್‌ ತೆಂಡೂಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ನಡುವೆ ದೊಡ್ಡ ವ್ಯತ್ಯಾಸವನ್ನು ನಾವು ನೋಡುವುದಾದರೆ, ಕೊಹ್ಲಿ ಚೇಸಿಂಗ್‌ನಲ್ಲಿ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ತೆಂಡೂಲ್ಕರ್‌ ಮೊದಲು ಬ್ಯಾಟ್‌ ಮಾಡಲು ಇಷ್ಟಪಡುತ್ತಿದ್ದರು, ಆದರೆ, ವಿರಾಟ್‌ ಕೊಹ್ಲಿ ಚೇಸ್‌ ಮಾಡಲು ಬಯಸುತ್ತಿದ್ದರು ಎಂದು ಭಾವಿಸಬಹುದು. ಹೊಸ ಚೆಂಡಿನಲ್ಲಿ ಔಟ್‌ ಆಗುವುದಿಲ್ಲ ಎಂದು ಸಚಿನ್‌ ಹೇಳಿರಬಹುದು. ಆದರೆ, ಪಂದ್ಯಗಳನ್ನು ಗೆಲ್ಲಿಸುವ ವಿಚಾರದಲ್ಲಿ ಕೊಹ್ಲಿ ಮುಂದಿದ್ದಾರೆ," ಎಂದು ಸಂಜಯ್‌ ಮಾಂಜ್ರೇಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ವಿರಾಟ್‌ ಕೊಹ್ಲಿ ಸಾಕಷ್ಟು ಪಂದ್ಯಗಳಲ್ಲಿ ತಂಡವನ್ನು ಚೇಸಿಂಗ್‌ ಸಮಯದಲ್ಲಿ ಗೆಲ್ಲಿಸಿದ್ದಾರೆ. ಏಕೆಂದರೆ ಅವರು ಕೊನೆಯವರೆಗೂ ಅಜೇಯರಾಗಿ ಉಳಿದಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಅವರು ಕೆಲ ಪಂದ್ಯಗಳಲ್ಲಿ ತಂಡವನ್ನು ಚೇಸಿಂಗ್‌ ವೇಳೆ ಗೆಲ್ಲಿಸಿರಬಹುದು. ಆದರೆ, ವಿರಾಟ್‌ ಕೊಹ್ಲಿಯಷ್ಟು ಸಂಖ್ಯೆಗಳನ್ನು ಅವರು ಹೊಂದಿಲ್ಲ. ಇದನ್ನು ಹೊರತುಪಡಿಸಿ ವಿರಾಟ್‌ ಕೊಹ್ಲಿಗಿಂತ ಸಚಿನ್‌ ತೆಂಡೂಲ್ಕರ್‌ ಮುಂದಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಕ್ರಿಕೆಟ್ ದೇವರಿಗಿಂತ ಉತ್ತಮವಾಗಿರುವ ಒಂದು ಅಂಶವೆಂದರೆ, ರನ್‌ಗಳನ್ನು ಚೇಸ್‌ ಮಾಡುವುದು, ”ಎಂದು ಅವರು ತಿಳಿಸಿದ್ದಾರೆ.

ಸಚಿನ್‌ರ ಒಡಿಐ ಶತಕಗಳ ದಾಖಲೆ ಮುರಿದಿದ್ದ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ವಿರಾಟ್‌ ಕೊಹ್ಲಿ ಮುಂದಿಕ್ಕಿದ್ದಾರೆ. ಪಾಕಿಸ್ತಾನದ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ತಮ್ಮ 51ನೇ ಶತಕವನ್ನು ಪೂರ್ಣಗೊಳಿಸಿದ್ದರು. ಆದರೆ, ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರು 49 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ವಿರಾಟ್‌ ಕೊಹ್ಲಿ ರನ್‌ ಚೇಸ್‌ ಮಾಡುವ ವೇಳೆ 24 ಶತಕಗಳನ್ನು ಸಿಡಿಸಿದ್ದಾರೆಂಬುದು ವಿಶೇಷ.

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಹಾಗೂ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ವಿರಾಟ್‌ ಕೊಹ್ಲಿ, ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದೀಗ ಅವರು ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.