ಬೆಂಗಳೂರು: ಜೀವನದ ಮಾರ್ಗದರ್ಶನಕ್ಕೆ ಸಂಬಂಧಿಸಿದ ಅನೇಕ ಅಮೂಲ್ಯ ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಆಚಾರ್ಯ ಚಾಣಕ್ಯನು ವೈಯಕ್ತಿಕ ಜೀವನದಿಂದ ಹಿಡಿದು ಸಂಬಂಧಗಳು, ಸ್ನೇಹ, ಉದ್ಯೋಗ ಮತ್ತು ಶತ್ರುಗಳ ತನಕ ವಿವಿಧ ವಿಷಯಗಳ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾನೆ. ಅವು ಕೆಲವೊಮ್ಮೆ ಕಠಿಣವಾಗಿ ತೋರಿದರೂ, ಜೀವನದಲ್ಲಿ ಸರಿಯಾದ ದಾರಿಯನ್ನು ತೋರಿಸುವ ಶಕ್ತಿಯನ್ನು ಹೊಂದಿವೆ.
ಚಾಣಕ್ಯನ ಉಪದೇಶಗಳು ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗೇ ಅವರು ವಿವಾಹಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಚಾಣಕ್ಯ ನೀತಿಯಲ್ಲಿ(Chanakya Niti) ಉಲ್ಲೇಖಿಸಿದ್ದು, ದಾಂಪತ್ಯ ಹಿತಕ್ಕಾಗಿ ಅವನು ಹೇಳಿರುವ ಕೆಲವು ಮಹತ್ವದ ಅಂಶಗಳನ್ನು ಇಲ್ಲಿ ತಿಳಿಯೋಣ.
ಸೂಕ್ಷ್ಮ ಮನಸ್ಸಿನ ಮಹಿಳೆಯರು:
ಚಾಣಕ್ಯನ ಪ್ರಕಾರ, ಮಹಿಳೆಯರು ಸಹಜವಾಗಿ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಸಂತೋಷವಾಗಲಿ ದುಃಖವಾಗಲಿ, ಅವರು ತಮ್ಮ ಭಾವನೆಗಳನ್ನು ಅಳುವ ಮೂಲಕ ವ್ಯಕ್ತಪಡಿಸುತ್ತಾರೆ. ಆದರೆ ಈ ಗುಣವನ್ನು ದುರ್ಬಲತೆ ಎಂದು ನೋಡಬಾರದು. ಇಂತಹ ಮಹಿಳೆಯರನ್ನು ವಿವಾಹವಾಗುವ ಪುರುಷನ ಜೀವನದಲ್ಲಿ ಶುಭ ಫಲಗಳು ಕಂಡುಬರುತ್ತವೆ ಎಂದು ಹೇಳಲಾಗಿದೆ.
Chanakya Niti: ಜೀವನದಲ್ಲಿ ಯಶಸ್ಸು ಬೇಕಾಂದ್ರೆ ಈ 2 ವಿಷಯಗಳನ್ನ ಸೈನಿಕನಂತೆ ಕಾಪಾಡಿಕೊಳ್ಳಿ
ಇಂತಹ ಮಹಿಳೆಯರನ್ನು ಕಳೆದುಕೊಳ್ಳಬೇಡಿ:
ಮಹಿಳೆಯರಲ್ಲಿ ಸಹನಶೀಲತೆ ಹೆಚ್ಚು ಇರುತ್ತದೆ. ಅಳುವುದು ಅವರ ಮನಸ್ಸಿನ ಭಾವನೆಗಳ ಅಭಿವ್ಯಕ್ತಿ ಮಾತ್ರ. ಇಂತಹ ಮಹಿಳೆಯರು ನಿಜವಾದ ಹೃದಯ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಹೊಂದಿರುತ್ತಾರೆ. ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಬಿಟ್ಟು ದೂರ ಹೋಗಲು ಇಚ್ಛಿಸುವುದಿಲ್ಲ. ಆದ್ದರಿಂದ ಇಂತಹ ಗುಣಗಳಿರುವ ಮಹಿಳೆಯರನ್ನು ಜೀವನದಲ್ಲಿ ಗೌರವಿಸಬೇಕು ಮತ್ತು ಕಾಪಾಡಿಕೊಳ್ಳಬೇಕು.
ಅಳುವ ಮಹಿಳೆಯರು:
ಚಾಣಕ್ಯನು ಹೇಳುವಂತೆ, ಅಳುವುದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಯಾವುದೇ ತಪ್ಪಿಲ್ಲದಿದ್ದರೂ ಅಳುವ ಮಹಿಳೆಯರಲ್ಲಿ ಮಮತೆಯ ಗುಣ ಹೆಚ್ಚು ಇರುತ್ತದೆ. ಅವರು ಕುಟುಂಬದ ಎಲ್ಲರೊಂದಿಗೆ ಹೊಂದಾಣಿಕೆ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.
ಇಂತಹ ಮಹಿಳೆಯರು ಯಾರಿಗೂ ನೋವುಂಟು ಮಾಡುವುದಿಲ್ಲ. ಇತರರ ಭಾವನೆಗಳನ್ನು ಗೌರವಿಸುತ್ತಾರೆ ಮತ್ತು ಸಹಾನುಭೂತಿ ಹೊಂದಿರುತ್ತಾರೆ. ತಮ್ಮ ಅಗತ್ಯಗಳನ್ನು ಬದಿಗಿಟ್ಟು ಇತರರ ಬಗ್ಗೆ ಕಾಳಜಿ ತೋರುತ್ತಾರೆ.
ಚಾಣಕ್ಯನ ನೀತಿಯ ಪ್ರಕಾರ, ಈ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಎಂದಿಗೂ ಕಳೆದುಕೊಳ್ಳಬಾರದು. ಅವರು ಕುಟುಂಬದ ಶಾಂತಿ ಮತ್ತು ಸಂತೋಷಕ್ಕೆ ಮೂಲವಾಗಿರುತ್ತಾರೆ.