ಬೆಂಗಳೂರು: ಭಾರತದ ಪ್ರೀತಿಪಾತ್ರ ಬ್ರಾಂಡ್ ಫ್ಯಾಬ್ಇಂಡಿಯಾ ತನ್ನ ಹೊಚ್ಚಹೊಸ ವರ್ಕ್ ವೇರ್ ಅಭಿಯಾನ “ರೈಟ್ ಯುವರ್ ಓನ್ ಕೋಡ್”ಗೆ ಚಾಲನೆ ನೀಡಿದೆ. ಈ ವಿಸ್ತಾರ ಸಂಗ್ರಹವು ಆಧುನಿಕ ಉದ್ಯೋಗದ ಸ್ಥಳದಲ್ಲಿ ವೈಯಕ್ತಿಕತೆಯನ್ನು ಸಂಭ್ರಮಿಸುತ್ತಿದ್ದು ವಿಸ್ತಾರ ಶ್ರೇಣಿಯ ಎಥ್ನಿಕ್ ವೇರ್, ವೆಸ್ಟ್ರನ್ ವೇರ್ ಮತ್ತು ಪುರುಷರು ಹಾಗೂ ಮಹಿಳೆಯರಿಗೆ ವಿನ್ಯಾಸಗೊಳಿಸಲಾದ ಅಕ್ಸೆಸರೀಸ್ ಒಳಗೊಂಡಿದೆ.
ಈ ವರ್ಕ್ ವೇರ್ ಶ್ರೇಣಿಯು ಕಲಾತ್ಮಕ ಪರಂಪರೆಯನ್ನು ಸಮಕಾಲೀನ ಕಾರ್ಯ ನಿರ್ವಹಣೆಯೊಂದಿಗೆ ತಡೆಯಿರದಂತೆ ಸಂಯೋಜಿಸುತ್ತದೆ. ಮಹಿಳೆಯರು ಶಾರ್ಟ್ ಡ್ರೆಸ್ ಗಳು, ಕೋ-ಆರ್ಡ್ ಸೆಟ್ ಗಳು, ಕುರ್ತಾಗಳು, ದುಪ್ಪಟ್ಟಾಗಳು ಮತ್ತು ಸೀರೆಗಳಿಂದ ಆಯ್ಕೆ ಮಾಡಿಕೊಳ್ಳಬಹುದು, ಇವುಗಳಲ್ಲಿ ಸೂಕ್ಷ್ಮವಾದ ಚಿಕನ್ ಕಾರಿ, ಹ್ಯಾಂಡ್ ಎಂಬ್ರಾಯಿಡರಿ ಮತ್ತು ಬ್ಲಾಕ್ ಪ್ರಿಂಟ್ ಗಳಿವೆ.
ಪುರುಷರ ದಿರಿಸುಗಳಲ್ಲಿ ಕ್ರಿಸ್ಪ್ಶರ್ಟ್ ಗಳು, ಕಿರಿದಾದ ಮತ್ತು ಉದ್ದದ ಕುರ್ತಾಗಳು ಮತ್ತು ಬಂಧ್ ಗಾಲಾ ಜಾಕೆಟ್ ಗಳಿದ್ದು ಇವು ಇಕತ್ ನೇಯ್ಗೆಯನ್ನು ಬಗ್ರು, ಅಜ್ರಖ್ ಮತ್ತು ದಬು ಪ್ರಿಂಟ್ ಗಳೊಂದಿಗೆ ಹೊಂದಿದೆ. ಈ ಎರಡೂ ಶ್ರೇಣಿಗಳು ಪ್ರೀಮಿಯಂ ಟೆಕ್ಸ್ಚರ್ಡ್ ಕಾಟನ್ ಮತ್ತು ಲಿನೆನ್ ನಲ್ಲಿ ಸಿದ್ಧಪಡಿಸಲಾಗಿದೆ. ಈ ಲುಕ್ ಗೆ ಪೂರಕವಾಗಿ ಈ ಅಲಂಕರಣಗಳು ಲೆದರ್ ಬ್ಯಾಗ್ ಗಳು ಹಾಗೂ ಇಯರ್ ರಿಂಗ್ ಗಳು, ರಿಂಗ್ ಗಳು ಮತ್ತು ಬ್ರೇಸ್ಲೆಟ್ ಗಳ ಸೊಗಸಾದ ಆಭರಣ ಸಂಗ್ರಹವಿದ್ದು ಇವುಗಳಲ್ಲಿ ಆದಿವಾಸಿ ಮತ್ತು ಹೂವಿನ ವಿನ್ಯಾಸ ಗಳನ್ನು ತೆಳುವಾದ ಬೆಳ್ಳಿ, ಚಿನ್ನ ಮತ್ತು ಡುಯಲ್-ಟೋನ್ ಫಿನಿಷ್ ಗಳಲ್ಲಿ ರೂಪಿಸ ಲಾಗಿದೆ.
“ನಮ್ಮ `ರೈಟ್ ಯುವರ್ ಓನ್ ಕೋಡ್’ ಅಭಿಯಾನವು ತಮ್ಮ ವಾರ್ಡ್ ರೋಬ್ ಅನ್ನು ಅವರ ವೈಯಕ್ತಿಕ ನಿರೂಪಣೆಯ ವಿಸ್ತರಣೆಯಾಗಿ ನೋಡುವ ಆಧುನಿಕ ವೃತ್ತಿಪರರಿಗೆ ನೀಡುವ ಗೌರವವಾಗಿದೆ” ಎಂದು ಫ್ಯಾಬ್ಇಂಡಿಯಾ ವಕ್ತಾರರು ಹೇಳಿದರು. “ಇಂದು ವರ್ಕ್ ವೇರ್ ಸಂಯೋಜನೆ ಮಾತ್ರವಲ್ಲ; ಇದು ವಿಶ್ವಾಸಾರ್ಹತೆಯ ಮೂಲಕ ಎದ್ದು ಕಾಣುವುದಾಗಿದೆ. ಭಾರತದ ಶ್ರೀಮಂತ ಕಲಾತ್ಮಕ ಪರಂಪರೆಯನ್ನು ಸಮಕಾಲೀನ ಕಟ್ ಗಳೊಂದಿಗೆ ಸಂಯೋಜಿಸುವ ಮೂಲಕ ನಾವು ನಮ್ಮ ಗ್ರಾಹಕರನ್ನು ಅವರ ಇಡೀ ಸ್ವಯಂ ಅನ್ನು ಕೆಲಸಕ್ಕೆ ತರುತ್ತಿದ್ದೇವೆ. ಈ ಕ್ಯುರೇಷನ್ ಅನ್ನು ಚಲನಶೀಲ ಉದ್ಯೋಗದ ದಿನಕ್ಕೆ ಸೌಖ್ಯ ಮತ್ತು ವಿಶ್ವಾಸದಿಂದ ಮುನ್ನಡೆಯಲು ವಿನ್ಯಾಸಗೊಳಿಸಲಾಗಿದೆ” ಎಂದರು.
ಕಾರ್ಪೊರೇಟ್ ಸಮವಸ್ತ್ರಗಳ ಏಕತಾನತೆಯನ್ನು ನಿರಾಕರಿಸುವ ಈ ಸಂಗ್ರಹವು ನಿಮ್ಮ ವ್ಯಕ್ತಿತ್ವವು ಉಜ್ವಲಗೊಳ್ಳುವಂತೆ ಮಾಡುವ `ಮಿಕ್ಸ್ ಅಂಡ್ ಮ್ಯಾಚ್’ ತತ್ವವನ್ನು ಹೊಂದಿದೆ. ಇಕತ್, ಅಜ್ರಖ್ ಮತ್ತು ದಬುಗಳಂತಹ ಸಾಂಪ್ರದಾಯಿಕ ಪರಂಪರೆಯನ್ನು ಆಧುನಿಕ ಸಿಲ್ಹೌಟ್ ಗಳೊಂದಿಗೆ ಸಂಯೋಜಿಸಿದ್ದು ವೃತ್ತಿಪರರು ತಮಗೆ ವಿಶಿಷ್ಟವೆನಿಸುವ ಸಿಗ್ನೇಚರ್ ಲುಕ್ ರೂಪಿಸಿಕೊಳ್ಳಬಹುದು. ವರ್ಕ್ ವೇರ್ ನ ಪ್ರತಿ ಉಡುಪನ್ನೂ ಕ್ರಾಫ್ಟ್ ಮಾರ್ಕ್ ಟ್ಯಾಗ್ ಮೂಲಕ ಪರಿಶೀಲಿಸಲಾಗಿದ್ದು ಇದು ಎಲ್ಲ 350+ ಮಳಿಗೆಗಳಲ್ಲಿ ಕರಕುಶಲತೆಯ ಕೆಲಸದ ವಿಶ್ವಾಸಾರ್ಹತೆ ದೃಢೀಕರಿಸುತ್ತದೆ.