ಬೆಂಗಳೂರು: ಭಾರತದ ವೈವಿಧ್ಯಮಯ ಕಲೆ, ಕರಕುಶಲ, ಕೈಮಗ್ಗ ಮತ್ತು ಜೀವನಶೈಲಿ ಪರಂಪರೆ ಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಇಂಡಿಯನ್ ಆರ್ಟಿಸನ್ಸ್ ಬಜಾರ್’ ಅನ್ನು ಇಂದು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್, ಶಿವಾನಂದ ಸರ್ಕಲ್, ಕುಮಾರ ಕೃಪಾ ರಸ್ತೆಯಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಸ್ಯಾಂಡಲ್‌ವುಡ್ ನಟಿ ನಯನಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಪ್ರದರ್ಶನದಲ್ಲಿ ಭಾಗವಹಿಸಿರುವ ಕುಶಲಕರ್ಮಿಗಳು ಹಾಗೂ ಪ್ರದರ್ಶಕ ರೊಂದಿಗೆ ಸಂವಾದ ನಡೆಸಿ, ಅವರ ಸಾಂಪ್ರದಾಯಿಕ ಮತ್ತು ಆಧುನಿಕ ಕಲಾಕೃತಿಗಳನ್ನು ವೀಕ್ಷಿಸಿದರು.
ಇದನ್ನೂ ಓದಿ: Star Lifestyle 2025: ನಟ ಸಿದ್ಧಾರ್ಥ್ ಮಲ್ಹೋತ್ರಾ ಸಿಂಪಲ್ ವಿಂಟರ್ ಲೈಫ್‌ಸ್ಟೈಲ್
‘ಇಂಡಿಯನ್ ಆರ್ಟಿಸನ್ಸ್ ಬಜಾರ್’ನಲ್ಲಿ ದೇಶದ ವಿವಿಧ ಭಾಗಗಳ ಕುಶಲಕರ್ಮಿಗಳು ತಯಾರಿಸಿ ರುವ ವೈವಿಧ್ಯಮಯ ಕರಕುಶಲ ಉತ್ಪನ್ನಗಳು, ಕೈಮಗ್ಗ ಬಟ್ಟೆಗಳು, ವಸ್ತ್ರಗಳು, ಕಲಾಕೃತಿಗಳು, ಗೃಹಾಲಂಕಾರ ವಸ್ತುಗಳು, ಜೀವನಶೈಲಿ ಉತ್ಪನ್ನಗಳು ಸೇರಿದಂತೆ ಹಲವಾರು ವಿಶಿಷ್ಟ ವಸ್ತುಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಯನಾ ಅವರು, ದೇಶದ ಕುಶಲಕರ್ಮಿಗಳು ಮತ್ತು ಕಲಾವಿದ ರಿಗೆ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಜನರಿಗೆ ಪರಿಚಯಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದರು. ಭಾರತೀಯ ಕರಕುಶಲ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಸ್ಥಳೀಯ ಕುಶಲಕರ್ಮಿಗಳ ಜೀವನೋಪಾಯಕ್ಕೆ ನೆರವಾಗುವಂತೆ ಅವರು ಸಾರ್ವಜನಿಕ ರಿಗೆ ಕರೆ ನೀಡಿದರು.
ಭಾರತದ ಸಾಂಪ್ರದಾಯಿಕ ಕರಕುಶಲ ಪರಂಪರೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಅವಕಾಶ ಕಲ್ಪಿಸುವುದು ಈ ಬಜಾರ್‌ನ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಪಾರಂಪರಿಕ ಕಲೆ ಮತ್ತು ಕರಕುಶಲ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಕುಶಲಕರ್ಮಿಗಳ ಜೀವನೋಪಾಯವನ್ನು ಬೆಂಬಲಿಸುವ ಪ್ರಯತ್ನವೂ ಇದಾಗಿದೆ.
‘ಇಂಡಿಯನ್ ಆರ್ಟಿಸನ್ಸ್ ಬಜಾರ್’ ಬೆಳಿಗ್ಗೆ 10:30 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಕಲೆ, ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಆಸಕ್ತರು, ಕುಟುಂಬಗಳು ಹಾಗೂ ಸಾರ್ವಜನಿಕರು ವಿವಿಧ ರೀತಿಯ ಕೈತಯಾರಿಕಾ ಉತ್ಪನ್ನಗಳನ್ನು ವೀಕ್ಷಿಸಿ ಮತ್ತು ಖರೀದಿಸಬಹುದು.
ಪ್ರದರ್ಶನಕ್ಕೆ ಪ್ರವೇಶ ಉಚಿತ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಶಿವಾನಂದ ಸರ್ಕಲ್, ಕುಮಾರ ಕೃಪಾ ರಸ್ತೆ, ಬೆಂಗಳೂರು – 560001.