Party wear Saree Fashion 2026: ಸೆಲೆಬ್ರೆಟಿ ಲುಕ್ ನೀಡುವ ಸಿಲ್ವರ್ ನೆಟ್ ಸಿಕ್ವೀನ್ಸ್ ಪಾರ್ಟಿವೇರ್ ಸೀರೆಗಳು
ಸಿಲ್ವರ್ ಸಿಕ್ವಿನ್ಸ್ ಫ್ಯಾಬ್ರಿಕ್‌ನ ನೆಟ್ ಸೀರೆಗಳು ಪಾರ್ಟಿವೇರ್ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಸದ್ಯ ಸಿಲ್ವರ್ ಸಿಕ್ವೀನ್ಸ್ ಸೀರೆಗಳು ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಿವೆ. ಇದಕ್ಕೆ ಉದಾಹರಣೆಯೆಂಬಂತೆ, ಇತ್ತೀಚೆಗೆ ನಟಿ ಕೌಶಾನಿ ಮುಖರ್ಜಿ ಉಟ್ಟಿದ್ದ ಟ್ರೆಂಡ್ ಲಿಸ್ಟ್‌ನಲ್ಲಿದ್ದ ಸಿಲ್ವರ್ ಸಿಕ್ವೀನ್ಸ್ ಸೀರೆ ಸಖತ್ ಪಾಪುಲರ್ ಆಗಿದೆ. ಇದ್ಯಾವ ಬಗೆಯ ಸೀರೆ? ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಇಲ್ಲಿದೆ ವಿವರ.
ಸಿಲ್ವರ್ ನೆಟ್ ಸಿಕ್ವಿನ್ಸ್ ಸೀರೆಗಳು ಪಾರ್ಟಿವೇರ್ ಕೆಟಗರಿಗೆ ಲಗ್ಗೆ ಇಟ್ಟಿವೆ.
ಕೌಶಾನಿ ಮುಖರ್ಜಿಯ ಸಿಲ್ವರ್ ನೆಟ್ ಸಿಕ್ವೀನ್ಸ್ ಸೀರೆ
ಹೌದು, ಸದ್ಯ ಸಿಲ್ವರ್ ಸಿಕ್ವೀನ್ಸ್ ಸೀರೆಗಳು ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಿವೆ. ಇದಕ್ಕೆ ಉದಾಹರಣೆಯೆಂಬಂತೆ, ಇತ್ತೀಚೆಗೆ ನಟಿ ಕೌಶಾನಿ ಮುಖರ್ಜಿ ಉಟ್ಟಿದ್ದ ಟ್ರೆಂಡ್ ಲಿಸ್ಟ್‌ನಲ್ಲಿದ್ದ ಸಿಲ್ವರ್ ಸಿಕ್ವೀನ್ಸ್ ಸೀರೆ ಸಖತ್ ಪಾಪುಲರ್ ಆಗಿದೆ.
ಸಿಲ್ವರ್ ಸಿಕ್ವೀನ್ಸ್ ಸೀರೆಗೆ ಹೆಚ್ಚಿದ ಬೇಡಿಕೆ
ಈಗಾಗಲೇ ಮಾರುಕಟ್ಟೆಗಳಲ್ಲಿ ಇದೇ ಶೈಲಿಯ ಲೋಕಲ್ ಬ್ರಾಂಡ್‌ಗಳಲ್ಲಿ ನಾನಾ ಕಲರ್‌ಗಳಲ್ಲಿ ಈ ಶೈಲಿಯ ಸೀರೆಗಳು ರಾರಾಜಿಸುತ್ತಿವೆ.
ನೆಟ್ ಸಿಲ್ವರ್ ಸಿಕ್ವಿನ್ಸ್ ಸೀರೆಯ ಸ್ಪೆಷಾಲಿಟಿ
ಅಂದಹಾಗೆ, ಸಿಲ್ವರ್ ನೆಟ್ ಎಂಬಾಲಿಶ್ಡ್ ಸಿಕ್ವೀನ್ಸ್ ರೆಡಿ ಸೀರೆಗಳ ವಿಶೇಷತೆ ಏನೆಂದರೇ, ಇವು ಗ್ಲಾಮರಸ್ ಲುಕ್ ನೀಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ಗೆ ಇವು ಹೇಳಿ ಮಾಡಿಸಿದ ಸೀರೆ. ಪಾರ್ಟಿವೇರ್‌ಗಳ ಕೆಟಗರಿಯಲ್ಲಿ ಇವು ಸಖತ್ ಲುಕ್ ನೀಡುತ್ತವೆ ಎನ್ನುತ್ತಾರೆ ಫ್ಯಾಷನ್ ಸ್ಟೈಲಿಸ್ಟ್ ರಾಜ್.
ನೈಟ್ ಪಾರ್ಟಿಗೆ ಬೆಸ್ಟ್ ಸೀರೆಗಳಿವು
ನೈಟ್ ಪಾರ್ಟಿಯಲ್ಲಿ ಈ ಶೈಲಿಯ ಸೀರೆಗಳು ಲೈಟ್‌ನಲ್ಲಿ ಮಿನುಗುತ್ತವೆ. ಜತೆಗೆ ಪಾರ್ಟಿಯ ರಂಗೇರಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಸಿಲ್ವರ್ ನೆಟ್ ಸಿಕ್ವೀನ್ಸ್ ಸೀರೆಗಳ ಸ್ಟೈಲಿಂಗ್
- ಪರ್ಸನಾಲಿಟಿಗೆ ತಕ್ಕಂತೆ ನೋಡಿ ಆಯ್ಕೆ ಮಾಡಿ.
- ಗ್ಲಾಮರಸ್ ಲುಕ್ ನೀಡುವ ಸೀರೆಗೆ ಹೆಚ್ಚು ಆಕ್ಸೆಸರೀಸ್ ಬೇಕಾಗಿಲ್ಲ!
- ಆದಷ್ಟೂ ಇಂಡೋ-ವೆಸ್ಟರ್ನ್ ಲುಕ್ ನೀಡಿ.
- ಇತರೇ ಸೀರೆಯೊಂದಿಗೆ ಇರಿಸಬೇಡಿ.