ಬೆಂಗಳೂರು, ಡಿ. 3: ಇತ್ತೀಚಿನ ದಿನದಲ್ಲಿ ಮೈಗ್ರೇನ್ ಸಮಸ್ಯೆ ಕಂಡು ಬರುವ ಪ್ರಮಾಣ ಹೆಚ್ಚಾಗಿದೆ. ಮೈಗ್ರೇನ್ (Migraine) ಇದ್ದು ತಲೆನೋವು ಬಂದಾಗ ಬಹುತೇಕರಿಗೆ ಯಾವ ಕೆಲಸವನ್ನು ಕೂಡ ಮಾಡಲು ಸಾಧ್ಯವಾಗುದಿಲ್ಲ. ಇದು ಸಾಮಾನ್ಯ ತಲೆನೋವು ಎಂದು ಮೇಲ್ನೋಟಕ್ಕೆ ಅನಿಸಿದರೂ ಬಹಳ ಸೆಳೆತದ ಜತೆಗೆ ನೋವು ಕೂಡ ಇರುತ್ತದೆ. ಹೀಗಾಗಿ ಸುಸ್ತಾಗುವುದು, ನಿಶಕ್ತಿ ಆಗುವ ಸಾಧ್ಯತೆ ಕೂಡ ಹೆಚ್ಚು. ಮೈಗ್ರೇನ್ ಸಮಸ್ಯೆಗೆ ಇರುವ ಚಿಕಿತ್ಸೆ ಏನು? ಹೇಗೆ ಚಿಕಿತ್ಸೆ ನೀಡಬಹುದು ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ವೈದ್ಯೆ ಡಾ. ಪದ್ಮಾವತಿ (Dr. Padmavati) ಮಾತನಾಡಿದ್ದಾರೆ. ಮೈಗ್ರೇನ್ ತಲೆನೋವಿನ ಸಾಮಾನ್ಯ ಲಕ್ಷಣಗಳೇನು? ಅದನ್ನು ಪರಿಹರಿಸಲು ಇರುವ ಸರಳ ಕ್ರಮಗಳು ಯಾವುವು? ಚಿಕಿತ್ಸಾ ವಿಧಾನ ಹೇಗಿದೆ? ಚಿಕಿತ್ಸೆಯಿಂದ ಸಿಗುವ ಇತರ ಆರೋಗ್ಯ ಪ್ರಯೋಜನೆ, ಮನೆಮದ್ದು ಏನು? ಎಂಬ ಬಗ್ಗೆ ಅವರು ವಿವರಿಸಿದ್ದಾರೆ.
ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಮೈಗ್ರೇನ್ ಬಗ್ಗೆ ತಿಳಿಸಲಾಗಿದೆ. ಆಯುರ್ವೇದದಲ್ಲಿ ಮೈಗ್ರೇನ್ ಅನ್ನು ಅರ್ಥಾವಬೇದಕ ಎಂದು ಕರೆಯಲಾಗಿದೆ. ಶೇ. 90ರಷ್ಟು ಹೆಣ್ಣು ಮಕ್ಕಳಲ್ಲಿಮೈಗ್ರೇನ್ ಸಮಸ್ಯೆ ಕಂಡುಬರುತ್ತಿದ್ದು, ಪಿರಿಯಡ್ಸ್ ಸಂದರ್ಭದಲ್ಲಿ ಅತಿಯಾಗಿ ತಲೆನೋವು ಸಮಸ್ಯೆ ಕಾಡುತ್ತದೆ. ಅದೇ ರೀತಿ ವಾಂತಿ ಬರುವುದು ಇದರ ಒಂದು ಸಾಮಾನ್ಯ ಲಕ್ಷಣ ಎಂದು ಅವರು ತಿಳಿಸಿದ್ದಾರೆ.
ಮೈಗ್ರೇನ್ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ:
ಮೈಗ್ರೇನ್ ಎನ್ನುವುದು ಸಾಮಾನ್ಯವಾಗಿ ಪ್ರಯಾಣ ಮಾಡುವಾಗ, ಊಟ ಮಾಡದೆ ಇದ್ದಾಗ, ಹೆಚ್ಚು ಸಮಯ ಮೊಬೈಲ್ ನೋಡುದರಿಂದ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮೈಗ್ರೇನ್ ಹೆಚ್ಚಾಗಿ ಊಟವನ್ನು ಸ್ಕಿಪ್ ಮಾಡುವುದರಿಂದ ಕೂಡ ಬರುತ್ತದೆ. ಊಟವಾದ ತತ್‌ಕ್ಷಣ ಟೀ, ಕಾಫಿ ಕುಡಿಯುವುದು, ಒತ್ತಡದ ಕೆಲಸ ಮಾಡುವುದು ಎಲ್ಲವೂ ಕೂಡ ಮೈಗ್ರೇನ್‌ಗೆ ಕಾರಣವಾಗಲಿದೆ. ಹಾಗೆಂದ ಮಾತ್ರಕ್ಕೆ ಎಲ್ಲ ವಯೋಮಾನದವರಿಗೆ ಒಂದೆ ರೀತಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿ ಕೊಟ್ಟಿದ್ದಾರೆ.
ಕ್ಯಾಬೇಜ್ ತಿಂದ್ರೆ ಕ್ಯಾನ್ಸರ್ ಬರಲ್ವಾ? ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ?
ಮೈಗ್ರೇನ್‌ಗೆ ಆಯುರ್ವೇದ ಚಿಕಿತ್ಸೆ ಬಹಳ ಉತ್ತಮ. ಬೇರೆ ಚಿಕಿತ್ಸಾ ಕ್ರಮದಿಂದ ಬೇಗನೆ ನೋವು ಕಡಿಮೆ ಆಗಬಹುದು. ಆದರೆ ಸಂಪೂರ್ಣ ಗುಣಮುಕ್ತ ಆಗುವುದಿಲ್ಲ. ದೀರ್ಘ ಕಾಲದ ಮೈಗ್ರೇನ್ ಸಮಸ್ಯೆ ಪರಿಹರಿಸಲು ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ ಇದೆ. ಪಂಚಕರ್ಮದಲ್ಲಿ ನಸ್ಯೆ ಮತ್ತು ವಿರೇಚನ ಚಿಕಿತ್ಸೆಯು ಬಹಳ ಪರಿಣಾಮಕಾರಿಯಾಗಿ ಮೈಗ್ರೇನ್ ಸಮಸ್ಯೆ ಪರಿಹಾರ ಆಗಲಿದೆ. ಈ ಚಿಕಿತ್ಸೆ ಜತೆಗೆ ಕೆಲವು ಕಷಾಯ ಮತ್ತು ಲೇಪಗಳ ಬಳಕೆ ಮಾಡುವುದರಿಂದ ಎಷ್ಟೊ ಜನರಿಗೆ ಮೈಗ್ರೇನ್ ಸಮಸ್ಯೆ ಸಂಪೂರ್ಣ ಗುಣಮುಖವಾಗಿದೆ ಎಂದು ತಿಳಿಸಿದ್ದಾರೆ.
ಈ ವಿಧಾನ ಅನುಸರಿಸಿ
- ಊಟವನ್ನು ಯಾವುದೆ ಕಾರಣಕ್ಕು ಸ್ಕಿಪ್ ಮಾಡಬಾರದು.
- ಊಟ ಜೀರ್ಣ ಆಗದೆ ಬೇರೆ ಇತರ ಆಹಾರ ಸೇವಿಸಬಾರದು.
- ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಹಾಲಿಗೆ ಒಂದು ಚಮಚ ತುಪ್ಪ ಬೆರೆಸಿ ಕುಡಿಯಬೇಕು.
- ಸಾಧ್ಯವಾದಷ್ಟು ಪೌಷ್ಟಿಕ ಆಹಾರ ಸೇವಿಸಬೇಕು.
- ಗರ್ಭಿಣಿಯರಿಗೆ ಈ ಸಮಸ್ಯೆ ಕಂಡು ಬಂದರೆ ಬರೀ ಮನೆ ಮದ್ದು ಮಾತ್ರ ಪಡೆಯದೆ ವೈದ್ಯರ ಮೊರೆ ಹೋಗುವುದು ಉತ್ತಮ.
- ಈ ಸಮಸ್ಯೆ ಹೆಚ್ಚು ಇರುವವರು ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ.
ನೋವು ತಡೆಯಲು ಹೆಚ್ಚು ಪೇನ್ ಕಿಲ್ಲರ್ ಸೇವನೆ ಮಾಡುವ ಬದಲು ಆಯುರ್ವೇದ ಚಿಕಿತ್ಸೆ ಪಡೆದರೆ ಸಮಸ್ಯೆ ಶೀಘ್ರವೇ ಸಂಪೂರ್ಣವಾಗಿ ಶಮನ ಆಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.