Saree Fashion 2026: ಮರಳಿದ ಲೈಟ್‌ವೈಟ್ ಶಿಫಾನ್ ಫ್ಲೋರಲ್ ಸೀರೆಗಳು
Lightweight Chiffon Floral Sarees: ಉಟ್ಟಾಗ ಭಾರವೆನಿಸದ ಬಣ್ಣಬಣ್ಣದ ಲೈಟ್‌ವೈಟ್ ಫ್ಲೋರಲ್ ಶಿಫಾನ್ ಸೀರೆಗಳು ಈಗ ಸೀರೆ ಲೋಕದಲ್ಲಿ ಹೊಸ ರೂಪದಲ್ಲಿ ಪ್ರಿಂಟ್ಸ್‌ನಲ್ಲಿ ಮರಳಿವೆ. ನಾರಿಯರನ್ನು ಸವಾರಿ ಮಾಡುತ್ತಿವೆ. ಈ ಕುರಿತಂತೆ ಇಲ್ಲಿದೆ ವರದಿ.
ಭಾರವಿಲ್ಲದ ಬಣ್ಣಬಣ್ಣದ ಫ್ಲೋರಲ್ ಪ್ರಿಂಟೆಡ್ ಶಿಫಾನ್ ಸೀರೆಗಳು ಮರು ಎಂಟ್ರಿ ನೀಡಿವೆ. ಅದರಲ್ಲೂ ಬಾಲಿವುಡ್ ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ.
ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಿರುವ ಶಿಫಾನ್ ಸೀರೆಗಳು
ಹೌದು, ಇತ್ತೀಚೆಗೆ ಇವೆಂಟ್‌ಗಳಲ್ಲೂ ಈ ಶಿಫಾನ್ ಸೀರೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಬಾಲಿವುಡ್ ಸೆಲೆಬ್ರೆಟಿಗಳು ಹೆವ್ವಿ ಡಿಸೈನ್‌ನ ಭಾರಿ ಭಾರವಿರುವ ಸೀರೆಗಳಿಂದ ಕೆಲಕಾಲ ಸರಿದು ನಾನಾ ಬಗೆಯ ಪ್ರಿಂಟೆಡ್ ಶಿಫಾನ್ ಸೀರೆಗಳತ್ತ ವಾಲಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಕರೀನಾ ಕಫೂರ್ ಉಟ್ಟಿದ್ದ ಶಿಫಾನ್ ಸೀರೆಯೂ ಕೂಡ ಭಾರಿ ಸುದ್ದಿ ಮಾಡಿತ್ತು.
ಮೊಹಬ್ಬತೆ ನಟಿಯ ಶಿಫಾನ್ ಸೀರೆ
ಇನ್ನು, ನಿಮಗೆಲ್ಲಾ ಹಳೆಯ ಹಿಟ್ ಸಿನಿಮಾ ಮೊಹಬ್ಬತೆ ಚಿತ್ರ ಗೊತ್ತಿರಬೇಕಲ್ಲ! ಆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರೀತಿ ಝಿಂಗಾನಿಯಾ ಕೂಡ ಇತ್ತೀಚೆಗಿನ ಒಂದು ಇವೆಂಟ್‌ನಲ್ಲಿ ವೈಬ್ರೆಂಟ್ ಮ್ಯಾಗ್ನೆಟಾ ಪಿಂಕ್ ಫ್ಲೋರಲ್ ಸೀರೆಯಲ್ಲಿ ಸಿಂಪಲ್ಲಾಗಿ ಕಾಣಿಸಿಕೊಂಡಿದ್ದರು. ತದನಂತರ ಈ ಸೀರೆ ಆನ್‌ಲೈನ್ ಶಾಪ್‌ಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿತು ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.
ಯುವತಿಯರ ಲಿಸ್ಟ್‌ನಲ್ಲಿ ಶಿಫಾನ್ ಸೀರೆಗಳು
ಇದೀಗ ಈ ಸೀರೆಗಳು ವಿವಾಹಿತ ಮಹಿಳೆಯರನ್ನು ಮಾತ್ರವಲ್ಲ, ಜೆನ್ ಜಿ ಯುವತಿಯರನ್ನು ಸೆಳೆಯಲಾರಂಭಿಸಿದೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.
ಮರಳಿದ ಸೀರೆಗಳಿವು
ಅಂದಹಾಗೆ, ಈ ಸೀರೆಗಳು ಆಗಾಗ್ಗೆ ಮರಳುತ್ತಲೇ ಇರುತ್ತವೆ. ಅದರಲ್ಲೂ ಪ್ರತಿದಿನ ಸೀರೆ ಉಡುವಂತಹ ಮಹಿಳೆಯರನ್ನು ಸವಾರಿ ಮಾಡುತ್ತವೆ. ಇದಕ್ಕೆ ಕಾರಣ, ಭಾರವಿಲ್ಲದೇ ಇರುವುದು ಹಾಗೂ ಸುಲಭ ನಿರ್ವಹಣೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.
ಒಟ್ಟಾರೆ, ಸೆಲೆಬ್ರೆಟಿಗಳು ಈ ಸೀರೆಗಳತ್ತ ಮುಖ ಮಾಡಿರುವುದು ಬೇಡಿಕೆ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.