ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆಜಾನ್ ಪೇ ಗಿಫ್ಟ್ ಕಾರ್ಡ್ಸ್ ವತಿಯಿಂದ ರಕ್ಷಾಬಂಧನ ಹಬ್ಬದ ವಿಶೇಷ ಆಫರ್‌ ಘೋಷಣೆ

ಹುಟ್ಟುಹಬ್ಬ, ವಿವಾಹ ಮತ್ತು ದೀಪಾವಳಿಯಂತೆಯೇ ರಕ್ಷಾಬಂಧನವು ಭಾರತದ ಅತ್ಯಂತ ದೊಡ್ಡ ಉಡುಗೊರೆ ವಿನಿಮಯದ ಹಬ್ಬಗಳಲ್ಲಿ ಒಂದಾಗಿದೆ. ದೇಶದ 13 ಪ್ರಮುಖ ನಗರಗಳಲ್ಲಿ ಅಮೆಜಾನ್ ಪೇ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿಯೊಂದು ಉಡುಗೊರೆಯ ಹಿಂದೆಯೂ ಗಾಢವಾದ ಭಾವನೆ ಗಳಿರುತ್ತವೆ, ಆದರೆ ಆ ಭಾವನೆಗೆ ತಕ್ಕಂತೆ ಪರಿಪೂರ್ಣ ಉಡುಗೊರೆಯನ್ನು ಆಯ್ಕೆ ಮಾಡುವುದು ಇಂದಿಗೂ ಸವಾಲಿನ ಕೆಲಸವಾಗಿದೆ

ಬೆಂಗಳೂರು: ಅಮೆಜಾನ್ ಪೇ ಗಿಫ್ಟ್ ಕಾರ್ಡ್ಸ್ ಸಂಸ್ಥೆಯು ರಕ್ಷಾಬಂಧನ ಹಬ್ಬದ ಪ್ರಯುಕ್ತ ಇಂದು ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ್ದು, ಇದರಲ್ಲಿ ಅದೇ ದಿನ ಮತ್ತು ಮರುದಿನದ ಡೆಲಿವರಿ ಸೌಲಭ್ಯವಿರುವ ಪ್ರೀಮಿಯಂ ರಾಖಿ ಗಿಫ್ಟ್ ಬಾಕ್ಸ್ ಒಳಗೊಂಡ ಫಿಸಿಕಲ್ ಗಿಫ್ಟ್ ಕಾರ್ಡ್‌ಗಳು ಪ್ರಮುಖ ಆಕರ್ಷಣೆಯಾಗಿವೆ.

ಈ ಹಬ್ಬದ ವಿಶೇಷ ಸರಣಿಯಲ್ಲಿ ಫಿಸಿಕಲ್ ಕಾರ್ಡ್‌ ಗಳ ಮೇಲೆ ಶೇ. 5ರವರೆಗೆ ಕ್ಯಾಶ್‌ಬ್ಯಾಕ್, ಇ-ಗಿಫ್ಟ್ ಕಾರ್ಡ್‌ ಗಳ ಮೇಲೆ ₹150 ವರೆಗೆ ರಿಯಾಯಿತಿ, ಜನರೇಟಿವ್ ಎಐ ಆಧಾರಿತ ಅತ್ಯಾಧುನಿಕ ವೈಯಕ್ತೀಕರಣ ಸೌಲಭ್ಯಗಳು ಹಾಗೂ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಿತಿಯಿಲ್ಲದ ಫ್ಲಾಟ್ ಶೇ. 2ರಷ್ಟು ಕ್ಯಾಶ್‌ ಬ್ಯಾಕ್ ಕೊಡುಗೆಗಳು ಸೇರಿವೆ.

ಗಿಫ್ಟ್ ಕಾರ್ಡ್‌ ಗಳ ಮೌಲ್ಯ ಕೇವಲ ₹10 ರಿಂದ ಆರಂಭವಾಗಲಿದ್ದು, ಫ್ಯಾಷನ್, ಎಲೆಕ್ಟ್ರಾನಿಕ್ಸ್, ದಿನಸಿ ಮತ್ತು ಗೇಮಿಂಗ್ ಸೇರಿದಂತೆ ಅಮೆಜಾನ್‌ ನ 15 ಕೋಟಿಗೂ ಅಧಿಕ ಉತ್ಪನ್ನಗಳು ಮತ್ತು 20,000ಕ್ಕೂ ಹೆಚ್ಚು ಪಾಲುದಾರ ಆ್ಯಪ್‌ಗಳಲ್ಲಿ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.

ಹುಟ್ಟುಹಬ್ಬ, ವಿವಾಹ ಮತ್ತು ದೀಪಾವಳಿಯಂತೆಯೇ ರಕ್ಷಾಬಂಧನವು ಭಾರತದ ಅತ್ಯಂತ ದೊಡ್ಡ ಉಡುಗೊರೆ ವಿನಿಮಯದ ಹಬ್ಬಗಳಲ್ಲಿ ಒಂದಾಗಿದೆ. ದೇಶದ 13 ಪ್ರಮುಖ ನಗರಗಳಲ್ಲಿ ಅಮೆಜಾನ್ ಪೇ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿಯೊಂದು ಉಡುಗೊರೆಯ ಹಿಂದೆಯೂ ಗಾಢವಾದ ಭಾವನೆಗಳಿರುತ್ತವೆ, ಆದರೆ ಆ ಭಾವನೆಗೆ ತಕ್ಕಂತೆ ಪರಿಪೂರ್ಣ ಉಡುಗೊರೆಯನ್ನು ಆಯ್ಕೆ ಮಾಡುವುದು ಇಂದಿಗೂ ಸವಾಲಿನ ಕೆಲಸವಾಗಿದೆ.

ಇದನ್ನೂ ಓದಿ: Bangalore News: ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ

ಅಧ್ಯಯನದಲ್ಲಿ ಪಾಲ್ಗೊಂಡ ಮೂರನೇ ಒಂದಕ್ಕಿಂತ ಹೆಚ್ಚು ಮಂದಿ ಸಮಯದ ಅಭಾವ ಅಥವಾ ಸೂಕ್ತ ಉಡುಗೊರೆಯನ್ನು ಹುಡುಕುವಲ್ಲಿನ ಕಷ್ಟವನ್ನು ವ್ಯಕ್ತಪಡಿಸಿದ್ದಾರೆ. ಒಡಹುಟ್ಟಿದವರ ಹಬ್ಬಗಳಿಗೆ ನಗದು ಹಣ ನೀಡುವುದು ಬಹಳ ಹಿಂದಿನಿಂದಲೂ ಸುಲಭ ಮತ್ತು ಎಲ್ಲರೂ ಒಪ್ಪುವ ಸಹಜ ಆಯ್ಕೆಯಾಗಿದೆ. ಗಿಫ್ಟ್ ಕಾರ್ಡ್‌ ಗಳು ಇದಕ್ಕೆ ಅತ್ಯುತ್ತಮ ಪರ್ಯಾಯವಾಗಿದ್ದು, ನಗದಿನಷ್ಟೇ ಸರಳತೆಯ ಜೊತೆಗೆ ಉಡುಗೊರೆಗೆ ಹೆಚ್ಚು ಆತ್ಮೀಯತೆಯನ್ನು ತುಂಬುತ್ತವೆ.

ಈ ಕುರಿತು ಅಮೆಜಾನ್ ಪೇ ಸಂಸ್ಥೆಯ ಸ್ಟೋರ್ಡ್ ವ್ಯಾಲ್ಯೂ ಮತ್ತು ಗಿಫ್ಟಿಂಗ್ ವಿಭಾಗದ ನಿರ್ದೇಶಕ ರಾದ ನೇಹಾ ಗುಪ್ತಾ ಮಹಾತಮೆ ಅವರು , "ಪ್ರತಿಯೊಂದು ರಾಖಿ ಉಡುಗೊರೆಯೂ ಕೇವಲ ಕೊನೆ ಕ್ಷಣದಲ್ಲಿ ನೀಡುವ ನಗದು ಹಣದ ಲಕೋಟೆಗಿಂತ ಮಿಗಿಲಾಗಿರಬೇಕು ಎಂದು ನಾವು ನಂಬುತ್ತೇವೆ. ಈ ನೂತನ ಬಿಡುಗಡೆಯ ಮೂಲಕ, ಉಡುಗೊರೆಯನ್ನು ಕೈಯಾರೆ ಬಿಚ್ಚಿ ಸಂಭ್ರಮಿಸುವ ಖುಷಿ ಮತ್ತು ತಮಗೆ ಬೇಕಾದ್ದನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಒಗ್ಗೂಡಿಸಿದ್ದೇವೆ. ಜೊತೆಗೆ ಪ್ರತಿಯೊಂದು ಕಾರ್ಡ್ ವಿಶಿಷ್ಟವಾಗಿರಲು ಎಐ-ಚಾಲಿತ ವೈಯಕ್ತೀಕರಣವನ್ನು ಅಳವಡಿಸ ಲಾಗಿದೆ. ಇದು ಯಾವುದೇ ಗೊಂದಲ, ಒತ್ತಡವಿಲ್ಲದೆ ಅತ್ಯಂತ ಅರ್ಥಪೂರ್ಣವಾಗಿ ಉಡುಗೊರೆ ನೀಡುವ ಸುಂದರ ಅನುಭವವಾಗಿದೆ" ಎಂದು ತಿಳಿಸಿದ್ದಾರೆ.

ಈ ಬಾರಿಯ ರಕ್ಷಾಬಂಧನಕ್ಕೆ ಫಿಸಿಕಲ್ ಗಿಫ್ಟ್ ಕಾರ್ಡ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರೀಮಿಯಂ ರಾಖಿ ಗಿಫ್ಟ್ ಬಾಕ್ಸ್‌ ಗಳಲ್ಲಿ ನೀಡಲಾಗುತ್ತಿದ್ದು, ಇದು ಸಹೋದರ-ಸಹೋದರಿಯರು ಉಡುಗೊರೆಯನ್ನು ಕೈಯಲ್ಲಿ ಹಿಡಿದು ಬಿಚ್ಚಿ ಆನಂದಿಸುವ ಅನುಭವ ನೀಡುತ್ತದೆ. ಕೊನೆ ಗಳಿಗೆ ಯಲ್ಲಿ ಖರೀದಿಸುವವರಿಗಾಗಿ ಅದೇ ದಿನದ ಡೆಲಿವರಿ ಹಾಗೂ ಮುಂಚಿತವಾಗಿ ಯೋಜಿಸುವವರಿಗಾಗಿ ಆಯ್ದ ನಗರಗಳು ಮತ್ತು ನಿರ್ದಿಷ್ಟ ಪಿನ್‌ ಕೋಡ್‌ ಗಳಲ್ಲಿ ಮರುದಿನದ ಡೆಲಿವರಿ ಸೌಲಭ್ಯ ಕಲ್ಪಿಸ ಲಾಗಿದ್ದು, ಉಡುಗೊರೆಗಳು ಸರಿಯಾದ ಸಮಯಕ್ಕೆ ತಲುಪುವುದನ್ನು ಖಚಿತಪಡಿಸ ಲಾಗುತ್ತದೆ. ಗ್ರಾಹಕರು ಫಿಸಿಕಲ್ ಗಿಫ್ಟ್ ಕಾರ್ಡ್ ಖರೀದಿಗಳ ಮೇಲೆ ಗರಿಷ್ಠ ಶೇ. 5ರಷ್ಟು* ಉಳಿತಾಯ ಮಾಡಬಹು ದಾಗಿದೆ.

ಇ-ಗಿಫ್ಟ್ ಕಾರ್ಡ್‌ ಗಳನ್ನು ವಾಟ್ಸಾಪ್ ಅಥವಾ ಇಮೇಲ್ ಮುಖಾಂತರ ತಕ್ಷಣವೇ ರವಾನಿಸ ಬಹುದಾಗಿದ್ದು, ಖರೀದಿಗಳ ಮೇಲೆ ₹150 ವರೆಗೆ ಕ್ಯಾಶ್‌ ಬ್ಯಾಕ್* ಪಡೆಯುವ ಅವಕಾಶವಿದೆ. ರಕ್ಷಾಬಂಧನಕ್ಕಾಗಿ ಪರಿಚಯಿಸಲಾದ ನೂತನ ವೈಯಕ್ತೀಕರಣ ಸೌಲಭ್ಯಗಳು ಇಂತಿವೆ:

  • ಫೋಟೋ ಅಪ್‌ಲೋಡ್: ಒಡಹುಟ್ಟಿದವರ ನೆಚ್ಚಿನ ಫೋಟೋವನ್ನು ಸೇರಿಸಿ ಕಸ್ಟಮೈಸ್ಡ್ ಕಾರ್ಡ್ ಸಿದ್ಧಪಡಿಸಬಹುದು. ಅಪ್‌ ಲೋಡ್ ಮಾಡಿದ ಫೋಟೋಗಳನ್ನು ಕೇವಲ ಕಾರ್ಡ್ ವಿನ್ಯಾಸಕ್ಕೆ ಮಾತ್ರ ಬಳಸಲಾಗುವುದು ಮತ್ತು ಅಮೆಜಾನ್‌ನ ಗೌಪ್ಯತಾ ನಿಯಮಾವಳಿಗಳ ಅನ್ವಯ ಅತ್ಯಂತ ಸುರಕ್ಷಿತವಾಗಿ ನಿರ್ವಹಿಸಲಾಗುತ್ತದೆ.
  • ರಾಖಿ-ಥೀಮ್ ಆಧಾರಿತ ಅನಿಮೇಟೆಡ್ ವಿನ್ಯಾಸಗಳು: ಹಬ್ಬದ ಸಂಭ್ರಮಕ್ಕೆಂದೇ ವಿಶೇಷವಾಗಿ ರೂಪಿಸಲಾದ ಆಕರ್ಷಕ ಅನಿಮೇಟೆಡ್ ವಿನ್ಯಾಸಗಳು.
  • ಎಐ-ಜನರೇಟೆಡ್ ವಿನ್ಯಾಸಗಳು: ಉಡುಗೊರೆ ಸ್ವೀಕರಿಸುವವರ ಆಸಕ್ತಿ ಮತ್ತು ವ್ಯಕ್ತಿತ್ವಕ್ಕೆ ಹೊಂದುವಂತೆ ಜೆನ್ ಎಐ ತಂತ್ರಜ್ಞಾನದ ಮೂಲಕ ರೂಪಿಸಲಾದ ಡಿಜಿಟಲ್ ದೃಶ್ಯ ವಿನ್ಯಾಸಗಳು.

ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಶೇಷ: ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಈ ರಕ್ಷಾಬಂಧನದ ಸಂದರ್ಭದಲ್ಲಿ ಮಾಡುವ ಪ್ರತಿಯೊಂದು ಗಿಫ್ಟ್ ಕಾರ್ಡ್ ಖರೀದಿಯ ಮೇಲೂ ಫ್ಲಾಟ್ ಶೇ. 2ರಷ್ಟು ಮಿತಿಯಿಲ್ಲದ (ಅನ್‌ ಲಿಮಿಟೆಡ್) ಕ್ಯಾಶ್‌ ಬ್ಯಾಕ್* ಪಡೆಯಲಿದ್ದಾರೆ.