ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Christmas 2025: ಕ್ರಿಸ್‌ಮಸ್ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅದ್ಭುತ ಸಂದೇಶಗಳು

ಪ್ರತಿ ವರ್ಷ ಡಿಸೆಂಬರ್ 25 ಬಂತೆಂದರೆ ಕ್ರೈಸ್ತರಲ್ಲಿ ಕ್ರಿಸ್​ಮಸ್ ಹಬ್ಬದ ಸಡಗರ, ಸಂಭ್ರಮ ಮನೆ ಮಾಡುತ್ತದೆ. ಪ್ರೀತಿ, ಸಾಮರಸ್ಯದ ದ್ಯೋತಕವಾಗಿರುವ ಕ್ರಿಸ್‌ಮಸ್ ಹಬ್ಬದ ಶುಭ ದಿನದಂದು ನೀವು ನಿಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ ಶುಭಾಶಯಗಳನ್ನು ತಿಳಿಸಲು ಬಯಸಿದರೆ ಇಲ್ಲಿದೆ ನೋಡಿ ಮನಸೆಳೆಯುವ ಸಂದೇಶಗಳು.

ಕ್ರಿಸ್​ಮಸ್ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕ್ರಿಸ್‌ಮಸ್‌ (Christmas) ಅನ್ನು ಪ್ರಪಂಚದಾದ್ಯಂತ ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತಿದೆ. ವಿಶ್ವಕ್ಕೆ ಶಾಂತಿ, ಪ್ರೀತಿ, ವಿಶ್ವಾಸ, ಕರುಣೆ, ಪರೋಪಕಾರದ ಸಂದೇಶವನ್ನು ಸಾರಿದ ಯೇಸುಕ್ರಿಸ್ತನ ಜನ್ಮ ದಿನವನ್ನೇ ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತದೆ. ಮಿನುಗುವ ದೀಪಗಳು ಮತ್ತು ಬೆರಗುಗೊಳಿಸುವ ಕ್ರಿಸ್‌ಮಸ್‌ ಟ್ರೀಗಳು, ನಕ್ಷತ್ರಕಾರದ ಗೂಡು ದೀಪಗಳು, ಗೋದಲಿ ಈ ಹಬ್ಬದ ಮುಖ್ಯ ಆಕರ್ಷಣೆಯಾಗಿದ್ದು, ಕ್ರಿಶ್ಚನ್ನರು ಈ ದಿನದಂದು ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಾರೆ. ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಒಂದೇ ಕಡೆ ಸೇರಿ ವಿಶೇಷ ಭೋಜನವನ್ನು ಸವಿದು ಹಬ್ಬದ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಪ್ರೀತಿ, ಸಾಮರಸ್ಯದ ದ್ಯೋತಕವಾಗಿರುವ ಕ್ರಿಸ್‌ಮಸ್ 2025ರ ಹಬ್ಬದ ಶುಭ ದಿನದಂದು ನೀವು ನಿಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ ಶುಭಾಶಯಗಳನ್ನು ತಿಳಿಸಲು ಬಯಸಿದರೆ ಇಲ್ಲಿದೆ ನೋಡಿ ಮನಸೆಳೆಯುವ ಸಂದೇಶಗಳು...

ಕ್ರಿಸ್​ಮಸ್ ಹಬ್ಬದ ಶುಭಾಶಯಗಳು

  • ಮೆರ್ರಿ ಕ್ರಿಸ್‌ಮಸ್! ನಿಮ್ಮ ಜೀವನವು ಸಂತೋಷ, ನೆಮ್ಮದಿ ಮತ್ತು ಪ್ರೀತಿ ತುಂಬಿರಲಿ.
  • ಯೇಸು ದೇವನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲಿ.
  • ನಗು, ಸಂತೋಷ ಮತ್ತು ಆರೋಗ್ಯದಿಂದ ತುಂಬಿದ ದಿನಗಳು ನಿಮ್ಮದಾಗಲಿ. ಮೆರ್ರಿ ಕ್ರಿಸ್‌ಮಸ್!
  • ಕ್ರಿಸ್‌ಮಸ್ ದಿನ ಹಚ್ಚುವ ಕ್ಯಾಂಡಲ್ ಬೆಳಕು ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ನಿಮ್ಮ ಜೀವನದಲ್ಲಿ ಉಲ್ಲಾಸದ ಬೆಳಕು ಹರಿಸಲಿ.
  • ದೇವರ ಪ್ರೀತಿ ಸದಾ ನಿಮ್ಮೊಡನೆ ಇರಲಿ ಮತ್ತು ನಿಮ್ಮ ಜೀವನವು ಸಮೃದ್ಧಿ, ಶಾಂತಿ ಮತ್ತು ಸಂತೋಷದಿಂದ ಕೂಡಿರಲಿ.
  • ಈ ಹಬ್ಬವು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶಾಂತಿ, ಸಂತೋಷ ಮತ್ತು ಮುಂದಿನ ವರ್ಷಕ್ಕೆ ಶುಭವನ್ನು ತರಲಿ.

ಕ್ರಿಸ್‌ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ಉಡುಗೊರೆ ನೀಡಿ

  • ನಿಮ್ಮ ಎಲ್ಲ ಆಸೆಗಳು ಹಾಗೂ ಕನಸುಗಳು ಈ ವರ್ಷ ಈಡೇರಲಿ.
  • ಯೇಸು ಕ್ರಿಸ್ತನ ಪ್ರೀತಿ ನಿಮ್ಮ ಜೀವನವನ್ನು ಸದಾ ಬೆಳಗಿಸಲಿ. ಕ್ರಿಸ್‌ಮಸ್ 2025ರ ಹಾರ್ದಿಕ ಶುಭಾಶಯಗಳು.
  • ಕ್ರಿಸ್‌ಮಸ್ ಹಬ್ಬದ ಈ ಸಂತೋಷದ ಸಮಯದಲ್ಲಿ ಯೇಸು ಕ್ರಿಸ್ತನ ಆಶೀರ್ವಾದಗಳು ನಿಮಗೆ ದೊರೆಯಲಿ.
  • ನಿಮ್ಮ ಮನೆ ಮತ್ತು ಹೃದಯದಲ್ಲಿ ಯೇಸು ಕ್ರಿಸ್ತನ ಪ್ರೀತಿ ಮತ್ತು ಸಂತೋಷದ ಬೆಳಕು ಸದಾ ಬೆಳಗಲಿ. ಕ್ರಿಸ್‌ಮಸ್ ಶುಭಾಶಯಗಳು.
  • ನಿಮ್ಮ ಮುಂಬರುವ ಜೀವನ ಕ್ರಿಸ್‌ಮಸ್ ಕೇಕ್‌ನಂತೆ ಸಿಹಿಯಾಗಿರಲಿ, ಕ್ರಿಸ್‌ಮಸ್ ಟ್ರೀಯಂತೆ ಸುಂದರವಾಗಿರಲಿ ಮತ್ತು ಮೇಣದ ಬತ್ತಿಯಂತೆ ಬೆಳಗಿರಲಿ. ಕ್ರಿಸ್‌ಮಸ್ ಹಬ್ಬ ಹಾರ್ದಿಕ ಶುಭಾಶಯಗಳು.
  • ಕ್ರಿಸ್​ಮಸ್ ಹಬ್ಬದ ಶುಭಾಶಯಗಳು; ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
  • ನಿಮ್ಮ ಜೀವನದಲ್ಲಿ ಸದಾ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿ ತುಂಬಿರಲಿ. ಯೇಸುಕ್ರಿಸ್ತನು ಸದಾ ನಿಮಗೆ ಒಳಿತನ್ನೇ ಮಾಡಲಿ. ಕ್ರಿಸ್‌ಮಸ್‌ನ ಹಾರ್ದಿಕ ಶುಭಾಶಯಗಳು.
  • ಯೇಸುವಿನ ಅನುಗ್ರಹದಿಂದ ನಿಮ್ಮ ಕಷ್ಟಗಳೆಲ್ಲ ಮಂಜಿನಂತೆ ಕರಗಲಿ. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೂ ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.