ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Christmas 2025: ಕ್ರಿಸ್‌ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ಉಡುಗೊರೆ ನೀಡಿ

ನೀವು ಈ ವರ್ಷದ ಕ್ರಿಸ್‌ಮಸ್ ಹಬ್ಬವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಬಹಳ ವಿಶೇಷವಾಗಿ ಆಚರಿಸಲು ಇಚ್ಚಿಸಿದ್ದರೆ, ನಾವು ನಿಮಗೆ ಕೆಲ ಟಿಪ್ಸ್ ನೀಡುತ್ತಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆತ್ಮೀಯರಿಗೆ ಯಾವ ರೀತಿಯ ಉಡುಗೊರೆ ನೀಡಬಹುದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 24: ವಿಶ್ವದಾದ್ಯಂತ ಕ್ರಿಸ್‌ಮಸ್ (Christmas) ಆಚರಣೆಗೆ ಸಕಲ ಸಿದ್ದತೆ ನಡೆಯುತ್ತಿದ್ದು, ಹಬ್ಬದ ಸಂಭ್ರಮಾಚರಣೆಗೆ (Celebration) ಕೌಂಟ್‌ಡೌನ್ ಶುರುವಾಗಿದೆ. ಮನುಕುಲಕ್ಕೆ ಸಹಾನೂಭೂತಿ ಮತ್ತು ಸೋದರತ್ವವನ್ನು ಜಗತ್ತಿಗೆ ಪ್ರಚುರತೆ ಪಡಿಸಿದ ಯೇಸುಕ್ರಿಸ್ತನ (Jesus Christ) ಜನ್ಮದಿನವನ್ನು ನೆನಪಿಸಿಕೊಳ್ಳುವ ಹಾಗೂ ಆಚರಿಸುವ ದಿನವೇ ಕ್ರಿಸ್‌ಮಸ್. ಈ ಹಬ್ಬದ ಸಂಭ್ರಮ ಡಿಸೆಂಬರ್‌ ಮೊದಲ ವಾರದಿಂದಲೇ ಆರಂಭವಾಗುತ್ತದೆ. ಈ ಹಬ್ಬವನ್ನು ಮನೆ ಮಂದಿ- ಕುಟುಂಬದವರು ಎಲ್ಲರೂ ಸೇರಿ ಸಡಗರದಿಂದ ಆಚರಿಸುತ್ತಾರೆ. ಅಲ್ಲದೇ ಈ ಹಬ್ಬಕ್ಕೆ ಮತ್ತೊಂದು ವಿಶೇಷತೆ ಇದ್ದು, ಮನೆಮಂದಿ ಹಾಗೂ ಸ್ನೇಹಿತರು ಪರಸ್ಪರ ಗುಪ್ತವಾಗಿ ಉಡುಗೊರೆಗಳನ್ನುಹಂಚಿಕೊಂಡು, ಅವುಗಳನ್ನು ಸಾಂಟಾ ಕ್ಲಾಸ್ ನೀಡಿದ ಉಡುಗೊರೆ ಎಂದು ಹೇಳಿ ಸಂಭ್ರಮಿಸುತ್ತಾರೆ. ಕುಟುಂಬ ಸದಸ್ಯರು - ಸ್ನೇಹಿತರು ಒಬ್ಬರನ್ನೊಬ್ಬರು ಭೇಟಿಯಾಗಿ ತಿಂಡಿ ತಿನಿಸುಗಳನ್ನು ಪರಸ್ಪರ ವಿನಿಮಯ ಮಾಡುವ ಮೂಲಕ ಮತ್ತು ಗಿಫ್ಟ್​ಗಳನ್ನು ಕೊಡುವ ಮೂಲಕ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ತರುತ್ತಾರೆ.

ನೀವು ಈ ವರ್ಷದ ಕ್ರಿಸ್‌ಮಸ್‌ ಹಬ್ಬವನ್ನು ಪ್ರೀತಿ ಪಾತ್ರರೊಂದಿಗೆ ಬಹಳ ವಿಶೇಷವಾಗಿ ಆಚರಿಸಲು ಇಚ್ಚಿಸಿದ್ದರೆ, ನಾವು ನಿಮಗೆ ಕೆಲ ಟಿಪ್ಸ್ ನೀಡುತ್ತಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆತ್ಮೀಯರಿಗೆ ನೀಡುವ ಉಡುಗೊರೆಯನ್ನು ಆಯ್ಕೆ ಮಾಡುವಾಗ ಬಜೆಟ್ ಕೂಡ ಮುಖ್ಯವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಹಾಗೂ ಉಪಯುಕ್ತ ಗಿಫ್ಟ್ ನೀಡಲು ಸಹಾಯವಾಗುವ ಐಡಿಯಾಗಳು ಇಲ್ಲಿವೆ.

ಕಸ್ಟಮೈಸ್ಡ್‌ ಉಡುಗೊರೆಗಳು

ನಿಮ್ಮ ಪ್ರೀತಿ ಪಾತ್ರರಿಗೆ ಏನಾದರೂ ವಿಶೇಷವಾದದ್ದನ್ನು ನೀಡಲು ಬಯಸುವಿರಾ? ಹಾಗಿದ್ರೆ ನೀವು ಫೋಟೊ ಫ್ರೇಮ್, ಕಸ್ಟಮೈಸ್ ಮಾಡಿದ ಮಗ್ ಅಥವಾ ಅವರ ಹೆಸರನ್ನು ಬರೆದ ಬ್ರೇಸ್ಲೆಟ್‌, ಪರ್ಸ್‌ನಂತಹ ಕಸ್ಟಮೈಸ್ಡ್ ಉಡುಗೊರೆಗಳನ್ನು ನೀಡಬಹುದು.

ಕ್ರಿಸ್‌ಮಸ್ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾದ ಗೌನ್‌ಗಳಿವು

ಫ್ಯಾಶನ್‌ ಹ್ಯಾಂಪರ್ಸ್

ನಿಮ್ಮ ಆತ್ಮೀಯರು, ಗೆಳಯರು, ಫ್ಯಾಷನ್ ಪ್ರಿಯರಾಗಿದ್ದರೆ ನೀವು ಅವರಿಗೆ ಒಂದು ಸ್ಟೈಲಿಶ್ ಹ್ಯಾಂಡ್‌ಬ್ಯಾಗ್, ಟ್ರೆಂಡಿ ಆಕ್ಸೆಸರಿಸ್ ಅಥವಾ ಡಿಸೈನರ್ ಡ್ರೆಸ್, ಕೂಲ್ ಸ್ನೀಕರ್ಸ್ ಅಥವಾ ಸ್ಮಾರ್ಟ್‌ವಾಚ್‌ಗಳು, ಇಲ್ಲವೆ ಬಟ್ಟೆಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆಯನ್ನು ಖಂಡಿತ ಇಷ್ಟಪಡುತ್ತಾರೆ.

ಬ್ಯೂಟಿ ಪ್ರಾಡಕ್ಟ್ಸ್

ನಿಮ್ಮ ಸ್ನೇಹಿತೆಗೆ ಬ್ಯೂಟಿ ಪ್ರಾಡಕ್ಟ್ಸ್ ಕೊಡಬಹುದು. ಅನೇಕ ಯುವತಿಯರು ಸ್ಕಿನ್‌ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ದುಬಾರಿ ಸ್ಕಿನ್‌ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ. ಹೀಗಿರುವಾಗ ನೀವು ಕ್ರಿಸ್‌ಮಸ್‌ಗೆ ಫೇಸ್ ಕ್ರೀಮ್, ಫೇಸ್ ವಾಶ್, ಸನ್ ಕ್ರೀಮ್, ಫೇಸ್ ಮಾಸ್ಕ್, ಸೀರಮ್, ಲಿಪ್ ಬಾಮ್, ಬಾಡಿ ಲೋಷನ್, ಫೌಂಡೇಶನ್, ಕಾಜಲ್, ಮಸ್ಕರಾ, ಐ ಲೈನರ್ ಮುಂತಾದ ಮೇಕಪ್ ಸಾಮಗ್ರಿಗಳು ಇರುವ ಬ್ಯೂಟಿ ಕಿಟ್‌ ಉಡುಗೊರೆಯಾಗಿ ನೀಡಬಹುದು.

ಫಾರಿನ್ ಗಿಫ್ಟ್

ಹೆಚ್ಚಿನವರಿಗೆ ಈ ವಿದೇಶಿ ವಸ್ತುಗಳ ಮೇಲೆ ವ್ಯಾಮೋಹ ಜಾಸ್ತಿ ಇರುತ್ತದೆ. ಅದರಲ್ಲೂ ಈ ವಿದೇಶಿ ವೈನ್ ಅಂದರೆ ಹಲವರಿಗೆ ಇಷ್ಟ. ಹಾಗಾಗಿ ಫಾರಿನ್ ಗಿಫ್ಟ್‌ ಹ್ಯಾಂಪರ್‌ ನೀವು ಉಡುಗೊರೆಯಾಗಿ ನೀಡಬಹುದಾಗಿದ್ದು, ಇದರಲ್ಲಿ ವಿದೇಶಿ ವೈನ್‌, ಬಾಗೆಟ್ಸ್‌, ಆರ್ಟಿಸನಲ್‌ ಚೀಸ್‌, ಬೆಲ್ಜಿಯಂ ಚಾಕ್ಲೇಟ್‌ ಇತ್ಯಾದಿ ಸೇರುತ್ತದೆ.