ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಡ್ಯಾನ್ಸ್‌ಗಳಿಂದ ಹಿಡಿದು ಜೀವನಶೈಲಿಯಲ್ಲಿನ ಬದಲಾವಣೆಗಳವರೆಗೆ ಜೆನ್ ಝೆಡ್ ಟ್ರೆಂಡ್‌ಗಳು ಸದ್ದು ಮಾಡುತ್ತಿವೆ. ಆದರೆ, ಜೆನ್ ಝಡ್‍ಗಳು ಮಾಡುವ ಅವತಾರಕ್ಕೆ ಬಯ್ಯುವವರೇ ಹೆಚ್ಚು. ಆದರೆ ಈ ಕಾರಣಕ್ಕಾಗಿ ಅವರನ್ನು ಹೊಗಳುತ್ತಿದ್ದಾರೆ. ಯಾಕೆಂದರೆ ಅವರ ಟ್ರೆಂಡ್‌ಗೆ ಇದೀಗ ಸೇರ್ಪಡೆಯಾಗಿರುವುದು ಗ್ರೀನ್ ಸೆಕ್ಸ್ (green sex). ಆರೋಗ್ಯ ಮತ್ತು ಪರಿಸರ ಸ್ನೇಹಿ ಜೀವನಶೈಲಿಗೆ ಒತ್ತು ನೀಡುವ ಈ ಟ್ರೆಂಡ್ ಅನ್ನು ಮಿಲೇನಿಯಲ್ಸ್ (millennials) ಮಾತ್ರವಲ್ಲ, ಕೆಲ ಮಟ್ಟಿಗೆ ಜೆನ್ ಎಕ್ಸ್ ಕೂಡ ಇದನ್ನು ಸ್ವೀಕರಿಸಿದ್ದಾರೆ. ಸಾಮಾನ್ಯವಾಗಿ ಜೆನ್ ಝೆಡ್ ಟ್ರೆಂಡ್‌ಗಳನ್ನು ಟೀಕಿಸುವವರೇ ಇದನ್ನು ಮೆಚ್ಚಿಕೊಂಡಿದ್ದಾರೆ. ಇದರ ಕುರಿತು ಚರ್ಚೆಗಳು ಸಕಾರಾತ್ಮಕವಾಗಿ ವಿಸ್ತರಿಸುತ್ತಿರುವಂತೆ, ಗ್ರೀನ್ ಸೆಕ್ಸ್ ಎಂಬ ಪರಿಕಲ್ಪನೆ ಹೆಚ್ಚು ಜನರ ಗಮನ ಸೆಳೆಯುತ್ತಿದೆ.
ಗ್ರೀನ್ ಸೆಕ್ಸ್ ಎಂದರೇನು?
ಗ್ರೀನ್ ಸೆಕ್ಸ್ ಅನ್ನು ಸರಳವಾಗಿ ಹೇಳುವುದಾದರೆ, ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಉತ್ಪನ್ನಗಳು ಹಾಗೂ ಅಭ್ಯಾಸಗಳಿಂದ ಪರಿಸರಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ. ಹವಾಮಾನ ಬದಲಾವಣೆಯ ಬಗ್ಗೆ ಜೆನ್ ಝೆಡ್ ಪೀಳಿಗೆ ಹೆಚ್ಚು ಜಾಗರೂಕವಾಗಿದೆ. ತಮ್ಮ ಪ್ರಣಯ ಜೀವನದಲ್ಲೂ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಕಡಿಮೆ ಮಾಡಬೇಕು ಅನ್ನೋದು ಇವರ ಉದ್ದೇಶ. ಅವರು ತಮ್ಮ ಪ್ರೇಮ ಹಾಗೂ ವೈಯಕ್ತಿಕ ಜೀವನದಲ್ಲಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ
ಸಾಮಾನ್ಯವಾಗಿ ಬಳಸುವ ಸಾಂಪ್ರದಾಯಿಕ ಕಾಂಡೋಮ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಪ್ರಾಣಿಜನ್ಯ ಪದಾರ್ಥಗಳಿರುತ್ತದೆ. ಇದನ್ನು ಬಳಸಲು ಇಷ್ಟಪಡದ ಜೆನ್ ಝೆಡ್ ಮಂದಿ ಪರಿಸರಕ್ಕೆ ಹಾನಿ ಮಾಡದ, ವೆಗನ್ ಲ್ಯಾಟೆಕ್ಸ್‌ನಿಂದ ತಯಾರಿಸಲಾದ ಜೈವಿಕವಾಗಿ ಕರಗುವ (biodegradable) ಕಾಂಡೋಮ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇವು ಬಳಕೆಯ ಬಳಿಕ ಸ್ವಾಭಾವಿಕವಾಗಿ ಪರಿಸರದಲ್ಲಿ ಕರಗಿಹೋಗುತ್ತವೆ. ಇದರಿಂದ ಪ್ರಕೃತಿಗೆ ಆಗುವ ಹಾನಿ ಕಡಿಮೆಯಾಗುತ್ತದೆ.
ಅದೇ ರೀತಿ, ಪ್ಲಾಸ್ಟಿಕ್ ಸೆಕ್ಸ್ ಟಾಯ್ಸ್‌ಗಳ ಬದಲು ಈಗ ರಿಚಾರ್ಜ್ ಮಾಡಬಹುದಾದ ಸಾಧನಗಳು ಅಥವಾ ಪರಿಸರ ಸ್ನೇಹಿ, ದೀರ್ಘಕಾಲಿಕ ವಸ್ತುಗಳಿಂದ ತಯಾರಿಸಲಾದ ಉತ್ಪನ್ನಗಳು ಹೆಚ್ಚು ಬಳಕೆಗೆ ಬರುತ್ತಿವೆ. ಜೊತೆಗೆ, ರಾಸಾಯನಿಕ ರಹಿತ ಹಾಗೂ ಆರ್ಗ್ಯಾನಿಕ್ ಲ್ಯುಬ್ರಿಕಂಟ್‌ಗಳ ಬಳಕೆ ಕೂಡ ಹೆಚ್ಚುತ್ತಿದೆ. ಇದು ಆರೋಗ್ಯಕ್ಕೂ ಪರಿಸರಕ್ಕೂ ಅನುಕೂಲಕರವೆಂದು ಪರಿಗಣಿಸಲಾಗುತ್ತಿದೆ.
ಪ್ರಜ್ಞಾಪೂರ್ವಕ ಡೇಟಿಂಗ್
ಜೆನ್ ಝೆಡ್ ಪೀಳಿಗೆಗೆ ಪರಿಸರ ಜಾಗೃತಿ ಆಕರ್ಷಣೆಯು ಪ್ರಮುಖ ಅಂಶವಾಗುತ್ತಿದೆ. ಡೇಟಿಂಗ್ ಆ್ಯಪ್‌ಗಳಲ್ಲಿ ಪರಿಸರದ ಬಗ್ಗೆ ಕಾಳಜಿ ತೋರಿಸುವವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ತುಂಬಿದ ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿಯುವುದು ಅಥವಾ ದುಬಾರಿ ಉಡುಗೊರೆಗಳ ಬದಲು, ಪಾರ್ಕ್‌ಗಳಲ್ಲಿ ನಡೆಯುವುದು, ಒಟ್ಟಿಗೆ ಗಿಡ ನೆಡುವುದು ಹೀಗೆ ಪರಿಸರ ಸ್ನೇಹಿ ಡೇಟ್‌ಗಳು ದಿನೇದಿನೇ ಜನಪ್ರಿಯವಾಗುತ್ತಿವೆ.
ನೈತಿಕ ಬ್ರ್ಯಾಂಡ್‌ಗಳಿಗೆ ಬೆಂಬಲ
ಕೇವಲ ಲಾಭಕ್ಕಾಗಿ ಪರಿಸರವನ್ನು ಹಾಳು ಮಾಡುವ ಕಂಪನಿಗಳ ಉತ್ಪನ್ನಗಳನ್ನು ಇಂದಿನ ಯುವಜನರು ತಿರಸ್ಕರಿಸುತ್ತಿದ್ದಾರೆ. ಅದರ ಬದಲು, ನ್ಯಾಯಸಮ್ಮತ ವೇತನ ನೀಡುವ, ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ನೈತಿಕ ಬ್ರಾಂಡ್‌ಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಈ ಬದಲಾವಣೆ, ದಿನನಿತ್ಯದ ಆಯ್ಕೆಗಳು ಭೂಮಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಜಾಗೃತಿಯೊಂದಿಗೆ, ಉದ್ದೇಶಪೂರ್ವ ಹಾಗೂ ಅರ್ಥಪೂರ್ಣ ಜೀವನವನ್ನು ಹುಡುಕುತ್ತಿರುವ ಜೆನ್ ಝಡ್ ಪೀಳಿಗೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಪ್ರಾಣಿಜನ್ಯ ಪ್ರೋಟೀನ್ ಇಲ್ಲದ ಕಾಂಡೋಮ್‍ಗಳಿಂದ ಹಿಡಿದು ಸಹಜವಾಗಿ ನೈಸರ್ಗಿಕವಾಗಿ ಮಣ್ಣಿನಲ್ಲಿ ಕರಗುವ (ಬಯೋಡಿಗ್ರೇಡಬಲ್) ಉತ್ಪನ್ನಗಳವರೆಗೆ, ಒಮ್ಮೆ ಬಳಸಿ ಎಸೆಯುವ ಸೆಕ್ಸ್ ಟಾಯ್ ಬ್ಯಾಟರಿಗಳ ಬದಲಿಗೆ USB ಮೂಲಕ ಚಾರ್ಜ್ ಮಾಡಬಹುದಾದ ಸಿಲಿಕಾನ್ ಸಾಧನಗಳನ್ನು ಬಳಸುವುದು ಪರಿಸರಸ್ನೇಹಿ ಲಕ್ಷಣವಾಗಿದೆ. ಅಲೋವೆರಾ ಅಥವಾ ನೀರಿನ ಅಂಶವಿರುವ, ಪೆಟ್ರೋಕೆಮಿಕಲ್ ಮುಕ್ತ ಉತ್ಪನ್ನಗಳನ್ನು ಲೂಬ್ರಿಕೆಂಟ್‌ಗಳಾಗಿ ಬಳಸುತ್ತಾರೆ. ಸೆಕ್ಸ್ ಮಾತ್ರವಲ್ಲ, ಇವರು ಬಳಸುವ ಮೆನ್ಸ್ಟ್ರುವಲ್ ಕಪ್ ಅಥವಾ ಪೀರಿಯಡ್ ಪಾಂಟಿಗಳ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಬೆಡ್‌ರೂಮ್‌ನ ಬೆಡ್‌ಶೀಟ್‌ಗಳ ವಿಚಾರದಲ್ಲೂ ಕಾನ್ಶಿಯಸ್ ಆಗಿದ್ದಾರೆ. ಹತ್ತಿಯ ಬೆಡ್‌ಶೀಟ್‌ಗಳನ್ನೇ ಬಳಸುತ್ತಾರೆ.