ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holiday Fashion 2025: ಇಯರ್ ಎಂಡ್‌ನಲ್ಲಿ ಟ್ರೆಂಡಿಯಾದ ಹಾಲಿಡೇ ಫ್ಯಾಷನ್ ವೇರ್‌ಗಳಿವು

Holiday Fashion Wears: ‌ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಯರ್ ಎಂಡ್‌ನಲ್ಲಿ ವೈವಿಧ್ಯಮಯ ಹಾಲಿಡೇ ಫ್ಯಾಷನ್ ಟ್ರೆಂಡಿಯಾಗಿದೆ. ಇಯರ್ ಎಂಡ್‌ನಲ್ಲಿ ಟ್ರಾವೆಲ್ ಪ್ರಿಯರಿಗಾಗಿ ನಾನಾ ಬಗೆಯ ಹಾಲಿಡೇ ಫ್ಯಾಷನ್‌ವೇರ್‌ಗಳು ಲಗ್ಗೆ ಇಟ್ಟಿವೆ. ಈ ಬಾರಿ ಯಾವ ಬಗೆಯವು ಟ್ರೆಂಡಿಯಾಗಿವೆ? ಕಾರಣವೇನು? ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಯರ್ ಎಂಡ್‌ನಲ್ಲಿ ವೈವಿಧ್ಯಮಯ ಹಾಲಿಡೇ ಫ್ಯಾಷನ್ ಟ್ರೆಂಡಿಯಾಗಿದೆ.

2/5

ಸೆಲೆಬ್ರೆಟಿಗಳ ಹಾಲಿಡೇ ಫ್ಯಾಷನ್‌ವೇರ್ಸ್

ಕಳೆದ ಕ್ರಿಸ್‌ಮಸ್‌ನಿಂದಲೇ ಎಲ್ಲೆಡೆ ಹಾಲಿಡೇಯ ರಂಗು ಹೆಚ್ಚಾಗಿದೆ. ಸೆಲೆಬ್ರೆಟಿಗಳು ತಂತಮ್ಮ ಹಾಲಿಡೇಗಳಲ್ಲಿ ಧರಿಸಿರುವ ಬಿಂದಾಸ್ ಔಟ್‌ಫಿಟ್‌ಗಳು, ರೆಸಾರ್ಟ್‌ವೇರ್‌ಗಳು, ಇದೀಗ ಅವರವರ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿರುವ ಫೋಟೋಗಳ ಮೂಲಕ ಟ್ರಾವೆಲ್ ಫ್ಯಾಷನ್ ಪ್ರಿಯರನ್ನು ಸೆಳೆದಿವೆ, ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.

3/5

ಜೆನ್ ಜಿ ಹುಡುಗಿಯರನ್ನು ಸೆಳೆದ ಶಾರ್ಟ್ ಡ್ರೆಸ್‌ಗಳು

ಸೆಲೆಬ್ರೆಟಿಗಳ ಬಿಂದಾಸ್ ಸ್ಟೈಲ್‌ಗೆ ಸಾಥ್ ನೀಡಿದಂತಹ ಶಿಮ್ಮರ್ ಮಿನಿ, ಮ್ಯಾಕ್ಸಿ, ಮಿಡಿ ಹಾಗೂ ಶಾರ್ಟ್ ಫ್ರಾಕ್‌ಗಳು ಈ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಶಾರ್ಟ್ಸ್ ಹಾಗೂ ಬ್ಯಾಕ್ಲೆಸ್ ಬಿಕಿನಿ ಸ್ಟೈಲ್ ಕ್ರಾಪ್‌ಟಾಪ್‌ಗಳು, ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇನ್ನು ಟ್ರೆಕ್ಕಿಂಗ್, ಹಾಗೂ ಸಾಹಸ ಪ್ರಿಯ ಹುಡುಗಿಯರನ್ನು ವೈಬ್ರೆಂಟ್ ಕಲರ್‌ನ ಲೂಸ್ ಜಾಗರ್ಸ್, ಸ್ಲೀವ್‌ಲೆಸ್ ಟೀ ಶರ್ಟ್, ಹಾಲ್ಟೆರ್‌ ನೆಕ್‌ಲೈನ್‌ನ ಟಾಪ್, ಬಗೆಬಗೆಯ ಕೋ ಆರ್ಡ್ ಸೆಟ್‌ಗಳು ಆಕ್ರಮಿಸಿಕೊಂಡಿವೆ ಎನ್ನುತ್ತಾರೆ ಹಾಲಿಡೇ ಫ್ಯಾಷನ್‌ವೇರ್ಸ್ ಶಾಪ್‌ವೊಂದರ ಮಾರಾಟಗಾರರು.

4/5

ಬೀಚ್‌ಸೈಡ್ ಹಾಲಿಡೇ ವೇರ್ಸ್‌ಗೆ ಹೆಚ್ಚಿದ ಬೇಡಿಕೆ

ಸುಡು ಬಿಸಿಲಿರುವ ಬೀಚ್‌ಸೈಡ್‌ನಲ್ಲಿ ಧರಿಸಿದಾಗ ಗ್ಲಾಮರಸ್ ಮಾತ್ರವಲ್ಲ, ಆಕರ್ಷಕವಾಗಿ ಕಾಣಿಸುವಂತಹ ಲೇಡಿಸ್ ಬಿಕಿನಿ ಸೂಟ್, ಬಿಕಿನಿ ಫ್ರಾಕ್ ಹಾಗೂ ಟೂ ಪೀಸ್ ಡ್ರೆಸ್, ಬರ್ಮಡಾಗಳು ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಇನ್ನು, ಈ ವರ್ಷ ವೂಮೆನ್ಸ್ ಹಾಲಿಡೇ ಫ್ಯಾಷನ್‌ನಲ್ಲಿ ವೈಬ್ರೆಂಟ್ ಶೇಡ್‌ನವು ಸ್ಥಾನ ಆಕ್ರಮಿಸಿಕೊಂಡಿವೆ. ಅದರಲ್ಲೂ ಸ್ಲೀವ್ಲೆಸ್ ಜಾಕೆಟ್ಸ್, ಟೀ ಶರ್ಟ್, ಫ್ಲೋರಲ್ ಶರ್ಟ್, ಕೋ ಆರ್ಡ್ ಶಾರ್ಟ್ ಸೆಟ್ ಪುರುಷರ ರಿಲ್ಯಾಕ್ಸಿಂಗ್ ಹಾಲಿಡೇ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿಕೊಂಡಿವೆ.

ಶೀಲಾ ಸಿ ಶೆಟ್ಟಿ

View all posts by this author