Saree Fashion 2026: ಸ್ಟ್ರೈಪ್ಸ್ ಸೀರೆಗೂ ಶುರುವಾಯ್ತು ಮಿಕ್ಸ್ ಮ್ಯಾಚ್ ಚೆಕ್ಸ್ ಬ್ಲೌಸ್ ಸ್ಟೈಲಿಂಗ್
Striped Saree: ಸ್ಟ್ರೈಪ್ಸ್ ಸೀರೆಯ ಜತೆ ಚೆಕ್ಸ್ ಬ್ಲೌಸ್ ಧರಿಸಿ ಮಿಕ್ಸ್ ಮ್ಯಾಚ್ ಮಾಡುವ ಕಾನ್ಸೆಪ್ಟ್ ಈಗಾಗಲೇ ಶುರುವಾಗಿದೆ. ಜೆಮೆಟ್ರಿಕಲ್ ಇಲ್ಯೂಷನ್ ನೀಡುವಂತಹ ಈ ಸ್ಟೈಲಿಂಗ್ ಮಾಡಲು ನೀವು ಪಾಲಿಸಬೇಕಾದ್ದೇನು? ಈ ಕುರಿತ ಐಡಿಯಾಗಳು ಇಲ್ಲಿದೆ.
ಸ್ಟ್ರೈಪ್ಸ್ ಸೀರೆ ಪ್ಲಸ್ ಚೆಕ್ಸ್ ಬ್ಲೌಸ್ ಮಿಕ್ಸ್ ಮ್ಯಾಚ್ ಮಾಡುವ ಸೀರೆ ಸ್ಟೈಲಿಂಗ್ ಕಾನ್ಸೆಪ್ಟ್ ಇದೀಗ ಸೆಲೆಬ್ರೆಟಿಗಳ ಲೋಕದಲ್ಲಿ ಟ್ರೆಂಡಿಯಾಗಿದೆ. ಇದನ್ನು ಸಾಮಾನ್ಯ ಮಹಿಳೆಯರು ಕೂಡ ಕಾಪಿ ಮಾಡ ತೊಡಗಿದ್ದು, ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಅತಿ ಹೆಚ್ಚು ಫಾಲೋ ಮಾಡುತ್ತಿದ್ದಾರೆ. ವಿಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮಿಮಿ ಚರ್ಕವರ್ತಿಯ ಪ್ರಯೋಗಾತ್ಮಕ ಸೀರೆ ಸ್ಟೈಲಿಂಗ್
ಇತ್ತೀಚೆಗೆ ನಟಿ ಮಿಮಿ ಚರ್ಕವರ್ತಿ ರೆಡ್ ಅಥವಾ ಸ್ಕಾರ್ಲೆಟ್ ಹಾಗೂ ಕ್ರೀಮೀಶ್ ಬಣ್ಣದ ಬಿಗ್ ಸ್ಟ್ರೈಪ್ಸ್ ಸೀರೆಗೆ ಮ್ಯಾಚ್ ಆಗದ ಬ್ಲ್ಯಾಕ್ ಕಲರ್‌ನ ಚೆಕ್ಸ್ ಬ್ಲೌಸ್ ಧರಿಸಿದ್ದರು. ಅಂದಹಾಗೆ, ಅದು ಸೀರೆಯ ಬ್ಲೌಸ್ ಅಲ್ಲ, ಜತೆಗೆ ಕಾಂಟ್ರಸ್ಟ್ ಶೇಡ್‌ನ ಡಿಫರೆಂಟ್ ಪ್ಯಾಟರ್ನ್‌ನ ಬ್ಲೌಸ್. ಇತ್ತ ಟ್ರೆಡಿಷನಲ್ ಲುಕ್ಕು ಅಲ್ಲ, ಅತ್ತ ಇದುವರೆಗೂ ಇದ್ದ ಕಾನ್ಸೆಪ್ಟೂ ಅಲ್ಲ! ಬದಲಿಗೆ ಇದೊಂದು ಎಕ್ಸ್‌ಪರಿಮೆಂಟ್ ಸ್ಟೈಲಿಂಗ್ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಕಲರ್ ಸ್ಟ್ರೈಪ್ಸ್‌ನ ಮಿಕ್ಸ್ ಮ್ಯಾಚ್
ಈ ಮೊದಲು ಮಿಕ್ಸ್ ಮ್ಯಾಚ್ ಮಾಡುವುದಾದಲ್ಲಿ ಕಾಂಟ್ರಸ್ಟ್ ಕಲರ್‌ಗೆ ಮಾತ್ರ ಆದ್ಯತೆ ನೀಡುತ್ತಿದ್ದರು. ಇದೀಗ ಕಂಪ್ಲೀಟ್ ಸ್ಟೈಲಿಂಗ್ ರಿವಾಜು ಬದಲಾಗಿದೆ. ಡಿಫರೆಂಟ್ ಲುಕ್ ನೀಡುವ ಸಲುವಾಗಿ ಟ್ರೆಡಿಷನಲ್ ಲುಕ್ ನೀಡುವ ಚೆಕ್ಸ್ ಪ್ರಿಂಟ್‌ನ ಬ್ಲೌಸನ್ನು ಸ್ಟ್ರೈಪ್ಸ್ ಸೀರೆಗೆ ಮ್ಯಾಚ್ ಮಾಡಲಾಗಿದೆ ಎನ್ನುವ ಸ್ಟೈಲಿಸ್ಟ್ ರೀಟಾ ಪ್ರಕಾರ, ಇದೊಂದು ಪ್ರಯೋಗಾತ್ಮಕ ಸ್ಟೈಲಿಂಗ್ ಎನ್ನಬಹುದು.
ಇಂಡೋ-ವೆಸ್ಟರ್ನ್ ಸ್ಟೈಲ್ ಜತೆ ಚೆಕ್ಸ್ ಬ್ಲೌಸ್
ಯಾವುದೇ ಟ್ರೆಡಿಷನಲ್ ಚೆಕ್ಸ್ ಬ್ಲೌಸ್ ಧರಿಸಿ. ಇಂಡೋ-ವೆಸ್ಟರ್ನ್ ಲುಕ್ ಪಡೆಯಬಹುದು ಎನ್ನುವುದಕ್ಕೆ ಈ ಸ್ಟೈಲಿಂಗೇ ಸಾಕ್ಷಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ನೀವೂ ಈ ಸ್ಟೈಲಿಂಗ್ ಟ್ರೈ ಮಾಡಿ ನೋಡಿ
- ನಿಮ್ಮ ಬಳಿ ಸ್ಟ್ರೈಪ್ಸ್ ಸೀರೆಯಿದ್ದಲ್ಲಿ ಇದೇ ರೀತಿ ಟ್ರೈ ಮಾಡಲು ಚೆಕ್ಸ್ ಪ್ರಿಂಟ್‌ನ ಬ್ಲೌಸ್ ಧರಿಸಿ.
- ಸೀರೆಗೆ ಅಪೋಸಿಟ್ ಇರುವಂತಹ ವಿನ್ಯಾಸದ ಬ್ಲೌಸ್ ಆಯ್ಕೆ ಮಾಡಿ.
- ಕಾಂಟ್ರಸ್ಟ್ ಬಣ್ಣದ ಜತೆಗೆ ಪ್ರಿಂಟ್ ಕೂಡ ವಿಭಿನ್ನವಾಗಿರಬೇಕು.