ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ICC ODI Rankings: ಅಗ್ರ ಐದರೊಳಗೆ ಲಗ್ಗೆಯಿಟ್ಟ ವಿರಾಟ್‌ ಕೊಹ್ಲಿ, ಅಗ್ರ ಸ್ಥಾನದಲ್ಲಿ ಶುಭಮನ್‌ ಗಿಲ್‌!

ICC ODI Rankings: ಪಾಕಿಸ್ತಾನ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಐಸಿಸಿ ಪ್ರಕಟಿಸಿದ ಪರಿಷ್ಕೃತ ಒಡಿಐ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ ಐದರೊಳಗೆ ಪ್ರವೇಶ ಮಾಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಡ್ಯಾರಿಲ್‌ ಮಿಚೆಲ್‌ ಅವರನ್ನು ಹಿಂದಿಕ್ಕಿ ಕೊಹ್ಲಿ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ICC ODI Rankings: ಅಗ್ರ ಐದರೊಳಗೆ ಪ್ರವೇಶಿಸಿದ ವಿರಾಟ್‌ ಕೊಹ್ಲಿ!

ಒಡಿಐ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ ಐದಕ್ಕೇರಿದ ವಿರಾಟ್‌ ಕೊಹ್ಲಿ.

Profile Ramesh Kote Feb 26, 2025 3:54 PM

ನವದೆಹಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಐಸಿಸಿ (ICC ODI Rankings) ಪ್ರಕಟಿಸಿದ ಪರಿಷ್ಕೃತ ಒಡಿಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಐದರೊಳಗೆ ಪ್ರವೇಶ ಮಾಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ್ದರ ಫಲವಾಗಿ ವಿರಾಟ್‌ ಕೊಹ್ಲಿ (Virat Kohli) ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಸುಧಾರಣೆಯನ್ನು ಕಂಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ ಅವರನ್ನು ಹಿಂದಿಕ್ಕಿ ವಿರಾಟ್‌ ಕೊಹ್ಲಿ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೂ ಮುನ್ನ ವಿರಾಟ್‌ ಕೊಹ್ಲಿ ಆರನೇ ಸ್ಥಾನದಲ್ಲಿದ್ದರು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫಾರ್ಮ್‌ಗೆ ಮರಳುವ ಮೂಲಕ ವಿರಾಟ್‌ ಕೊಹ್ಲಿ ಒಡಿಐ ಶ್ರೇಯಾಂಕದಲ್ಲಿ ಒಂದು ಸ್ಥಾನದಲ್ಲಿ ಜಿಗಿತ ಕಂಡಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳ ಎದುರಿನ ಪಂದ್ಯದಲ್ಲಿ 242 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತದ ಪರ ವಿರಾಟ್‌ ಕೊಹ್ಲಿ(100*) ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು.

Shubman Gill: ಭಾರತದ ಭವಿಷ್ಯದ ವಿರಾಟ್‌ ಕೊಹ್ಲಿಯನ್ನು ಹೆಸರಿಸಿದ ಮೊಹಮ್ಮದ್‌ ಹಫೀಝ್‌!

ಅಗ್ರ ಸ್ಥಾನದಲ್ಲಿಯೇ ಉಳಿದ ವಿರಾಟ್‌ ಕೊಹ್ಲಿ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 46 ರನ್‌ ಗಳಿಸಿದ್ದ ವಿರಾಟ್‌ ಕೊಹ್ಲಿ ಐಸಿಸಿ ಒಡಿಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ವಿರುದ್ಧ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬಾಬರ್‌ ಆಝಮ್‌ ಎರಡನೇ ಸ್ಥಾನದಲ್ಲಿಯೇ ಉಳಿದಿದ್ದಾರೆ. ಶುಭಮನ್‌ ಗಿಲ್‌ 817 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಬಾಬರ್‌ ಆಝಮ್‌ಗಿಂತ ಗಿಲ್‌ 47 ಕಡಿಮೆ ಅಂಕಗಳನ್ನು ಹೊಂದಿದ್ದಾರೆ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದೀಗ ಅಗ್ರ ಐದರಲ್ಲಿ ಭಾರತದ ಮೂರು ಮಂದಿ ಬ್ಯಾಟ್ಸ್‌ಮನ್‌ಗಳು ಕಾಣಿಸಿಕೊಂಡಿದ್ದಾರೆ.

ಬಾಬರ್‌ ಆಝಮ್‌ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ 90 ಎಸೆತಗಳಲ್ಲಿ 64 ರನ್‌ಗಳನ್ನು ಗಳಿಸಿದ್ದರು. ನಂತರ ಭಾರತದ ವಿರುದ್ಧ ಅವರು 23 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ಈ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು ಹಾಗೂ ಸೆಮಿಫೈನಲ್‌ಗೆ ಪ್ರವೇಶ ಮಾಡಿತ್ತು.

IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

ಐಸಿಸಿ ಒಡಿಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದ ಅಗ್ರ ಐವರು

  1. ಶುಭಮನ್ ಗಿಲ್ (ಭಾರತ) - 817 ಅಂಕಗಳು
  2. ಬಾಬರ್ ಅಜಮ್ (ಪಾಕಿಸ್ತಾನ) - 757 ಅಂಕಗಳು
  3. ರೋಹಿತ್ ಶರ್ಮಾ (ಭಾರತ) - 757 ಅಂಕಗಳು
  4. ಹೆನ್ರಿಚ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) - 743 ಅಂಕಗಳು
  5. ವಿರಾಟ್ ಕೊಹ್ಲಿ (ಭಾರತ) - 743 ಅಂಕಗಳು

ಇನ್ನು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ 679 ಅಂಕಗಳೊಂದಿಗೆ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಕೆಎಲ್‌ ರಾಹುಲ್‌ 627 ಅಂಕಗಳನ್ನು ಕಲೆ ಹಾಕಿ 15ನೇ ಸ್ಥಾನದಲ್ಲಿದ್ದಾರೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ ತಂಡ, ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅಧಿಕೃತವಾಗಿ ಪ್ರವೇಶ ಮಾಡಿದೆ. ತಮ್ಮ ಅದ್ಭುತ ಫಾರ್ಮ್‌ ಅನ್ನು ಮುಂದಿನ ಪಂದ್ಯಗಳಲ್ಲಿ ಮುಂದುವರಿಸಲು ವಿರಾಟ್‌ ಕೊಹ್ಲಿ ಮತ್ತು ಶುಭಮನ್‌ ಗಿಲ್‌ ಎದುರು ನೋಡುತ್ತಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಪಂದ್ಯ ಮಾರ್ಚ್‌ 2 ರಂದು ನಡೆಯಲಿದೆ.