ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion Tips 2026: ನಾರಿಯರ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡುವ ಕಾಂಚೀಪುರಂ ಚೆಕ್ಸ್ ಸಿಲ್ಕ್‌ ಸೀರೆಗಳು

ಪಕ್ಕಾ ಸಾಂಪ್ರದಾಯಿಕ ಲುಕ್‌ ನೀಡುವ ಕಾಂಜೀವರಂ ಅಥವಾ ಕಾಂಚೀಪುರಂ ಚೆಕ್ಸ್ ಸೀರೆಗಳು ಮರಳಿದ್ದು, ಎಲ್ಲಾ ವಯಸ್ಸಿನ ನಾರಿಯರನ್ನು ಸಿಂಗರಿಸುತ್ತಿವೆ. ಯಾವ್ಯಾವ ವಿನ್ಯಾಸದವು ಟ್ರೆಂಡಿಯಾಗಿವೆ? ಸ್ಟೈಲಿಂಗ್‌ ಹೇಗೆ? ಈ ಬಗ್ಗೆ ಸೀರೆ ಸ್ಪೆಷಲಿಸ್ಟ್‌ಗಳು ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಶ್ರೀ ಮುಖಿ, ನಟಿ
1/5

ಸಾಂಪ್ರದಾಯಿಕ ಲುಕ್‌ ನೀಡುವಂತಹ ಬಗೆಬಗೆಯ ಕಲರ್‌ನ ಚೆಕ್ಸ್ ವಿನ್ಯಾಸದ ಕಾಂಚೀಪುರಂ (ಕಾಂಜೀವರಂ) ಸೀರೆಗಳು ಮರಳಿವೆ.

2/5

ಟ್ರೆಡಿಷನಲ್‌ ವಿನ್ಯಾಸದಲ್ಲಿ ಕಾಂಚೀಪುರಂ ಚೆಕ್ಸ್ ಸೀರೆಗಳು

ಹೌದು, ಪಕ್ಕಾ ಟ್ರೆಡಿಷನಲ್‌ ಲುಕ್‌ ನೀಡುವಂತಹ ಹಸಿರು, ಕೆಂಪು, ನೀಲಿ, ಹಳದಿ ಸೇರಿದಂತೆ ನಾನಾ ಬಗೆಯ ಕಾಂಜೀವರಂ ಚೆಕ್ಸ್ ಸೀರೆಗಳು ಮುಂಬರುವ ಸೀಸನ್‌ನಲ್ಲಿ ಟ್ರೆಂಡಿಯಾಗಲು ಸಿದ್ಧವಾಗಿವೆ. ಅಲ್ಲದೇ ಈಗಾಗಲೇ ಎಲ್ಲಾ ವಯಸ್ಸಿನ ನಾರಿಯರನ್ನು ಸಿಂಗರಿಸುತ್ತಿವೆ.

3/5

ಚಿಕ್ಕ-ದೊಡ್ಡ ಚೆಕ್ಸ್‌ನ ಸೀರೆಗಳು

ಚಿಕ್ಕ ಹಾಗೂ ಬಾಕ್ಸ್‌ನಂತೆ ಕಾಣಿಸುವ ದೊಡ್ಡ ಸೈಜ್‌ನ ಚೆಕ್ಸ್ ವಿನ್ಯಾಸದ ಕಾಂಜೀವರಂ ಸೀರೆಗಳು ಮೊದಲಿನಿಂದಲೂ ಟ್ರೆಡಿಷನಲ್‌ ಲುಕ್‌ ಬಯಸುವ ಮಾನಿನಿಯರ ವಾರ್ಡ್ರೋಬ್‌ನಲ್ಲಿ ಸ್ಥಾನ ಪಡೆದಿವೆ. ಆದರೆ, ಈ ಸೀಸನ್‌ನಲ್ಲಿ ಒಂದಿಷ್ಟು ಹೊಸ ಬಗೆಯ ಮೊಟಿವ್ಸ್ ಹಾಗೂ ಬುಟ್ಟಾ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ. ಅಷ್ಟೇಕೆ? ನವಿಲು, ಆನೆ, ದ್ರಾಕ್ಷಿ, ಜುಮಕಿ ಗಂಡಭೇರುಂಡ ಹಾಗೂ ಹೂಗಳ ಚಿತ್ತಾರದ ಮೊಟಿವ್ಸ್‌ನಂತಹ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ.

4/5

ಅತ್ಯಾಕರ್ಷಕ ಬಾರ್ಡರ್‌ಗಳಲ್ಲಿ ಕಾಂಚೀಪುರಂ ಸೀರೆಗಳು

ಇನ್ನು ಎಲ್ಲರಿಗೂ ತಿಳಿದಿರುವಂತೆ, ಕಾಂಜೀವರಂ ಚೆಕ್ಸ್ ಸೀರೆಗಳಲ್ಲಿ ಅತ್ಯಾಕರ್ಷಕ ಭಾಗವೆಂದರೇ ಬಾರ್ಡರ್‌ಗಳು ಎನ್ನಬಹುದು. ಕೆಲವು ಸೀರೆಗಳು ಸೇಮ್‌ ಕಲರ್‌ನ ಬಾರ್ಡರ್‌ ಹೊಂದಿರುತ್ತವೆ. ಇನ್ನು ಕೆಲವು ಕಾಂಟ್ರಾಸ್ಟ್‌ ಬಣ್ಣದಲ್ಲಿರುತ್ತವೆ ಎನ್ನುತ್ತಾರೆ ರೇಷ್ಮೆ ಸೀರೆ ಸ್ಪೆಷಲಿಸ್ಟ್ ರಾಜಿ ಹಾಗೂ ದಾಮಿನಿ.

5/5

ಕಾಂಚೀಪುರಂ ಚೆಕ್ಸ್ ಸೀರೆ ಸ್ಟೈಲಿಂಗ್‌

  • ಕಂಪ್ಲೀಟ್‌ ಟ್ರೆಡಿಷನಲ್‌ ಮೇಕೋವರ್‌ ಮಾಡಿ.
  • ಹಣೆಗೆ ದೊಡ್ಡ ಬಂಗಾಲಿ ಬಿಂದಿಯಿಡಿ.
  • ಗೋಲ್ಡ್ ಜ್ಯುವೆಲರಿ ಧರಿಸಿ.
  • ಸೀರೆಗೆ ಡಾಬು ಧರಿಸಿ.
  • ಟ್ರೆಡಿಷನಲ್‌ ಹೇರ್‌ಸ್ಟೈಲ್‌ ಮಾಡಿಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author