ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಚ್ಚಿನ ಪ್ರೋಟೀನ್, ಕಡಿಮೆ ಕ್ಯಾಲೊರಿ: ಬೆಂಗಳೂರಿಗರಿಗಾಗಿ 'ಈಟ್‌ರೈಟ್ ಎಕ್ಸ್‌ಕ್ಲೂಸಿವ್ಸ್'

ಜನವರಿ 2026ರಲ್ಲಿ 'ಈಟ್‌ರೈಟ್' ಆರಂಭವಾಗಿದ್ದು, ಇದರ ಅಡಿಯಲ್ಲಿ ಆರೋಗ್ಯಕರ ಆಹಾರ ವನ್ನು ಜನರಿಗೆ ಸುಲಭವಾಗಿ ತಲುಪಿಸುವ ಗುರಿಯನ್ನು ಹಾಕಿಕೊಂಡಿದೆ. ಸದ್ಯ ದೇಶದ 50ಕ್ಕೂ ಹೆಚ್ಚು ನಗರ ಗಳಲ್ಲಿ ಈ ಸೇವೆ ಲಭ್ಯವಿದ್ದು, ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಆರೋಗ್ಯಕರ ತಿನಿಸುಗಳನ್ನು ಹೊಂದಿದೆ.

ಬೆಂಗಳೂರು: ಫಿಟ್‌ನೆಸ್ ಕಾಪಾಡಿಕೊಳ್ಳಬೇಕು, ಡಯಟ್ ಮಾಡಬೇಕು ಅನ್ನೋ ಕಾರಣಕ್ಕೆ ಎಷ್ಟೋ ಜನರು ತಮ್ಮ ಇಷ್ಟದ ಬಿರಿಯಾನಿ, ಬರ್ಗರ್ ತಿನ್ನುವುದನ್ನು ಬಿಡುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಕಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ 'ಈಟ್‌ರೈಟ್ ಎಕ್ಸ್‌ಕ್ಲೂಸಿವ್ಸ್' ಅನ್ನು ಸ್ವಿಗ್ಗಿ ಆರಂಭಿಸಿದೆ.

ಇದರಲ್ಲಿ ದಿಗ್ಗಜ ಹೋಟೆಲ್ ಬ್ರ್ಯಾಂಡ್‌ಗಳಾದ ಟ್ರಫಲ್ಸ್, ಎ2ಬಿ (ಅಡ್ಯಾರ್ ಆನಂದ ಭವನ್), ಬಿರಿಯಾನಿ ಬ್ಲೂಸ್, ದಿ ಬೌಲ್ ಕಂಪನಿ, ಪಾಟ್‌ಫುಲ್ ಸೇರಿದಂತೆ ಹಲವು ಸಂಸ್ಥೆಗಳ ಜೊತೆ ಸ್ವಿಗ್ಗಿ ಕೈಜೋಡಿಸಿದೆ. ಇವು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಇರುವ ರುಚಿಕರ ಖಾದ್ಯ ಗಳನ್ನು ತಯಾರಿ ಸಿದ್ದು, ಇವುಗಳನ್ನು ಆ್ಯಪ್‌ನಲ್ಲಿ ಪರಿಚಯಿಸಲಾಗಿದೆ.

ಹೋಟೆಲ್‌ಗಳು ಕಳೆದ 10-12 ವಾರಗಳಿಂದ ನಿರಂತರವಾಗಿ ಶ್ರಮಿಸಿ, ತಮ್ಮ ಜನಪ್ರಿಯ ಖಾದ್ಯಗಳ ರುಚಿ ಕೆಡದಂತೆ, ಅವುಗಳನ್ನು ಆರೋಗ್ಯಕರವಾಗಿ ವಿನ್ಯಾಸಗೊಳಿಸಿವೆ. ಇದರ ಅಡಿಯಲ್ಲಿ ಗ್ರಾಹಕ ರಿಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ.

ಗ್ರಾಹಕರು ತಮ್ಮ ಸ್ವಿಗ್ಗಿ ಆ್ಯಪ್'ನಲ್ಲಿ 'ಈಟ್‌ ರೈಟ್‌ʼ ವಿಭಾಗದ ಅಡಿಯಲ್ಲಿರುವ 'EatRight Exclu sives' ಮೇಲೆ ಕ್ಲಿಕ್ ಮಾಡಿದರೆ, ಈ ಎಲ್ಲಾ ಆರೋಗ್ಯಕರ ಖಾದ್ಯಗಳನ್ನು ಆರ್ಡರ್ ಮಾಡಬಹುದು.

ಇದನ್ನೂ ಓದಿ: Health Tips: ​30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!

ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಸ್ವಿಗ್ಗಿಯ ಫುಡ್ ಸ್ಟ್ರಾಟಜಿ ವಿಭಾಗದ ಉಪಾಧ್ಯಕ್ಷ ದೀಪಕ್ ಮಲೂ, "ಜನರು ಏನನ್ನು ತಿನ್ನಲು ಇಷ್ಟಪಡುತ್ತಾರೆ ಮತ್ತು ಆರೋಗ್ಯದ ದೃಷ್ಟಿಯಿಂದ ಏನನ್ನು ತಿನ್ನಬೇಕು ಎನ್ನುವುದರ ನಡುವೆ ದೊಡ್ಡ ಅಂತರವಿದೆ. ನಮ್ಮ ನೆಚ್ಚಿನ ಹಲವು ತಿನಿಸು ಗಳನ್ನು ಡಯಟ್ ಕಾರಣಕ್ಕೆ ದೂರ ಇಡುತ್ತೇವೆ. ಆದರೆ, ಆರೋಗ್ಯಕರ ಊಟ ಎಂದರೆ ಅದು ಬೋರಿಂಗ್ ಆಗಿರಬೇಕಿಲ್ಲ. ನಿಮ್ಮಿಷ್ಟದ ತಿನಿಸನ್ನೇ ನೀವು ಹೆಲ್ತಿಯಾಗಿ ತಿನ್ನಬಹುದು ಎಂಬುದನ್ನು ಸಾಬೀತುಪಡಿಸಲು ನಾವು ಈ ಹೆಜ್ಜೆ ಇಟ್ಟಿದ್ದೇವೆ. ಖ್ಯಾತ ಬ್ರ್ಯಾಂಡ್‌ಗಳು ತಮ್ಮ ತಿನಿಸುಗಳಲ್ಲಿ ಪ್ರೋಟೀನ್ ಹೆಚ್ಚಿಸಿ, ರಿಫೈನ್ಡ್ ಪದಾರ್ಥಗಳನ್ನು ಕಡಿಮೆ ಮಾಡಿ ಈ ಮೆನು ಸಿದ್ಧಪಡಿಸಿವೆ," ಎಂದಿದ್ದಾರೆ.

ಜನವರಿ 2026ರಲ್ಲಿ 'ಈಟ್‌ರೈಟ್' ಆರಂಭವಾಗಿದ್ದು, ಇದರ ಅಡಿಯಲ್ಲಿ ಆರೋಗ್ಯಕರ ಆಹಾರ ವನ್ನು ಜನರಿಗೆ ಸುಲಭವಾಗಿ ತಲುಪಿಸುವ ಗುರಿಯನ್ನು ಹಾಕಿಕೊಂಡಿದೆ. ಸದ್ಯ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ಈ ಸೇವೆ ಲಭ್ಯವಿದ್ದು, ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಆರೋಗ್ಯಕರ ತಿನಿಸುಗಳನ್ನು ಹೊಂದಿದೆ. ಪ್ರತಿ ತಿಂಗಳು 50 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇದರ ಲಾಭ ಪಡೆಯುತ್ತಿದ್ದು, ಬೆಂಗಳೂರಿನಲ್ಲಿ ನಡೆಯುವ ಪ್ರತಿ 6 ಆರ್ಡರ್‌ಗಳಲ್ಲಿ 1 'ಈಟ್‌ರೈಟ್' ಆರ್ಡರ್ ಆಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.