ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Nit: ಜೀವನವನ್ನೇ ಹಾಳು ಮಾಡುತ್ತದೆ ನಿಮ್ಮ ಹೆಂಡತಿಯಲ್ಲಿರುವ ಈ ಗುಣಗಳು

ಚಾಣಕ್ಯ ನೀತಿ ನಮ್ಮ ಜೀವನವನ್ನು ನಡೆಸಲು ಸರಿಯಾದ ಮಾರ್ಗವನ್ನು ಹೇಳುತ್ತದೆ. ನಮ್ಮ ಜೀವನದಲ್ಲಿ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು? ಎಂಬುದರ ಉತ್ತಮ ವಿವರಣೆಯು ಚಾಣಕ್ಯ ನೀತಿಯಲ್ಲಿ ಕಂಡುಬರುತ್ತದೆ. ಚಾಣಕ್ಯ ಪ್ರಸ್ತಾಪಿಸಿದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ, ಇದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು.

ಚಾಣಕ್ಯ

ಆಚಾರ್ಯ ಚಾಣಕ್ಯ (Chanakya) ಇವರ ಹೆಸರು ಕೇಳದವರು ಅಪರೂಪ. ರಾಜ್ಯವ್ಯವಸ್ಥೆ, ರಾಜಕೀಯ ತಂತ್ರ, ಆರ್ಥಿಕತೆ ಹೀಗೆ ನಾನಾ ವಿಷಯಗಳಲ್ಲಿ ಜ್ಞಾನಿಯಾಗಿದ್ದ ಚಾಣಕ್ಯನ ನೀತಿಗಳು ಇಂದಿಗೂ ಜಗತ್ತಿನಾದ್ಯಂತ ಗೌರವಿಸಲ್ಪಡುತ್ತಿವೆ. ಜೀವನವನ್ನು ಹೇಗೆ ನಡೆಸಬೇಕು? ಸುಖ–ದುಃಖಗಳನ್ನು ಹೇಗೆ ಎದುರಿಸಬೇಕು? ಯಶಸ್ಸು–ವಿಫಲತೆಗಳನ್ನು ಹೇಗೆ ನಿರ್ವಹಿಸಬೇಕು? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಚಾಣಕ್ಯ ತನ್ನ ನೀತಿಯಲ್ಲಿ(Chanakya Nithi) ಸ್ಪಷ್ಟವಾಗಿ ವಿವರಿಸಿದೆ.

ಚಾಣಕ್ಯನ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಗಮವಾಗುತ್ತದೆ ಎಂದೇ ಅವರು ಹೇಳುತ್ತಾರೆ. ಕಷ್ಟದ ಸಂದರ್ಭಗಳಲ್ಲಿಯೂ ಮನಸ್ಸು ದೃಢವಾಗಿರಬೇಕು, ಸುಖದ ಸಂದರ್ಭಗಳಲ್ಲಿ ಕೃತಜ್ಞತೆ ಮರೆಯಬಾರದು ಎಂದು ಚಾಣಕ್ಯ ಬೋಧಿಸುತ್ತಾನೆ.

ಇದೇ ಚಾಣಕ್ಯ, ತನ್ನ ನೀತಿ ಗ್ರಂಥದಲ್ಲಿ ಮಾನವನ ಗುಣದೋಷಗಳು, ಸಂಬಂಧಗಳು, ಸಮೃದ್ಧಿ, ಸಂಪತ್ತು, ಸ್ನೇಹ–ಶತ್ರು ಬಿಂಬಗಳು ಸೇರಿದಂತೆ ಹಲವಾರು ಮಾನವೀಯ ಅಂಶಗಳ ಬಗ್ಗೆಯೂ ಹೇಳಿದ್ದು,ಮಹಿಳೆಯರ ಮತ್ತು ಪುರುಷರ ಗುಣಗಳ ಬಗ್ಗೆಯೂ ಅವರು ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರು ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ ಯಾವುದೇ ಮಹಿಳೆ ಇಂತಹ ಗುಣಗಳನ್ನು ಹೊಂದಿದ್ದರೆ, ಮದುವೆಯ ನಂತರ ಅವರ ಸಂಗಾತಿಯು ಜೀವನದ ಪ್ರತಿಯೊಂದು ಹಂತದಲ್ಲೂ ಕಷ್ಟ ಅನುಭವಿಸುತ್ತಾರೆ. ಆಚಾರ್ಯ ಚಾಣಕ್ಯ ಮಹಿಳೆಯರ ಬಗ್ಗೆ ತಮ್ಮ ಆಲೋಚನೆಗಳನ್ನು ಸಹ ಪ್ರಸ್ತುತಪಡಿಸಿದ್ದಾರೆ. ಕೆಲವು ಮಹಿಳೆಯರಿಂದ ದೂರವಿರಲು ಪುರುಷರಿಗೆ ಹೇಳಿದ್ದಾರೆ, ಏಕೆಂದರೆ ಅಂತಹ ಮಹಿಳೆಯರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಅಂತಹ ಮಹಿಳೆಯರು ಮದುವೆಯ ನಂತರ ತಾವು ಹೋಗುವ ಮನೆಯಲ್ಲಿ ಕಲಹವನ್ನು ಉಂಟು ಮಾಡುತ್ತಾರೆ ಎನ್ನುತ್ತಾರೆ. ಹಾಗಾದರೆ ಚಾಣಕ್ಯರು ಹೇಳಿದ ಆ ಗುಣಗಳು ಯಾವುವು ನೋಡಿ.



ಕಠೋರ ಮನಸ್ಥಿತಿ


ಚಾಣಕ್ಯ ನೀತಿಯ ಪ್ರಕಾರ, ಕಠೋರ ಮನಸ್ಥಿತಿ ಹೊಂದಿರುವ ಮತ್ತು ಯಾವಾಗಲೂ ಕಹಿ ಮಾತುಗಳನ್ನು ಮಾತನಾಡುವ ಮಹಿಳೆಯರು, ಮನೆಯ ಶಾಂತಿ ಮತ್ತು ಸಂತೋಷವನ್ನು ಹಾಳು ಮಾಡಿ ಬಿಡಬಹುದು. ಅಂಥಹ ಮಹಿಳೆಯರು ತಮ್ಮ ಗಂಡನ ಮನಸ್ಸನ್ನು ಸದಾ ಗೊಂದಲದ ಗೂಡಾಗಿಸುತ್ತಾರೆ. ಮನೆಯಲ್ಲಿ ಯಾವಾಗಲೂ ಭಿನ್ನಾಭಿಪ್ರಾಯವೇ ಎದ್ದು ಕಾಣುತ್ತದೆ.

ಈ ಸುದ್ದಿಯನ್ನು ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ

ಸ್ವಾರ್ಥ ಗುಣ


ಚಾಣಕ್ಯನ ಪ್ರಕಾರ, ವ್ಯಕ್ತಿಯ ಜೀವನದಲ್ಲಿ ಸಂಬಂಧಗಳು ಅತ್ಯಂತ ಮಹತ್ವದ್ದಾಗಿವೆ. ವಿಶೇಷವಾಗಿ ಪುರುಷರು, ತಮ್ಮ ಸುತ್ತಮುತ್ತ ಇರುವ ಮಹಿಳೆಯರ ಸ್ವಭಾವವನ್ನು ಸರಿಯಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಎಚ್ಚರಿಸುತ್ತಾರೆ. ಚಾಣಕ್ಯನ ನೀತಿಯ ಪ್ರಕಾರ, ಸ್ವಾರ್ಥ ಮತ್ತು ದುರಾಶೆಯ ಗುಣಗಳನ್ನು ಹೊಂದಿರುವ ಮಹಿಳೆಯರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುವುದರ ಜೊತೆ ಸಂಬಂಧದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.

ಸಂಸ್ಕಾರವಿಲ್ಲದ ಮಹಿಳೆ

ಆಚಾರ್ಯ ಚಾಣಕ್ಯರು ಸಂಸ್ಕಾರವಿಲ್ಲದ ಮಹಿಳೆಯರಿಂದ ಮನೆಯಲ್ಲಿ ಅಶಾಂತಿ ಉಂಟಾಗಲಿದ್ದು, ಕುಟುಂಬ ಸದಸ್ಯರ ಮಧ್ಯೆ ಮನಸ್ತಾಪಗಳು ಎದುರಾಗುತ್ತದೆ. ದೇಹದ ಸೌಂದರ್ಯವು ಕ್ಷಣಿಕವಾಗಿದೆ. ಅದು ಅಲ್ಪಾವಧಿಗೆ ಮೌಲ್ಯಯುತವಾಗಿದೆ. ಆದರೆ ಸಂಸ್ಕಾರವಂತ ಮತ್ತು ಸಂಸ್ಕಾರವಂತ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಇತರರನ್ನು ಗೌರವಿಸುತ್ತಾರೆ. ಸಂಸ್ಕಾರವಿಲ್ಲದ ಮಹಿಳೆಯೊಂದಿಗೆ ನೀವು ಸಂಬಂಧವನ್ನು ಬೆಳೆಸಿಕೊಂಡರೆ, ಅದು ನಿಮ್ಮ ಗೌರವವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.