ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಅಭಿವ್ಯಕ್ತಿ ಸ್ವಾತಂತ್ರ್ಯ - ನೇಪಾಳ ಗಲಭೆ

ಇತ್ತೀಚಿಗಷ್ಟೆ ನಡೆದ ನಮ್ಮ ನೆರೆಯ ನೇಪಾಳದ (Nepal) ಗಲಭೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ನೇಪಾಳದ ಘಟನೆಯು ನೀವು ಈಗ ಓದುತ್ತಿರುವ ವಿಷಯ “ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ”ಉತ್ತಮವಾದ ಉದಾಹರಣೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಧಾರವಾದ ಸಾಮಾಜಿಕ ಜಾಲಾತಾಣಗಳ ಮೇಲೆ ನಿಷೇಧ.

ಇತ್ತೀಚಿಗಷ್ಟೆ ನಡೆದ ನಮ್ಮ ನೆರೆಯ ನೇಪಾಳದ ಗಲಭೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ನೇಪಾಳದ ಘಟನೆಯು ನೀವು ಈಗ ಓದುತ್ತಿರುವ ವಿಷಯ “ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ”ಉತ್ತಮವಾದ ಉದಾಹರಣೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಧಾರವಾದ ಸಾಮಾಜಿಕ ಜಾಲಾತಾಣಗಳ ಮೇಲೆ ನಿಷೇಧ ಹೇರಿರುವ ಕಾರಣದಿಂದ ಯುವ ಜನತೆಯು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆಂದು ಮಾಧ್ಯಮಗಳ ವರದಿಗಳಲ್ಲಿ ತಿಳಿದು ಬಂದಿದೆ. ಇದರ ಪರಿಣಾಮವಾಗಿ, ತೀವ್ರ ಹಿಂಸಾಚಾರಗಳು ನಡೆದಿರುವುದು ದುರದೃಷ್ಟ.

ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರದ ಬಹಳ ದೊಡ್ಡ ಉದಾಹರಣೆ. ಈ ಜಾಲಾತಾಣಗಳು ಎಷ್ಟು ಮನರಂಜನೆ, ಮಾಹಿತಿಗಳನ್ನು ನೀಡುತ್ತವೆಯೋ ಅಷ್ಟೇ ಮಾನವ ಸಂಪಕ೯ಕ್ಕೆ ಎಡೆಮಾಡಿಕೊಡುತ್ತದೆ. ಇಲ್ಲಿ ಯಾವುದೇ ಜಾತಿ/ಮತ/ಧರ್ಮ/ವಯಸ್ಸಿನ ನಿಬ೯ಂಧಗಳಿಲ್ಲದೇ ತಮ್ಮ ವಯುಕ್ತಿಕ ಜೀವನ, ದೃಷ್ಟಿಕೋನ, ಅನಿಸಿಕೆಗಳನ್ನು ಸಾವ೯ಜನಿಕವಾಗಿ ಹಂಚಿಕೊಳ್ಳುವಂತಹ ಒಂದು ವೇದಿಕೆ. ವಿಶೇಷವಾಗಿ ಯುವಕರ ಮತ್ತು ಯುವತಿಯರ ಬದುಕಿನ್ನಲ್ಲಿ ಸಾಮಾಜಿಕ ಜಾಲಾತಾಣಗಳು ಒಂದು ಮಹತ್ವದ ಭಾಗ. ಮುಂಜಾನೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಸಾಮಾಜಿಕ ಜಾಲಾತಾಣಗಳಲ್ಲೇ ತಮ್ಮನ್ನು ತಾವು ತೊಡಗಿಸಿಕೆೊಂಡಿರುತ್ತಾರೆ. ಕ್ರೀಡೆ ಯಿಂದ ಹಿಡಿದು ರಾಜಕಾರಣದ ತನಕ ತಮ್ನ ಎಲ್ಲಾ ದೃಷ್ಟಿಕೋನ, ಅನಿಸಿಕೆಗಳನ್ನು ಹಂಚಿಕೊಂಡು ವಿನಿಮಯ ಮಾಡಿಕೊಳ್ಳುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಾರೆ. ನೇಪಾಳದಲ್ಲಿ ಇಂತಹ ಒಂದು ವೇದಿಕೆಯನ್ನು ಒಮ್ಮೇಲೆ ನಿಷೇಧಿಸಿದಾಗ, ಯುವ ಜನತೆಯ ಆಕ್ರೋಶ ಮುಗಿಲೆದ್ದು ಸಕಾ೯ರವೇ ಪತನವಾಯಿತು.

ವಿದ್ಯಾಥಿ೯ಗಳಿಗೆ(18-25) ಅಥವ ಮಕ್ಕಳಿಗೆ(12-16)

ಸ್ವಾತಂತ್ರ್ಯವೆನ್ನುವುದು ಅತ್ಯಗತ್ಯ. ಪ್ರಮುಖವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ . ತಮ್ಮ ಭಾವನೆಗಳನ್ನು ಮತ್ತು ಮನಸ್ಥಿತಿಯನ್ನು ವ್ಯಕ್ತಪಡಿಸಲು ಹಿರಿಯಾರಾದವರು ಅಥವ ಅಧಿಕಾರದಲ್ಲಿರುವವರು ಸ್ವಾತಂತ್ರ್ಯ ನೀಡಲೇಬೇಕು. ಹೀಗೆ ಮಾಡುವುದರಿಂದ ಯುವ ಮನಸ್ಸನ್ನು ಅಥ೯ಮಾಡಿಕೊಳ್ಳಲು ಮತ್ತು ಅವರ ಜೊತೆ ಒಡನಾಟ ಮತ್ತು ಸಂಪಕ೯ ಬೆಳೆಸಲು ನೆರವಾಗುತ್ತದೆ. ಇಬ್ಬರ ನಡುವೆ ಸಾಮರಸ್ಯದ ಬಾಂಧವ್ಯ ಬೆಳೆಯುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಮಕ್ಕಳ ಮತ್ತು ವಿದ್ಯಾಥಿ೯ಗಳ ಮಾನಸಿಕ ಸ್ವಾಸ್ಥ್ಯ ಮತ್ತು ವಯುಕ್ತಿಕ ಬೆಳವಣಿಗೆಯ ಜೊತೆ ನೇರ ಸಂಪಕ೯ವನ್ನು ಹೊಂದಿದೆ.

ವಯುಕ್ತಿಕ ಬೆಳವಣಿಗೆ - ಬುದ್ದಿ ಮತ್ತು ಮಾನಸಿಕ

ಅಭಿವ್ಯಕ್ತಿ ಸ್ವಾತಂತ್ರದಿಂದ ಯುವ ಜನತೆಯ ಮಾನಸಿಕ ಸ್ವಾಸ್ಥ್ಯ ಸುಧಾರಿಸುತ್ತದೆ. ಇವರಿಗೆ, ತಮ್ಮ ಅನಿಸಿಕೆ, ಅಗತ್ಯಗಳು ಹಾಗು ಬೇಡಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಿದಾಗ, ವಯುಕ್ತಿವಾಗಿ ಬೆಲೆ ಮತ್ತು ಗೌರವ ಸಿಕ್ಕಿದಂತಾಗುತ್ತದೆ. ನಮ್ಮ ಅನಿಸಿಕೆಗಳನ್ನು ಪರಿಗಣಿಸುತ್ತಾರೆ, ನಮ್ಮ ಅಸ್ತಿತ್ವವಕ್ಕೆ ಬೆಲೆಯಿದೆ ಎಂದು ಸಾಮಾಧಾನಕ್ಕೆ ಬರುತ್ತಾರೆ. ಪರಿಣಾಮವಾಗಿ ಇವರ ಆತ್ಮ ವಿಶ್ವಾಸ ಮತ್ತು ಆತ್ಮ ಗೌರವವೂ ಕೂಡ ಹೆಚ್ಚಾಗುತ್ತದೆ. ಹಾಗೆಯೇ, ಆತಂಕ ಮತ್ತು ಒತ್ತಡಗಳು ಕಡಿಮೆಯಾಗುತ್ತವೆ.

ಮುಕ್ತವಾಗಿ ವ್ಯಕ್ತಪಡಿಸುವುದು ಆತ್ಮಶೋಧನೆ ಮತ್ತು ಕಲ್ಪನಾ ಶಕ್ತಿಯನ್ನು ಬಲಪಡಿಸಲು ಅನುಕೂಲ ಮಾಡಿಕೊಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ ಯುವ ಜನತೆಗೆ ತಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ವ್ಯಕ್ತಪಡಿಸುವ ಮೂಲಕ ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಹಾಗು ಅಧಿಕಾರವನ್ನು ಯಾವುದೇ ಪ್ರತೀಕಾರ ಅಥವ ಪ್ರತಿಕ್ರಿಯೆಯ ಭಯವಿಲ್ಲದೆ ಪ್ರತಿಪಾದಿಸುವುದಕ್ಕೆ ಅನುಕೂಲ ಮಾಡಿಕೊಳ್ಳುತ್ತದೆ.

ವೈಜ್ಞಾನಿಕ ಅಧ್ಯಯನಗಳು ಹೆಚ್ಚಿನ ಅರಿವಿನ ಸಾಮರ್ಥ್ಯ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯು ಮುಕ್ತ ಭಾಷಣಕ್ಕೆ ಹೆಚ್ಚಿನ ಬೆಂಬಲವನ್ನು ನೀಡುತ್ತವೆ ಎಂದು ತೋರಿಸುತ್ತವೆ.

ಬುದ್ಧಿ ಶಕ್ತಿ ಬೆಳವಣಿಗೆ - ( ಅರಿವು, ತಿಳುವಳಿಕೆ , ವಿವೇಕ, ಜ್ಞಾಪಕ ಮತ್ಕು ಗ್ರಹಿಸುವ ಶಕ್ತಿ) . ಅಭಿವ್ಯಕ್ತಿ ಸ್ವಾತಂತ್ರ್ಯ ಯುವ ಜನತೆಯ ಬುದ್ಧಿಶಕ್ತಿ ಬೆಳವಣಿಗೆಯಲ್ಲಿ ಮಹತ್ವವಾದ ಪಾತ್ರವನ್ನು ಹೊಂದಿದೆ. ಇವರು ಪ್ರಪಂಚವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ, ಗ್ರಹಿಸುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಬುದ್ಧಿಯ ಸಾಮರ್ಥ್ಯಗಳನ್ನು ಹೇಗೆ ಬಳಸುತ್ತಾರೆ ಎನ್ನುವುದರ ಮೇಲೆ ತನ್ನ ಹೆಚ್ಚಿನ ಪ್ರಭಾವವನ್ನು ಬೀರಿ, ಅಭಿವೃದ್ಧಿಗೊಳಿಸುತ್ತದೆ. ತಮ್ಮ ಭಾಷೆಯಲ್ಲಿ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಮಕ್ಕಳು ತಮ್ಮ ಭಾಷೆಯನ್ನು ಅರ್ಥಮಾಡಿಕೊಂಡು ಸುಧಾರಿಲಿಕೆೊಳ್ಳಲು ಸಹಾಯ ಮಾಡುತ್ತದೆ. ಯುವ ಜನರಲ್ಲಿ ಹೆಚ್ಚಿನ ಸ್ವಯಂ ಜಾಗೃತಿಯನ್ನು ಉಂಟುಮಾಡಿ, ನಿಷ್ಪ್ರಯೋಜಕ ಅಥವ ನೆಗೆಟೀವ್ ಆಲೋಚನೆಗಳಿಂದ ಹೊರಬರುವುದಕ್ಕೆ ಸಾಮರ್ಥ್ಯವನ್ನು ನೀಡುತ್ತದೆ.

(ಮನಸ್ಸಿನ ಹತೋಟಿ) ತಮ್ಮನ್ನು ತಾವು ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳುವುದರಿಂದ, ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ತಮ್ಮ ಹತೋಟಿಯಲ್ಲಿ ತೆೆಗೆದುಕೊಳ್ಳಬಹುದು. ತಮ್ಮ ಅನಿಸಿಕೆಯನ್ನು ಎಲ್ಲಿ, ಎಷ್ಚರ ಮಟ್ಟಿಗೆ ಮತ್ತು ಯಾವ ರೀತಿಯಲ್ಲಿ ವ್ಯಕ್ತಪಡಿಸಬೇಕು ಎನ್ನುವುದರ ಅರಿವೂ ಕೂಡ ಮೂಡುತ್ತದೆ.

ಸಾಮಾಜಿಕ ಅಭಿವೃದ್ಧಿ

ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಲು ಅನುಕೂಲವಾಗುತ್ತದೆ. ವಯುಕ್ತಿಕ ಭಾವನೆಗಳು, ಅನುಭವಗಳು ಮತ್ತು ಅಭಿಪ್ರಾಯಗಳನ್ನು ಮಾತ್ರವಲ್ಲದೆ ಇನೋವೇಷನ್ಸ್, ಡಿಸ್ಕವೀರೀಸ್, ಐಡಿಯಾಗಳು, ವಿಚಾರಧಾರೆಗಳು, ಕಲೆ, ಸಾಹಿತ್ಯ ಮುಂತಾದವುಗಳನ್ನು ವಿನಿಮಯ ಮಾಡಿಕೊಂಡಾಗ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಕಾಣಬಹುದು. ಮುಕ್ತ ಸಂವಾದವು ಸಾಮಾಜಿಕ ಬೆಂಬಲವನ್ನು ಒದಗಿಸುತ್ತದೆ ಮತ್ತು ಇತರರೊಂದಿಗೆ ಹೆಚ್ಚು ಅಧಿಕೃತ ಸಂಪರ್ಕಗಳಿಗೆ ಅವಕಾಶ ನೀಡುತ್ತದೆ.

ಸಾಮಾಜಿಕ ಪ್ರಗತಿಗೆ ಅನುಕೂಲ ಮಾಡಿಕೊಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಮುಕ್ತ ವಿಚಾರ ವಿನಿಮಯಕ್ಕೆ ಅವಕಾಶ ನೀಡುತ್ತದೆ, ಇದು ನಾವೀನ್ಯತೆ, ಸಾಂಸ್ಕೃತಿಕ ಬೆಳವಣಿಗೆ ಮತ್ತು ಸಂಘರ್ಷಗಳನ್ನು ಬಗೆಹರಿಸುವುದಕ್ಕೆ ನೆರವು ಮಾಡಿಕೊಡುತ್ತದೆ.

ಅಧಿಕಾರದ ಮೇಲಿನ ಪರಿಶೀಲನೆಗಳು:

ಇದು ಸರ್ವಾಧಿಕಾರದ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ . ಸರ್ವಾಧಿಕಾರತ್ವವನ್ನು ಪ್ರಶ್ನಿಸುವ ಹಾಗೂ ಪರಿಶೀಲಿಸುವ ಮನಸ್ಥೈ ಯ೯ಕ್ಕೆ ಅಣಿವು ಮಾಡಿಕೊಡುತ್ತದೆ. ಸಾರ್ವಜನಿಕ ಚರ್ಚೆ ಮತ್ತು ಭಿನ್ನಾಭಿಪ್ರಾಯ ಮೂಲಕ ಅಧಿಕಾರದಲ್ಲಿರುವವರನ್ನು ತಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಲು ಒತ್ತಾಯಿಸುತ್ತದೆ.

ವಾಕ್ ಸ್ವಾತಂತ್ರ್ಯವು ವಿಭಿನ್ನ ದೃಷ್ಟಿಕೋನಗಳಿಗೆ ಸಹಿಷ್ಣುತೆಯನ್ನು ಬೆಳೆಸುತ್ತದೆ, ಒಪ್ಪದೇ ಇದ್ದರೂ, ಬೇರೆೊಬ್ಬರ ಭಿನ್ನಾಭಿಪ್ರಾಯವನ್ನು ಗೌರವಿಸುವ ಮತ್ತು ಸಹಿಸಿಕೊಳ್ಳುವ ಸಾಮಥ್ಯ೯ವನ್ನು ತುಂಬುತ್ತದೆ. ವಿವಾದತ್ಮಕ, ವಿಮರ್ಶಾತ್ಮಕ ಭಾಷಣವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಕೂಡ ಅಭಿವ್ಯಕ್ತಿ ಸ್ವಾತಂತ್ರ ಹೊಂದಿದೆ.

ಅಭಿವೃದ್ಧಿ ಸ್ವಾತಂತ್ರ್ಯ ಕೊರತೆಯ ದುಷ್ಪರಿಣಾಮಗಳು

ಸ್ವಾತಂತ್ರ್ಯವನ್ನು ಒದಗಿಸದೇ ಇದ್ದಾಗ, ತಮ್ಮ ಭಾವನೆಗಳನ್ನು ಬಲವಂತವಾಗಿ ಹತ್ತಿಕ್ಕಿಕೊಳ್ಳುವ ಸಂದಭ೯ ಉದ್ಭವಾಗುತ್ತದೆ. ಇದು ದೀಘ೯ ಕಾಲ ಮುಂದುವರೆದು ಮಿತಿಮೀರಿ ಒಂದು ದಿನ ದೊಡ್ಡ ಪ್ರಮಾಣದಲ್ಲಿ ಸ್ಪೋಟವಾಗಬಹುದು. ಪರಿಣಾಮವಾಗಿ, ಆಕ್ರೋಶ, ಅಶಾಂತಿ, ದ್ವೇಷಗಳಿಗೆ ಉಂಟಾಗಿ ಕ್ರಾಂತಿಗಳೇ ಉದ್ಭವವಾಗಬಹುದು. ಯುವಕರ ಮನಸ್ಸಿನ್ನಲ್ಲಿ ಭಯ ಮತ್ತು ಅಭದ್ರತೆಗಳೂ ಕೂಡ ಕಾಣಬಹುದು. ಸ್ವಯಂ ಸೆನ್ಸರ್ ಶಿಪ್ ಮಾಡಿಕೊಳ್ಳುವುದರಿಂದ ಆತಂಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

ಅಭಿವ್ಯಕ್ತಿತ್ವ ಮತ್ತು ವಿಚಾರ ವಿನಿಮಯಗಳ ಮೇಲೆ ನಿಬ೯ಂಧವನ್ನು ಹೇರಿದಾಗ ಆತಂಕ ಮತ್ತು ಒಂಟಿತನದಂತಹ ಮಾನಸಿಕ ಯಾತನೆಯನ್ನು ಸ್ವನಿಯಂತ್ರಣದ (self censorship) ಮೂಲಕ ಅನುಭವಿಸಬೇಕಾಗುತ್ತದೆ. ದ ಅಭಿವ್ಯಕ್ತಿ ಮತ್ತು ಮಾನ್ಯತೆ ದೊರಕುವುದು . ಮಕ್ಕಳು ಮತ್ತು ವಿದ್ಯಾಥಿ೯ಗಳು ತಮ್ಮ ಅನಿಸಿಕೆ ಮತ್ತು ಭಾವನೆಗಳನ್ನು ಹತ್ತಿಕ್ಕಿ, ಮುಕ್ತವಾಗಿ ವ್ಯಕ್ತಪಡಿಸದೇ ಇದ್ದಲ್ಲಿ, ಮಾನಸಿಕ ಯಾತನೆ, ಅಸ್ವಸ್ಥತೆ ಗುರಿಯಾಗಬಹುದು, ಕ್ರಮೇಣವಾಗಿ ಆತಂಕ ಖಿನ್ನತೆಗಳಿಗೂ ಬಲಿಯಾಗಬಹುದು. ಸ್ವಯಂ ಸೆನ್ಸಾರ್ಶಿಪ್ ಒಂಟಿತನ, ಅಸಹಾಯಕತೆ, ಹೆಚ್ಚಿದ ಆತಂಕ ಮತ್ತು ಒತ್ತಡಕ್ಕೆ ಕಾರಣವಾಗಬಹುದು.

ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಸಮರ್ಥತೆಯು ಸಾಮಾಜಿಕ ಸಂಭಾಷಣೆ ಮತ್ತು ಸಂಪರ್ಕಕ್ಕೆ ತಡೆಗೋಡೆಯನ್ನು ಸೃಷ್ಟಿಸುತ್ತದೆ ಮತ್ತು ವ್ಯಕ್ತಿಯು ಶಕ್ತಿಹೀನತೆ(ಪವರ್ ಲೆಸ್)ಯ ಭಾವನೆಗೆ ಒಳಗಾಗುತ್ತಾನೆ/ಳೆ. ದುರ್ಬಲಗೊಂಡ ಮನಸ್ಸುಗಳು: ಭಿನ್ನಾಭಿಪ್ರಾಯ ಮತ್ತು ಅಹಿತಕರ ವಿಚಾರಗಳನ್ನು ನಿಗ್ರಹಿಸುವುದು "ದುರ್ಬಲ ಮನಸ್ಸುಗಳಿಗೆ" ಕಾರಣವಾಗಬಹುದು ಮತ್ತು ವಿಮರ್ಶಾತ್ಮಕ ಚಿಂತನೆ ಮತ್ತು ಬೌದ್ಧಿಕ ಬೆಳವಣಿಗೆಯನ್ನು ತಡೆಯುತ್ತದೆ.

ಈ ಸುದ್ದಿಯನ್ನೂ ಓದಿ: ʻಎಂಎಸ್‌ ಧೋನಿ ತನ್ನ ನೆಚ್ಚಿನ ಆಟಗಾರರಿಗೆ ಮಾತ್ರ ಬೆಂಬಲ ನೀಡಿದ್ದರುʼ: ಮನೋಜ್‌ ತಿವಾರಿ ಗಂಭೀರ ಆರೋಪ!

ಮೇಲೆ ವಿವರಿಸಿದ ಈ ಎಲ್ಲಾ ಕಾರಣಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯವು ಯುವ ಜನತೆಯ ಬದುಕಿನಲ್ಲಿ ಮಹತ್ವವಾದ ಪಾತ್ರವನ್ನು ಹೊಂದಿದೆ. ಇದನ್ನು ಅರಿತು, ಸರಿಯಾದ ಪ್ರಮಾಣ ಮತ್ತು ರೀತಿಯಲ್ಲಿ ಸ್ವಾತಂತ್ರ ನೀಡುವುದು ನಮ್ಮೆಲ್ಲರ ಕತ೯ವ್ಯ

ಡಿ. ಆರ್. ಭವ್ಯಾ ವಿಶ್ವನಾಥ್

View all posts by this author