ಬೆಂಗಳೂರು: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಮಹತ್ವವಿದೆ. ಅದರಲ್ಲಿ ಅಡುಗೆ ಮನೆ ಪ್ರಮುಖವಾದದ್ದು. ನಮ್ಮ ಆರೋಗ್ಯ, ಸಮೃದ್ಧಿ ಹಾಗೂ ಮನೆಯ ಒಟ್ಟಾರೆ ಶಾಂತಿಗೆ ಅಡುಗೆ ಮನೆಯ ವಾಸ್ತು ಮುಖ್ಯ ಪಾತ್ರ ವಹಿಸುತ್ತದೆ. ಅಡುಗೆ ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಕುಟುಂಬದಲ್ಲಿ ಕಲಹ, ಅಶಾಂತಿ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೆಯೇ, ಇಂತಹ ಮನೆಗಳಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಅಡುಗೆ ಮನೆಯ ವಾಸ್ತು ಸರಿಯಾಗಿ ಇರುವುದೇ ಅತ್ಯಂತ ಅಗತ್ಯ.
ಹೌದು ಅಡುಗೆ ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಮನೆಯಲ್ಲಿನ ಶಾಂತಿ ಮತ್ತು ಸೌಹಾರ್ದತೆ ಮೇಲೆ ಪರಿಣಾಮ ಬೀಳಬಹುದು. ಕುಟುಂಬದವರ ನಡುವೆ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಲಕ್ಷ್ಮೀದೇವಿಯ ಕೃಪೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅಡುಗೆ ಮನೆಯ ವಾಸ್ತು ಸರಿಯಾಗಿರುವುದು ಅತ್ಯಂತ ಮುಖ್ಯ. ಇಲ್ಲಿದೆ ಅಡುಗೆ ಮನೆಯ ವಾಸ್ತು ಹೇಗಿರಬೇಕು(Vastu Tips) ಎಂಬುದರ ಸಂಕ್ಷಿಪ್ತ ಮಾಹಿತಿ.
ಅಡುಗೆ ಕೋಣೆ ಅನ್ನಪೂರ್ಣೇಶ್ವರಿ ದೇವಿಯ ವಾಸಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಸ್ಥಳವನ್ನು ಸ್ವಚ್ಛವಾಗಿ ಮತ್ತು ವಾಸ್ತುಸಮ್ಮತವಾಗಿ ಇಡುವುದು ಬಹಳ ಮುಖ್ಯ. ಅಡುಗೆ ಮನೆ ಸರಿಯಾಗಿರದಿದ್ದರೆ ಅದರ ಪರಿಣಾಮ ಕುಟುಂಬದ ಎಲ್ಲ ಸದಸ್ಯರ ಮೇಲೂ ಬೀಳುತ್ತದೆ.
ವಾಸ್ತು ಪ್ರಕಾರ, ಅಡುಗೆ ಮನೆಯ ಅತ್ಯುತ್ತಮ ದಿಕ್ಕು ಆಗ್ನೇಯ. ಈ ದಿಕ್ಕಿನಲ್ಲಿ ಅಡುಗೆ ಕೋಣೆ ಇರುವುದು ಮಂಗಳಕರವೆಂದು ಹೇಳಲಾಗಿದೆ. ಆಗ್ನೇಯದಲ್ಲಿ ಅವಕಾಶವಿಲ್ಲದಿದ್ದರೆ ವಾಯುವ್ಯ ಅಥವಾ ಪೂರ್ವ-ಮಧ್ಯ ದಿಕ್ಕನ್ನೂ ಪರ್ಯಾಯವಾಗಿ ಬಳಸಬಹುದು.
Vastu Tips: ಅಡುಗೆಮನೆಯ ವಾಸ್ತು ನಿಯಮಗಳು: ಆರೋಗ್ಯ, ಸಮೃದ್ಧಿಗೆ ಈ ಸರಳ ಟಿಪ್ಸ್ ಪಾಲಿಸಿ
ಗ್ಯಾಸ್ ಸ್ಟೌವನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟು, ಅಡುಗೆ ಮಾಡುವವರು ಪೂರ್ವಮುಖವಾಗಿ ನಿಂತು ಅಡುಗೆ ಮಾಡುವಂತೆ ನೋಡಿಕೊಳ್ಳಬೇಕು. ಜೊತೆಗೆ, ಅಡುಗೆ ಮಾಡುವವರ ಮೇಲೆ ನೇರವಾಗಿ ಹೊರಗಿನವರ ದೃಷ್ಟಿ ಬೀಳದಂತೆ ವ್ಯವಸ್ಥೆ ಮಾಡುವುದು ಒಳಿತು.
ಅಡುಗೆ ಮನೆಯಲ್ಲಿ ಬಳಸುವ ವಿದ್ಯುತ್ ಉಪಕರಣಗಳನ್ನು ಪಶ್ಚಿಮ ಅಥವಾ ದಕ್ಷಿಣ ಗೋಡೆಯ ಬಳಿ ಇಡುವುದು ಉತ್ತಮ. ದೇವರ ಫೋಟೋಗಳನ್ನು ಅಡುಗೆ ಮನೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಡೈನಿಂಗ್ ಟೇಬಲ್ ಅನ್ನು ವಾಯುವ್ಯ ಭಾಗದಲ್ಲಿ ಇಡುವುದು ಉತ್ತಮ, ಆದರೆ ಅಡುಗೆ ಮನೆಯ ಮಧ್ಯದಲ್ಲಿ ಇಡುವುದನ್ನು ತಪ್ಪಿಸಬೇಕು.
ಅಡುಗೆ ಸಾಮಾನುಗಳನ್ನು ಸಂಗ್ರಹಿಸಲು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಕಪಾಟುಗಳನ್ನು ಮಾಡಬಹುದು. ಮಸಾಲೆ ಮತ್ತು ಧಾನ್ಯಗಳನ್ನು ಈಶಾನ್ಯ ಭಾಗದಲ್ಲಿ ಇಡುವುದು ಉತ್ತಮ. ಜೊತೆಗೆ, ಅಡುಗೆ ಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ದೊಡ್ಡ ಕಿಟಕಿಗಳು ಇದ್ದರೆ ಬೆಳಕು ಮತ್ತು ಗಾಳಿ ಸರಿಯಾಗಿ ಪ್ರವೇಶಿಸಿ, ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ.
ಈ ರೀತಿಯಾಗಿ ಅಡುಗೆ ಮನೆಯ ವಾಸ್ತು ಸರಿಯಾಗಿ ಇಟ್ಟರೆ ಮನೆಗೆ ಸದಾ ಆರೋಗ್ಯ, ಐಶ್ವರ್ಯ ಮತ್ತು ಶಾಂತಿ ನೆಲೆಸುತ್ತದೆ.