ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Monsoon Fashion 2026: ಮಳೆಗಾಲದ ಜೆನ್‌ ಜಿ ಫ್ಯಾಷನ್‌ಗೆ ಎಂಟ್ರಿ ನೀಡಿದ ಉದ್ದುದ್ದದ ಬೂಟ್ಸ್

Monsoon Fashion: ಮಳೆಗಾಲದ ಜೆನ್‌ ಜಿ ಫ್ಯಾಷನ್‌ಗೆ ಉದ್ದುದ್ದದ ಕಲರ್‌ಫುಲ್‌ ವೈಬ್ರೆಂಟ್‌ ಶೂಗಳು ಎಂಟ್ರಿ ನೀಡಿವೆ. ಮಾಡೆಲ್‌ ಲುಕ್‌ ಬಯಸುವ ಯುವತಿಯರನ್ನು ಆವರಿಸಿಕೊಂಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.‌

ಚಿತ್ರಗಳು: ಮನ್ನಾರ ಚೋಪ್ರಾ, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜೆನ್‌ ಜಿ ಮಾನ್ಸೂನ್‌ ಫ್ಯಾಷನ್‌ಗೆ (Monsoon Fashion 2026) ವೈಬ್ರೆಂಟ್‌ ಬೂಟ್‌ಗಳು ಆಗಮಿಸಿವೆ. ಹೌದು, ಈ ಬಾರಿಯ ಮಳೆಗಾಲದ ಫ್ಯಾಷನ್‌ನಲ್ಲಿ ಉದ್ದುದ್ದದ ಕಲರ್‌ಫುಲ್‌ ವೈವಿಧ್ಯಮಯ ವೈಬ್ರೆಂಟ್‌ ಶೂಗಳು ನಯಾ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ವಿಶೇಷವೆಂದರೇ, ಸೆಲೆಬ್ರೆಟಿ ಲುಕ್‌ ಹಾಗೂ ಮಾಡೆಲ್‌ ಲುಕ್‌ ಬಯಸುವ ಜೆನ್‌ ಜಿ ಯುವತಿಯರನ್ನು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಆವರಿಸಿಕೊಂಡಿವೆ.

Gen Z fashion

ಮನ್ನಾರ್‌ ಚೋಪ್ರಾ ಧರಿಸಿದ್ದ ರೆಡ್‌ ಬೂಟ್ಸ್‌

ಅಂದಹಾಗೆ, ಪ್ರಿಯಾಂಕಾ ಚೋಪ್ರಾ ಸಂಬಂಧಿಯಾದ ನಟಿ ಮನ್ನಾರ್‌ ಚೋಪ್ರಾ ಇತ್ತೀಚೆಗೆ ಫ್ಯಾಷನ್‌ ಶೂಟ್‌ವೊಂದರಲ್ಲಿ ಧರಿಸಿದ್ದ ವೈಬ್ರೆಂಟ್‌ ರೆಡ್‌ ನೀ ಲೆಂಥ್‌ ಬೂಟ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾಷನ್‌ ಫಾಲೋವರ್‌ಗಳನ್ನು ಸೆಳೆದಿತ್ತು. ಅದರಲ್ಲಿ ಸಾಕಷ್ಟು ಜೆನ್‌ ಜಿ ಹುಡುಗಿಯರು ತಮ್ಮ ಮಾನ್ಸೂನ್‌ ಲೇಯರ್‌ ಲುಕ್‌ಗಾಗಿ ಈ ಲುಕ್ಕನ್ನು ಫಾಲೋ ಕೂಡ ಮಾಡಿದರು ಎನ್ನುವ ಫ್ಯಾಷನ್‌ ವಿಮರ್ಶಕರಾದ ಮಿಂಚು ಪ್ರಕಾರ, ಈ ಶೈಲಿಯ ಬೂಟ್ಸ್‌ ಹೈ ಫ್ಯಾಷನ್‌ ಲುಕ್‌ ನೀಡುವುದರೊಂದಿಗೆ ಅತ್ಯಾಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ.

Monsoon Fashion

ಚಾಲ್ತಿಯಲ್ಲಿರುವ ಬಗೆಬಗೆಯ ಕಲರ್‌ಫುಲ್‌ ಬೂಟ್ಸ್‌

ಪ್ರತಿ ವರ್ಷವೂ ಮಾನ್ಸೂನ್‌ನಲ್ಲಿ ನಾನಾ ಬಗೆಯ ಫ್ಯಾಷೆನಬಲ್‌ ಬೂಟ್‌ಗಳು ಮಾರುಕಟ್ಟೆಗೆ ಕಾಲಿಡುತ್ತವೆ. ಅವುಗಳಲ್ಲಿ ಥೈ ಹೈ ಬೂಟ್ಸ್‌, ನೀ ಲೆಂತ್‌ ಬೂಟ್ಸ್‌, ಆಂಕೆಲ್‌ ಬೂಟ್ಸ್‌, ಲೇಸ್‌ ಬೂಟ್ಸ್‌, ಜಿಪ್‌ ಬೂಟ್ಸ್ ಸೇರಿದಂತೆ ನಾನಾ ಬಗೆಯ ಕಲರ್‌ಫುಲ್‌ ಬೂಟ್ಸ್‌ ಈ ಸೀಸನ್‌ಗೆ ಮರಳಿವೆ. ವಿಶೇಷವೆಂದರೇ, ಈ ಸೀಸನ್‌ನಲ್ಲಿ ಇವು ಮ್ಯಾಟ್‌ ಫಿನಿಶಿಂಗ್‌ನಲ್ಲಿಲ್ಲ! ಬದಲಿಗೆ ಶೈನಿಂಗ್‌ ವೈಬ್ರೆಂಟ್‌ ಕಲರ್‌ನಲ್ಲಿ ಕಾಣಿಸಿಕೊಂಡಿವೆ. ಧರಿಸಿದಾಗ ನೋಡಲು ಅಂದವಾಗಿ ಕಾಣಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ತೇಜ್‌.

Tall boots

ಸೂಕ್ತ ಬೂಟ್ಸ್‌ ಆಯ್ಕೆ ಹೇಗೆ?

ಧರಿಸುವ ಉಡುಪಿಗೆ ತಕ್ಕಂತೆ ಇಲ್ಲವೇ ಪರ್ಸನಾಲಿಟಿಗೆ ತಕ್ಕಂತೆ ಬೂಟ್ಸ್‌ ಆಯ್ಕೆ ಮಾಡಬೇಕು. ಸೀಸನ್‌ಗೆ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ ಎಂಬುದು ಸ್ಟೈಲಿಸ್ಟ್‌ಗಳ ಅಭಿಪ್ರಾಯ.

Star Fashion 2026: ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿದ ಫಾರ್ಶಿ ಸಲ್ವಾರ್‌ ಸೂಟ್‌

ಬೂಟ್ಸ್‌ ಸ್ಟೈಲಿಂಗ್‌ ಹೇಗೆ?

ವೆಸ್ಟರ್ನ್‌ವೇರ್‌ಗಳಿಗೆ ಇವು ಸಖತ್ತಾಗಿ ಮ್ಯಾಚ್‌ ಆಗುತ್ತವೆ.

ಫ್ಯೂಶನ್‌ ಫ್ಯಾಷನ್‌ವೇರ್‌ಗಳಿಗೂ ಮ್ಯಾಚ್‌ ಆಗುತ್ತದೆ.

ಲೇಯರ್‌ ಲುಕ್‌ಗೆ ಈ ಶೈಲಿಯ ಬೂಟ್ಸ್‌ ಮ್ಯಾಚ್‌ ಆಗುತ್ತವೆ.

ಅಲ್ಟ್ರಾ ಮಾಡರ್ನ್‌ ಲುಕ್‌ಗೂ ಈ ಬೂಟ್ಸ್‌ ಸಾಥ್‌ ನೀಡುತ್ತವೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author