Fashion Tips 2026: ರೂಪದರ್ಶಿಗಳಂತೆ ಕಾಣಿಸಲು ಇಲ್ಲಿವೆ ಸ್ಟೈಲಿಂಗ್ ಟಿಪ್ಸ್
Styling Tips: ನೀವೂ ಕೂಡ ರ‍್ಯಾಂಪ್ ಮೇಲೆ ವಾಕ್ ಮಾಡುವ ರೂಪದರ್ಶಿಗಳಂತೆ ಉದ್ದನಾಗಿ ಅಂದವಾಗಿ ಹಾಗೂ ಅತ್ಯಾಕರ್ಷಕವಾಗಿ ಕಾಣಿಸಬೇಕೇ! ಹಾಗಾದಲ್ಲಿ, ನಿಮ್ಮ ಡ್ರೆಸ್‌ಕೋಡ್‌ನಲ್ಲಿ ಮತ್ತು ಸ್ಟೈಲಿಂಗ್‌ನಲ್ಲಿ ಕೊಂಚ ಬದಲಾವಣೆ ತನ್ನಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ರ‍್ಯಾಂಪ್ ಮೇಲೆ ವಾಕ್ ಮಾಡುವ ರೂಪದರ್ಶಿಗಳಂತೆ ನೀವೂ ಕೂಡ ಕಾಣಿಸಬೇಕಾ! ಹಾಗಾದಲ್ಲಿ ನಿಮ್ಮ ಡ್ರೆಸ್‌ಕೋಡ್ ಹಾಗೂ ಸ್ಟೈಲಿಂಗ್‌ನಲ್ಲಿ ಬದಲಾವಣೆ ತನ್ನಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಧರಿಸುವ ಉಡುಪಿನಲ್ಲಿ ಕೇವಲ ಸ್ಟೈಲಾಗಿ ಕಾಣಿಸುವುದು ಮಾತ್ರವಲ್ಲ, ಉದ್ದನಾಗಿಯೂ ಕಾಣಿಸಬೇಕೆಂಬ ಆಸೆ ಬಹುತೇಕ ಕುಳ್ಳಗಿರುವ ಹುಡುಗಿಯರಿಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಹೈ ಹೀಲ್ಸ್ ಸ್ಯಾಂಡಲ್ಸ್ ಹೊರತು ಪಡಿಸಿ, ತಮ್ಮ ಸ್ಟೈಲಿಂಗ್‌ನಲ್ಲಿ ಕೊಂಚ ಬದಲಾವಣೆ ಹಾಗೂ ಉಡುಪುಗಳ ಆಯ್ಕೆಯಲ್ಲಿ ಜಾಣತನ ತೋರಿದಲ್ಲಿ ನೋಡುಗರಿಗೆ ನೀವು ಕೂಡ ಉದ್ದನಾಗಿ ಆಕರ್ಷಕವಾಗಿ ಕಾಣಿಸಬಹುದು. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಪಾಲಿಸಿ ನೋಡಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ವರ್ಟಿಕಲ್ ಲೈನ್ಸ್ ಡ್ರೆಸ್‌ಗಳ ಆಯ್ಕೆ
ಪ್ರಿಂಟೆಡ್ ಡ್ರೆಸ್‌ಗಳ ಆಯ್ಕೆ ಮಾಡುವುದಾದದಲ್ಲಿ ಆದಷ್ಟೂ ವರ್ಟಿಕಲ್ ಸ್ಟ್ರೈಪ್ಸ್ ಚೂಸ್ಮಾಡಿ. ಇವು ಧರಿಸಿದಾಗ ಉದ್ದನಾಗಿ ಕಾಣುವಂತೆ ಇಲ್ಯೂಷನ್ ಕ್ರಿಯೇಟ್ ಮಾಡುತ್ತವೆ. ಉದಾಹರಣೆಗೆ ಸ್ಟ್ರೈಫ್ಸ್ ಫ್ರಾಕ್, ಪ್ಯಾಂಟ್, ಮ್ಯಾಕ್ಸಿ, ಟಾಪ್ ಸೇರಿದಂತೆ ಹಲವು ಜೆಮೆಟ್ರಿಕಲ್ ಡಿಸೈನವನ್ನು ಧರಿಸಬಹುದು. ಯಾವುದೇ ಕಾರಣಕ್ಕೂ ಹಾರಿಝಾಂಟಲ್ ಸ್ಟ್ರೈಪ್ಸ್ ಇರುವ ಉಡುಪಿನ ಆಯ್ಕೆ ಬೇಡ. ಇದು ನಿಮ್ಮನ್ನು ಪ್ಲಂಪಿಯಾಗಿ ಬಿಂಬಿಸುತ್ತವೆ ಎಂಬುದನ್ನು ನೆನಪಿನಲ್ಲಿಡಿ.
ಹೈ ವೇಸ್ಟ್ ಪ್ಯಾಂಟ್ ಧರಿಸಿ
ಹೈ ವೇಸ್ಟ್ ಪ್ಯಾಂಟ್‌ಗಳು ಟಮ್ಮಿಯ ಭಾಗದ ಮೇಲೆ ಕೂರುವುದರಿಂದ ನೋಡಲು ನಿಮ್ಮ ಕಾಲುಗಳು ಉದ್ದನಾಗಿ ಕಾಣುತ್ತವೆ. ಇದಕ್ಕೆ ಕ್ರಾಪ್ಟಾಪ್ ಧರಿಸುವುದರಿಂದ ನೀವು ಉದ್ದನಾಗಿ ಕಾಣಿಸುವಿರಿ. ಹಾಗೆಂದು ತೀರಾ ಲಾಂಗ್ ಟಾಪ್ ಧರಿಸಿದಲ್ಲಿ ಯಾವುದೇ ಬದಲಾವಣೆ ಕಾಣದು.
ದೊಗಲೆ ಡ್ರೆಸ್‌ಗಳನ್ನು ಅವಾಯ್ಡ್ ಮಾಡಿ
ಆದಷ್ಟೂ ಸ್ಲಿಮ್ ಫಿಟ್ ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಲೂಸಾದ ಅಥವಾ ದೊಗಲೆಯಾದ ಡ್ರೆಸ್‌ಗಳು ನಿಮ್ಮನ್ನು ಮತ್ತಷ್ಟು ಪ್ಲಂಪಿಯಾಗಿರುವಂತೆ ಬಿಂಬಿಸಬಹುದು. ಇಲ್ಲವೇ ಕುಳ್ಳಗೆ ಕಾಣುವಂತೆ ಮಾಡಬಹುದು.
ಮಾನೋಕ್ರೋಮ್ ಶೇಡ್ಸ್
ನೀವು ಮಾನೋಕ್ರೋಮ್ ಶೇಡ್‌ನ ಉಡುಪುಗಳನ್ನು ಆಯ್ಕೆ ಮಾಡಿ ಧರಿಸಿದಲ್ಲಿ ಟಾಲ್ ಲುಕ್ನ ಇಲ್ಯೂಷನ್ ಕ್ರಿಯೇಟ್ ಮಾಡಬಹುದು. ಸಾಲಿಡ್ ಕಲರ್ಸ್‌ನ ಡ್ರೆಸ್‌ಗಳನ್ನು ಧರಿಸುವುದು ಉತ್ತಮ.
ಅತಿಯಾಗಿರುವ ಫ್ರಿಲ್ ಉಡುಪು ಬೇಡ
ಹೆಚ್ಚು ಫ್ರಿಲ್ ಹಾಗೂ ನೆರಿಗೆಗಳಿರುವ ಟಾಪ್ ಹಾಗೂ ಫ್ರಾಕ್‌ಗಳನ್ನು ಧರಿಸಬೇಡಿ. ಇವು ದೇಹದ ಭಾಗವನ್ನು ಅಗಲ ಕಾಣುವಂತೆ ಮಾಡಿ ಕುಳ್ಳಗೆ ಕಾಣುವಂತೆ ಬಿಂಬಿಸುತ್ತವೆ. ಇನ್ನು ಅಗಲವಾದ ನೆಕ್‌ಲೈನ್ ಹಾಗೂ ವಿ ನೆಕ್ಲೈನ್ ಇರುವಂತಹ ಡ್ರೆಸ್‌ಗಳು ಟಾಲ್ ಇಲ್ಯೂಷನ್ ಕ್ರಿಯೆಟ್ ಮಾಡುತ್ತವೆ.