ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Holi Styling Tips 2026: ವೀಕೆಂಡ್‌ವರೆಗೂ ನಡೆಯುವ ಹೋಳಿ ಸೆಲೆಬ್ರೇಷನ್‌ಗೆ ಇಲ್ಲಿವೆ 5 ಸ್ಟೈಲಿಂಗ್‌ ಟಿಪ್ಸ್

ಕರ್ನಾಟಕ ಸೇರಿ ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುವ ಸಮೂಹ ಹಾಗೂ ಮಕ್ಕಳು ಈ ಹಬ್ಬದಲ್ಲಿ ಅತ್ಯುತ್ಸಾಹದಿಂದ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ. ಹೀಗಾಗಿ ಹೋಳಿ ಸೆಲೆಬ್ರೇಷನ್‌ನಲ್ಲಿ ಆಕರ್ಷಕವಾಗಿ ಕಾಣಿಸಲು ಇಲ್ಲಿವೆ ಕೆಲ ಟಿಪ್ಸ್.

ಚಿತ್ರಕೃಪೆ: ಪಿಕ್ಸೆಲ್‌
1/5

ವೀಕೆಂಡ್‌ವರೆಗೂ ನಡೆಯುವ ಹೋಳಿ ಸೆಲೆಬ್ರೇಷನ್‌ನಲ್ಲಿ ನೀವು ಆಕರ್ಷಕವಾಗಿ ಕಾಣಿಸಬೇಕೇ! ಹಾಗಾದಲ್ಲಿ ಈ 5 ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ಹೋಳಿ ಫ್ಯಾಷನ್‌ವೇರ್‌ ಆಯ್ಕೆ

ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಹೊಂದುವಂತಹ ಫ್ಯಾಷನ್‌ವೇರ್‌ಗಳನ್ನೇ ಆಯ್ಕೆ ಮಾಡಿ. ಶ್ವೇತ ವರ್ಣದ್ದಾದರೂ ಆಗಬಹುದು. ಇಲ್ಲವೇ ಟ್ರೆಂಡಿಯಾಗಿರುವ ಸೀಸನ್‌ವೇರ್‌ಗಳಾದರೂ ಆಗಬಹುದು.

2/5

ಹೋಳಿ ಪಾರ್ಟಿಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ

ನೀವು ಹೋಗುತ್ತಿರುವ ಹೋಳಿ ಪಾರ್ಟಿಯ ಡ್ರೆಸ್‌ಕೋಡ್‌ ಏನು? ಎಂಬುದನ್ನು ಮೊದಲೇ ತಿಳಿದುಕೊಂಡು ಡಿಸೈನರ್‌ವೇರ್‌ ಚೂಸ್‌ ಮಾಡಿ. ಇಲ್ಲವಾದಲ್ಲಿ ನೂರಾರು ಜನರ ಮಧ್ಯೆ ಆಭಾಸವಾಗಬಹುದು.

3/5

ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ

ಯಾವುದೇ ಕಾರಣಕ್ಕೂ ಹೆವಿ ಜ್ಯುವೆಲರಿಗಳನ್ನು ಧರಿಸಕೂಡದು. ಅದರಲ್ಲೂ ದುಬಾರಿ ಆಭರಣಗಳನ್ನು ಧರಿಸುವುದು ಬೇಡವೇ ಬೇಡ! ಕಲರ್‌ ಎರಚುವುದರಿಂದಾಗಿ ಇವು ಹಾಳಾಗುವ ಸಾಧ್ಯತೆ ಹೆಚ್ಚು. ಧರಿಸಲೇ ಬೇಕಿದ್ದಲ್ಲಿ, ಅತಿ ಸುಲಭವಾಗಿ ನಿರ್ವಹಣೆ ಮಾಡಬಹುದಾದ ಜ್ಯುವೆಲರಿಗಳನ್ನು ಧರಿಸಿ.

4/5

ಸಿಂಪಲ್‌ ಹೇರ್‌ಸ್ಟೈಲ್‌ ಮಾಡಿ ನೋಡಿ

ನಿಮ್ಮ ಹೇರ್‌ಸ್ಟೈಲ್‌ ಆದಷ್ಟೂ ಸಿಂಪಲ್‌ ಆಗಿರಿಸಿ. ಉದಾಹರಣೆಗೆ, ಹೈ ಪೋನಿ, ಹೈ ಬನ್‌ ಹೇರ್‌ಸ್ಟೈಲ್‌, ಹನ್‌ ಬನ್‌ ಹೇರ್‌ಸ್ಟೈಲ್‌ ಮಾಡಬಹುದು. ಫ್ರೀ ಹೇರ್‌ಸ್ಟೈಲ್‌ ಅವಾಯ್ಡ್ ಮಾಡಿ. ಫೋಟೋಶೂಟ್‌ಗೆ ಬೇಕಾದಲ್ಲಿ, ಅದರ ನಂತರ ಟೈ ಮಾಡಿ.

5/5

ಸನ್‌ಗ್ಲಾಸ್‌ ಲುಕ್‌

ಹೋಳಿ ಸಂಭ್ರಮದಲ್ಲಿ ಸನ್‌ಗ್ಲಾಸ್‌ ಬಳಸಿ. ಇದರಿಂದ ನಿಮ್ಮ ಕಣ್ಣುಗಳು ಸುರಕ್ಷಿತವಾಗಿರುವುದರೊಂದಿಗೆ ನೀವು ನೋಡಲು ಆಕರ್ಷಕವಾಗಿ ಕಾಣಿಸುತ್ತೀರಿ. ಫೋಟೋಶೂಟ್‌ಗಳಲ್ಲೂ ಅದ್ಭುತವಾಗಿ ಕಾಣುವಿರಿ.

ಶೀಲಾ ಸಿ ಶೆಟ್ಟಿ

View all posts by this author