Cotton Saree Fashion 2026: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಕಾಟನ್ ಸೀರೆ ಸ್ಟೈಲಿಂಗ್ ಟಿಪ್ಸ್
Cotton Saree Styling Tips: ಸ್ವಾತಂತ್ರ್ಯ ದಿನಾಚರಣೆಯಂದು ಕಾಟನ್ ಸೀರೆಯಲ್ಲಿ ಕಾಣಿಸಿಕೊಳ್ಳುವುದೆಂದರೇ ಹೆಣ್ಣುಮಕ್ಕಳಿಗೆ ಸಂಭ್ರಮವೋ ಸಂಭ್ರಮ! ಇನ್ನು, ಸ್ವಾತಂತ್ರ್ಯ ದಿನಾಚರಣೆಗೆ ಕಾಟನ್ ಸೀರೆಯ ಸ್ಟೈಲಿಂಗ್ ಹೇಗಿರಬೇಕು? ಯಾವ್ಯಾವ ಬಗೆಯ ಕಾಟನ್ ಸೀರೆಯನ್ನು ಹೇಗೆಲ್ಲಾ ಉಟ್ಟು ಮೇಕೋವರ್ ಮಾಡಬಹುದು? ಅಂದವಾಗಿ ಕಾಣಿಸಬಹುದು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಸ್ವಾತಂತ್ರ್ಯ ದಿನಾಚರಣೆಯಂದು ಕಾಟನ್ ಸೀರೆಯಲ್ಲಿ ಕಾಣಿಸಿಕೊಳ್ಳುವುದೆಂದರೇ ಹೆಣ್ಣುಮಕ್ಕಳಿಗೆ ಸಂಭ್ರಮವೋ ಸಂಭ್ರಮ! ಇನ್ನು, ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಕಾಟನ್ ಸೀರೆಗಳು ಆಗಮಿಸಿವೆ. ಈ ಬಗೆಬಗೆಯ ಕಾಟನ್ ಸೀರೆಗಳನ್ನು ಆಯ್ಕೆ ಮಾಡಿ, ಸ್ಟೈಲಿಂಗ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.
ಪರ್ಸನಾಲಿಟಿಗೆ ಹೊಂದುವ ಸೀರೆಯ ಆಯ್ಕೆ
ನಿಮ್ಮ ಸ್ಕಿನ್ ಟೋನ್‌ಗೆ ಹೊಂದುವಂತಹ ಕಲರ್‌ನವು ಹಾಗೂ ವಿನ್ಯಾಸದ ಕಾಟನ್ ಸೀರೆಗಳನ್ನೇ ಆಯ್ಕೆ ಮಾಡಿ, ಉಟ್ಟುಕೊಳ್ಳಿ. ಸಾದಾ ಕಲರ್‌ನವು ಎಲಿಗೆಂಟ್ ಲುಕ್ ನೀಡುತ್ತವೆ. ಪ್ರಿಂಟೆಡ್‌ನವು ಕೊಂಚ ವಿಭಿನ್ನವಾಗಿ ಬಿಂಬಿಸುತ್ತವೆ.
ತಿರಂಗಾ ಸೀರೆಗಳ ಜಾದೂ
ಇನ್ನು, ಈ ಸೀಸನ್‌ನಲ್ಲಿ ತಿರಂಗಾ ವರ್ಣದ ಕಾಟನ್ ಸೀರೆಗಳು ಬಂದಿವೆ. ಇವು ಮಲ್‌ಮಲ್ ಕಾಟನ್ ಲೆನಿನ್ ಕಾಟನ್ ಹೀಗೆ ನಾನಾ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಇವು ಕೂಡ ಉಟ್ಟಾಗ ದೇಶಪ್ರೇಮ ಬಿಂಬಿಸುತ್ತವೆ. ಇಂತವನ್ನು ಕೂಡ ಆಯ್ಕೆ ಮಾಡಿ ಧರಿಸಬಹುದು.
ಕಂಪ್ಲೀಟ್ ದೇಸಿ ಲುಕ್‌ಗಾಗಿ ಹೀಗೆ ಮಾಡಿ
ಕಂಪ್ಲೀಟ್ ದೇಸಿ ಲುಕ್ ಪಡೆಯಲು ಆದಷ್ಟೂ ಸಿಂಪಲ್ ಬಾರ್ಡರ್ ಕಾಟನ್ ಸೀರೆ ಆಯ್ಕೆ ಮಾಡಿ ಹಾಗೂ ಗ್ಲಾಮರಸ್ ವಿನ್ಯಾಸವಿರದ ಮ್ಯಾಚಿಂಗ್ ಬ್ಲೌಸ್ ಧರಿಸಿ. ಮೇಕೋವರ್ ಕೂಡ ಸಿಂಪಲ್ಲಾಗಿರಲಿ. ಇದರೊಂದಿಗೆ ಡಿಸೆಂಟ್ ಲುಕ್ ನೀಡುವಂತಹ ಆಕ್ಸೆಸರೀಸ್ ಧರಿಸಿ.
ಕಾಟನ್ ಸೀರೆಗೆ ಕಾಂಟ್ರಾಸ್ಟ್ ಬ್ಲೌಸ್
ಕಾಟನ್ ಸೀರೆಗೆ ಕಾಂಟ್ರಾಸ್ಟ್ ಇಲ್ಲವೇ ಮಿಕ್ಸ್ ಮ್ಯಾಚ್ ಬ್ಲೌಸ್‌ಗಳನ್ನು ಧರಿಸುವುದರಿಂದ ಡಿಫರೆಂಟ್ ಲುಕ್ ಪಡೆಯಬಹುದು. ಅಷ್ಟೇಕೆ, ಕ್ರಾಪ್ ಟಾಪ್ ಬ್ಲೌಸ್, ಚೈನಾ ಕಾಲರ್‌ನ ಲಾಂಗ್ ಬ್ಲೌಸ್ ಇಲ್ಲವೇ ಹಾಲ್ಟರ್ ನೆಕ್‌ನಂತಹ ಗ್ಲಾಮರಸ್ ಬ್ಲೌಸ್‌ಗಳನ್ನು ಧರಿಸಿ, ದೇಸಿ ಸ್ಟೈಲಿಂಗ್‌ನಲ್ಲೆ ಇಂಡೋ-ವೆಸ್ಟರ್ನ್ ಲುಕ್ ಪಡೆಯಬಹುದು.
ಪ್ರೀ ಡ್ರೇಪಿಂಗ್ ಮಾಡಿಟ್ಟು, ಉಟ್ಟುಕೊಳ್ಳಿ
ನೀವು ಪ್ರೀ ಡ್ರೇಪಿಂಗ್ ಮಾಡಿದ ಕಾಟನ್ ಸೀರೆಯನ್ನು ಉಡುವುದು ಸುಲಭ. ಹಾಗಾಗಿ ಹಿಂದಿನ ದಿನವೇ ಡ್ರೇಪ್ ಮಾಡಿ ಪಿನ್ ಹಾಕಿಡಿ. ಮರುದಿನ ಸುಲಭವಾಗಿ ಉಟ್ಟುಕೊಳ್ಳಬಹುದು.