ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಜೆನ್‌ ಜಿ ಯುವಕರನ್ನು ಸೆಳೆದ ನೀಲ್‌ ನಿತಿನ್‌ ಧರಿಸಿದ ವೈಬ್ರೆಂಟ್‌ ಕಲರ್‌ ಕುರ್ತಾ

Neil Nitin: ಬಾಲಿವುಡ್‌ ನಟ ನೀಲ್‌ ನಿತಿನ್‌ ಧರಿಸಿದ ವೈಬ್ರೆಂಟ್‌ ಕಲರ್‌ನ ಯೆಲ್ಲೋ ಕಲರ್‌ ಪ್ರಿಂಟೆಡ್‌ ಕುರ್ತಾ ಜೆನ್‌ ಜಿ ಯುವಕರನ್ನು ಸೆಳೆದಿದೆ. ಇದ್ಯಾವ ಬಗೆಯ ಕುರ್ತಾ? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ನೀಲ್‌ ನಿತಿನ್‌ ಮುಖೇಶ್‌, ನಟ
1/5

ಬಾಲಿವುಡ್‌ ನಟ ನೀಲ್‌ ನಿತಿನ್‌ ಧರಿಸಿದ್ಧ ವೈಬ್ರೆಂಟ್‌ ಕಲರ್‌ನ ಯೆಲ್ಲೋ ಕಲರ್‌ ಪ್ರಿಂಟೆಡ್‌ ಕುರ್ತಾ ಸದ್ಯ ಜೆನ್‌ ಜಿ ಯುವಕರನ್ನು ಸೆಳೆದಿದೆ.

2/5

ಟ್ರೆಂಡ್‌ ಲಿಸ್ಟ್‌ಗೆ ಸೇರಿದ ಕುರ್ತಾ

ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣಿಸುವ ಈ ವೈಬ್ರೆಂಟ್‌ ಶೇಡ್‌ನ ಈ ಕುರ್ತಾ ಮುಂಬರುವ ಫೆಸ್ಟೀವ್‌ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ ಲಿಸ್ಟ್‌ಗೆ ಈಗಾಗಲೇ ಸೇರಿದ್ದು, ಮುಂಬರುವ ಸೀಸನ್‌ನಲ್ಲಿ ವೈರಲ್‌ ಎಥ್ನಿಕ್‌ ಔಟ್‌ಫಿಟ್‌ ಲಿಸ್ಟ್‌ಗೆ ಸೇರಲಿದೆ.

3/5

ನೀಲ್‌ ನಿತಿನ್‌ ಯೆಲ್ಲೋ ವೈಬ್ರೆಂಟ್‌ ಕುರ್ತಾ

ನೀಲ್‌ ನಿತಿನ್‌ ಮುಖೇಶ್‌ ಧರಿಸಿದ್ಧ, ಈ ವೈಬ್ರೆಂಟ್‌ ಶೆಡ್‌ ಯೆಲ್ಲೋ ಕುರ್ತಾ ವಿಶೇಷತೆ ಏನು ಗೊತ್ತಾ? ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ ರಿಟೇಲ್‌ ಶಾಪ್‌ಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವುದು ಹಾಗೂ ಹೊಸ ಲುಕ್‌ ಬಯಸುವ ಜೆನ್‌ ಜಿ ಯುವಕರನ್ನು ಸೆಳೆದಿರುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ವೆರೈಟಿ ಕಲರ್‌ನಲ್ಲಿ ವೈಬ್ರೆಂಟ್‌ ಶೇಡ್‌ ಪ್ರಿಂಟೆಡ್‌ ಕುರ್ತಾ

ಯೆಲ್ಲೋ ಪ್ರಿಂಟೆಡ್‌ ಅಬ್‌ಸ್ಟ್ರಾಕ್ಟ್ ಡಿಸೈನ್‌ನ ಪ್ರಿಂಟೆಡ್‌ ಕುರ್ತಾಗಳು ಫೆಸ್ಟೀವ್‌ ಲುಕ್‌ ಬಯಸುವ ಯುವಕರಿಗೆಂದೇ ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ. ನಿಯಾನ್‌, ಆರೆಂಜ್‌, ನೀಲಿ ಶೇಡ್‌ಗಳಲ್ಲಿ ಹಾಗೂ ವೈವಿಧ್ಯಮಯ ಕಾಲರ್‌ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಾಜನ್‌.

5/5

ವೈಬ್ರೆಂಟ್‌ ಕುರ್ತಾ ಸ್ಟೈಲಿಂಗ್‌ ಹೇಗೆ?

  • ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವಂತಹ ವರ್ಣದಲ್ಲಿರುವ ಕುರ್ತಾವನ್ನೇ ಆಯ್ಕೆ ಮಾಡಿ, ಧರಿಸಿ.
  • ಸ್ಲಿಮ್‌ ಫಿಟ್‌ ವೈಬ್ರೆಂಟ್‌ ಕುರ್ತಾ ಪ್ರಿಫರ್‌ ಮಾಡಿ.
  • ವೈಬ್ರೆಂಟ್‌ ಕಲರ್‌ ಆಗಿರುವುದರಿಂದ ಮಿನಿಮಲ್‌ ಜ್ಯುವೆಲರಿ ಧರಿಸಿದರೇ ಸಾಕು.
  • ಫಂಕಿ ಹೇರ್‌ಸ್ಟೈಲ್‌ ಮಾಡುವುದು ಬೇಡ.
  • ಆದಷ್ಟೂ ಫುಲ್‌ ಸ್ಲೀವ್‌ ಕುರ್ತಾಗೆ ಆದ್ಯತೆ ನೀಡಿ.
  • ಕುರ್ತಾಗೆ ಪೈಜಾಮ ಹಾಗೂ ಪುಶ್‌ಬ್ಯಾಕ್‌ ಪ್ಯಾಂಟ್‌ ಧರಿಸಬಹುದು.
  • ಫ್ಲೋರಲ್‌ ಹಾಗೂ ಜೆಮೆಟ್ರಿಕ್‌ ಪ್ರಿಂಟ್ಸ್‌ನ ಕುರ್ತಾಗಳು ಓಕೆ.

ಶೀಲಾ ಸಿ ಶೆಟ್ಟಿ

View all posts by this author