ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಸಿಂಪಲ್‌ ಲುಕ್‌ಗಾಗಿ ಬೇಡಿಕೆ ಸೃಷ್ಟಿಸಿಕೊಂಡ ಚಂದೇರಿ ಸಿಲ್ಕ್‌ ಕುರ್ತಾ ಸೆಟ್ಸ್

Season Fashion 2026: ಸಿಂಪಲ್‌ ಲುಕ್‌ ನೀಡುವ ಚಂದೇರಿ ಸಿಲ್ಕ್‌ ಫ್ಯಾಬ್ರಿಕ್‌ನ ಕುರ್ತಾ ಸೆಟ್‌ಗಳು ಈ ಸೀಸನ್‌ನಲ್ಲಿ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಇದ್ಯಾವ ಬಗೆಯ ಫ್ಯಾಷನ್‌ವೇರ್ಸ್? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ರುಹಾನಿ ಶರ್ಮಾ, ನಟಿ
1/5

ಚಂದೇರಿ ಸಿಲ್ಕ್‌ ಕುರ್ತಾ ಸೆಟ್‌ಗಳು ಇತ್ತೀಚೆಗೆ ಟ್ರೆಂಡಿಯಾಗಿವೆ. ಅದರಲ್ಲೂ ಡೀಸೆಂಟ್‌ ಲುಕ್‌ ಬಯಸುವ ಮಾನಿನಿಯರು ಈ ಶೈಲಿಯ ಕುರ್ತಾಗಳ ಮೊರೆ ಹೋಗುತ್ತಿದ್ದಾರೆ. ಅವುಗಳಲ್ಲಿ ಅತಿ ಹೆಚ್ಚಾಗಿ ಪಾಸ್ಟೆಲ್‌ ಶೇಡ್‌ನವು ಚಾಲ್ತಿಯಲ್ಲಿವೆ ಹಾಗೂ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

2/5

ಸಿಂಪಲ್‌ ಲುಕ್‌ಗಾಗಿ ಚಂದೇರಿ ಸಿಲ್ಕ್‌ ಕುರ್ತಾ ಸೆಟ್‌

ಅಂದಹಾಗೆ, ಸಾಕಷ್ಟು ಮಾನಿನಿಯರು ಅದರಲ್ಲೂ ವರ್ಕಿಂಗ್‌ ಮಹಿಳೆಯರು ತಮ್ಮ ದಿನನಿತ್ಯದ ಫ್ಯಾಷನ್‌ನಲ್ಲಿ ಈ ಶೈಲಿಯ ಕುರ್ತಾ ಸೆಟ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಅದರಲ್ಲೂ ತ್ರೀ ಪೀಸ್‌ ಇರುವಂತಹ ಕುರ್ತಾ ಸೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಲೈಟ್‌ವೈಟ್‌ ಹಾಗೂ ಧರಿಸಿದಾಗ ನೋಡಲು ಎಲಿಗೆಂಟ್‌ ಆಗಿ ಕಾಣಿಸುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ಟ್ರೆಂಡಿಯಾಗಿರುವ ಶೇಡ್‌ಗಳು

ಇನ್ನು, ಈ ಶೈಲಿಯ ಕುರ್ತಾ ಸೆಟ್‌ಗಳಲ್ಲಿ ಪಾಸ್ಟೆಲ್‌ ಶೇಡ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಅದರಲ್ಲೂ ಯೆಲ್ಲೋ, ಲೆಮೆನ್‌ ಯೆಲ್ಲೋ ನಿಯಾನ್‌ ಗ್ರೀನ್‌, ಆರೆಂಜ್‌, ಲೋಟಸ್‌ ಪಿಂಕ್‌, ಬಬ್ಬಲ್‌ ಗಮ್‌ ಪಿಂಕ್‌, ಓಷನ್‌ ಬ್ಲ್ಯೂ ಹೀಗೆ ಮನಮಹೋಕವಾ ಕಲರ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.

4/5

ಚಂದೇರಿ ಸಿಲ್ಕ್‌ ಕುರ್ತಾ ಸೆಟ್‌ ವಿಶೇಷತೆ

ಸದ್ಯ ಸಾಲಿಡ್‌ ಕಲರ್‌ಗಳಲ್ಲಿ ದೊರೆಯುತ್ತಿರುವ ಈ ಶೈಲಿಯ ಕುರ್ತಾಗಳು ಪ್ರಿಂಟ್ಸ್‌ನಲ್ಲೂ ಕಾಣಿಸಿಕೊಂಡಿವೆ.

5/5

ಚಂದೇರಿ ಸಿಲ್ಕ್‌ ಕುರ್ತಾ ಸೆಟ್ ಪ್ರಿಯರಿಗೆ ಟಿಪ್ಸ್

  • ಆದಷ್ಟೂ ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವಂತದ್ದನ್ನು ಧರಿಸಿ.
  • ಸಿಂಪಲ್‌ ಮೇಕೋವರ್‌ ಸಾಕು.
  • ಡೈಲಿವೇರ್‌ಗೆ ಅಂದವಾಗಿ ಕಾಣಿಸುತ್ತವೆ.
  • ಕೆಲವು ಟ್ರಾನ್ಸ್‌ಪರೆಂಟ್‌ ಇರುವುದರಿಂದ ಆದಷ್ಟೂ ಇನ್ನರ್‌ವೇರ್‌ ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author