ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಪೋಷಕರು ಮಕ್ಕಳ ತಪ್ಪನ್ನು ಹೇಗೆ ತಿದ್ದಬೇಕು?

ಮಕ್ಕಳು ತಪ್ಪುಮಾಡುವುದು ಸಹಜ. ಅವರಲ್ಲಿ ಪ್ರಬುದ್ದತೆಯ ಕೊರತೆಯ ಕಾರಣವಿರುವುದರಿಂದ ತಪ್ಪಗಳು ಸ್ವಾಭಾವಿಕವಾದುದು. ಬೆಳೆದು ಬದಲಾಗುತ್ತಿರುವ ದೇಹ ಮತ್ತು ಮನಸ್ಸಿನ ಕಾರಣದಿಂದಾಗಿ ಕೂತುಹಲ ಮತ್ತು ಉತ್ಸಾಹದ ಭರದಲ್ಲಿ ಸಾಗುತ್ತಿರುತ್ತಾರೆ. ಹಾಗೆಯೇ, ತಿಳಿಯದ ವಿಷಯಗಳನ್ನು ಪ್ರಶ್ನೆ ಮಾಡುತ್ತಾರೆ.

ಡಿ. ಆರ್. ಭವ್ಯಾ ವಿಶ್ವನಾಥ್

ಬೆಂಗಳೂರು: ಮಕ್ಕಳು ತಪ್ಪುಮಾಡುವುದು ಸಹಜ. ಅವರಲ್ಲಿ ಪ್ರಬುದ್ದತೆಯ ಕೊರತೆಯ ಕಾರಣವಿರುವುದರಿಂದ ತಪ್ಪಗಳು ಸ್ವಾಭಾವಿಕವಾದುದು. ಬೆಳೆದು ಬದಲಾಗುತ್ತಿರುವ ದೇಹ ಮತ್ತು ಮನಸ್ಸಿನ ಕಾರಣದಿಂದಾಗಿ ಕೂತುಹಲ ಮತ್ತು ಉತ್ಸಾಹದ ಭರದಲ್ಲಿ ಸಾಗುತ್ತಿರುತ್ತಾರೆ. ಹೊಸದನ್ನು ಅನುಭವಿಸುವ ಮತ್ತು ಅರಿಯದನ್ನು ಅನ್ವೇಶಿಸುವ ದಿಟ್ಟಿನಲ್ಲಿರುತ್ತಾರೆ. ಅನೇಕ ಸವಾಲುಗಳನ್ನು ಕೂಡ ಎದುರಿಸುತ್ತಿರುತ್ತಾರೆ. ಹೀಗಾಗಿ, ಇವುಗಳ ನಡುವೆ, ತಪ್ಪುಗಳು ಕೂಡ ಆಗುತ್ತಿರುತ್ತವೆ.

ಹಾಗೆಯೇ, ತಿಳಿಯದ ವಿಷಯಗಳನ್ನು ಪ್ರಶ್ನೆ ಮಾಡುತ್ತಾರೆ. ಆದರೆ, ಬಹುತೇಕ ಪೋಷಕರು ಮಕ್ಕಳು ಪ್ರಶ್ನಿಸುವುದು ಉದ್ದಟ್ಟುತನ, ತಪ್ಪು ಎಂದು ತಿಳಿದುಕೊಳ್ಳುತ್ತಾರೆ. ಚಂಚಲತೆ,ಕೋಪ,ಹಟ, ಹೇಳಿದ ಮಾತು ಕೇಳದಿರುವುದನ್ನು ಕಾಣಬಹುದು. ಒಳಹೊಕ್ಕು ಪರೀಶೀಲನೆ ಮಾಡುವುದನ್ನು ಸ್ವಭಾವವು ಸಹ ಕಾಣುವುದು.

ಪೋಷಕರು ಶಾಂತವಾಗಿ, ಶಿಕ್ಷಿಸುವ ಬದಲು ತಿದ್ದುವ ಕಡೆಗೆ ಗಮನಹರಿಸಿ ಮತ್ತು ಉತ್ತಮ ನಡವಳಿಕೆಯತ್ತ ಮಾರ್ಗದರ್ಶನ ನೀಡಲು ಸಕಾರಾತ್ಮಕ ಬಲವರ್ಧನೆ, ಸ್ಪಷ್ಟ ಗಡಿಗಳು ಮತ್ತು ತಾರ್ಕಿಕ ಪರಿಣಾಮಗಳನ್ನು ಬಳಸಿ ಮತ್ತು ತಪ್ಪುಗಳನ್ನು ಕಲಿಕೆಯ ಅವಕಾಶಗಳಾಗಿ ಬದಲಾಯಿಸಿ.

ನಿಮ್ಮ ಮಕ್ಕಳಲ್ಲಿ ಯಾವ ಸುಧಾರಣೆ ಬಯಸುತ್ತಿರೋ, ಆ ಗುಣವನ್ನು ನಿಮ್ಮ ಮಾತು ವತ೯ನೆಯ ಮೂಲಕ ಮಾದರಿಯಾಗಿ(ರೋಲ್ ಮಾಡೆಲ್) ತೋರಿಸಿರಿ. ನೇರವಾಗಿ ಬೋಧನೆ ಮಾಡುವದರ ಬದಲು ಮಾದರಿಯಾಗಿ ತೋರಿಸುವುದು ಉತ್ತಮ. ಅವರ ತಪ್ಪಿನ ಹಿಂದಿರುವ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಸಹಾನಿಭೂತಿಯ ಮೂಲಕ ಅರಿತುಕೊಳ್ಳುವುದಕ್ಕೆ ಪ್ರಯತ್ನಿಸಿ. ಮಕ್ಕಳ ಮಿದುಳು 20-25ವಯ್ಯಸ್ಸಿನ ತನಕ ಬೆಳೆಯುತ್ತದೆ. ಭಾವನೆಗಳನ್ನು ನಿವ೯ಹಿಸುವ ಭಾಗದ ಮಿದುಳು ಸಂಪೂಣ೯ವಾಗಿ ಬೆಳೆದಿರುವುದಿಲ್ಲ. ಹಾಗಾಗಿ, ಅವರ ಭಾವನೆಗಳನ್ನು ನಿವ೯ಸುವುದು ಸುಲಭವಲ್ಲ.

ಮೊದಲು ಸಂಪರ್ಕ ಬೆಳೆಸಿ- ಕಣ್ಣಿನ ಸಂಪರ್ಕವಿರಲಿ ಮತ್ತು ಸರಿಪಡಿಸುವ ಮೊದಲು ಸಹಾನುಭೂತಿ ತೋರಿಸಿ( ನಿನಗೆ ಬೇಸರವಾಗಿದೆ ಅಥವ ಹತಾಶೆಯಾಗಿದೆ ಎನ್ನಿಸುತ್ತಿದೆ).

ನಡವಳಿಕೆಯ ಮೇಲೆ ಕೇಂದ್ರೀಕರಿಸಿ: "ನೀನಗೆ ದಯೆ/ ಮನುಷ್ಯತ್ವವೇ ಇಲ್ಲ” ಎನ್ನುವ ಬದಲಿಗೆ "ನೀನು ಕರುಣೆಯಿಲ್ಲದೇ ವರ್ತಿಸುತ್ತಿದ್ದೀಯ" ಎಂದು ಹೇಳಿ. ಹೀಗೆ ಅವರ ಅಸ್ತಿತ್ವದಿಂದ ವತ೯ನೆಯನ್ನು ಬೇರ್ಪಡಿಸಿ.

ವಿವರಿಸಿ: ತಪ್ಪು ನಡವಳಿಕೆ ಮತ್ತು ಅದರಿಂದಾಗುವ ಪರಿಣಾಮವನ್ನು ಸ್ಪಷ್ಟವಾಗಿ ತಿಳಿಸಿ, ನಂತರ ಅದು ಏಕೆ ತಪ್ಪು ಮತ್ತು ಬದಲಿಗೆ ಏನು ಮಾಡಬೇಕೆಂದು ವಿವರಿಸಿ. ಸರಿಯಾದ ನಡವಳಿಕೆಯನ್ನು ಅಭ್ಯಾಸ ಮಾಡಲು ಸಮಯ ನೀಡಿ ಮತ್ತು ಅವರು ಅದನ್ನು ಸರಿಯಾಗಿ ಮಾಡಿದಾಗ ಅದಕ್ಕೆ ಪ್ರತಿಫಲ ನೀಡಿ.

ಏನನ್ನು ತಡೆಯಬೇಕು ?

ಮಕ್ಕಳು ತಪ್ಪು ಮಾಡಿದಾಕ್ಷಣಕ್ಕೆ ಶಿಕ್ಷೆ ಕೊಡುವುದು ಒಳ್ಳೆಯದಲ್ಲ. ಹೊಡೆಯುವುದು ಆದಷ್ಟು ತಡೆಯಬೇಕು. ಇದರಿಂದ ಮಕ್ಕಳು ಆ ಕ್ಷಣಕ್ಕೆ ಹೆದರಿದರೂ, ಕಹಿ ಅನುಭವ ಮನಸ್ಸಿನ್ನಲ್ಲಿ ಬೇರೂರುತ್ತದೆ. ಪದೇ ಪದೇ ಹೇಳುವುದು & ಬೋಧನೆ ಮತ್ತು ಅತಿಯಾದ ನಿಯಮಗಳು ಒತ್ತಡವನ್ನುಂಟು ಮಾಡುತ್ತದೆ, ವಿಪರೀತವಾಗಿ ಹೇರುತ್ತಿದ್ದೀರವೆನಿಸಬಹುದು. ನಿಮ್ಮ ಮಾತಿನಲ್ಲಿ ಅವಹೇಳನ, ನಿಂದನೆ, ಹಣೆಪಟ್ಟಿಗಳು ಆದಷ್ಟು ಕಡಿಮೆಯಿರಲಿ. ಅವಮಾನಿಸುವುದು ಅಥವಾ ಕಿರುಚುವುದು ಸ್ವಾಭಿಮಾನಕ್ಕೆ ಹಾನಿ ಮಾಡುತ್ತದೆ.

ಮಕ್ಕಳ ಹಟ, ಕೋಪೋದ್ರೇಕಗಳಿಗೆ ಅವರು ಬಯಸಿದ್ದನ್ನು ಪ್ರತಿಫಲವಾಗಿ ನೀಡಬೇಡಿ.

ಡಿ. ಆರ್. ಭವ್ಯಾ ವಿಶ್ವನಾಥ್

View all posts by this author