ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ವಿಂಟರ್‌ನಲ್ಲಿ ಕಟೌಟ್‌ ಆದ ಶನಾಯ ಪ್ಯಾಂಟ್‌ ಸೂಟ್‌

ವಿಂಟರ್‌ ಸೀಸನ್‌ ಫ್ಯಾಷನ್‌ನಲ್ಲಿ ಬಾಲಿವುಡ್‌ ನಟಿ ಶನಾಯ ಕಪೂರ್‌ ಪ್ಯಾಂಟ್‌ಸೂಟ್‌ ಕಟೌಟ್‌ ಆಗಿದೆ. ಅವರ ಈ ಹೊಸ ಬಗೆಯ ಪ್ಯಾಂಟ್‌ಸೂಟ್‌ ಹೊಸ ಪ್ರಯೋಗಗಳನ್ನು ಮಾಡಲು ಬಯಸುವ ಅಲ್ಟ್ರಾ ಮಾಡರ್ನ್‌ ಯುವತಿಯರನ್ನು ಸೆಳೆದಿದೆ. ಇದ್ಯಾವ ಬಗೆಯ ಪ್ಯಾಂಟ್‌ಸೂಟ್‌? ಇಲ್ಲಿದೆ ವಿವರ.

ಚಿತ್ರಗಳು: ಶನಾಯ ಕಪೂರ್‌, ಬಾಲಿವುಡ್‌ ನಟಿ
1/5

ಕಟೌಟ್‌ ಪ್ಯಾಂಟ್‌ ಸೂಟ್‌

ಬಾಲಿವುಡ್‌ ನಟಿ ಶನಾಯ ಕಪೂರ್‌ ವಿಂಟರ್‌ ಸೀಸನ್‌ ಫ್ಯಾಷನ್‌ನಲ್ಲಿ ಪ್ಯಾಂಟ್‌ ಸೂಟ್‌ ಕಟೌಟ್‌ ಆಗಿದೆ.

2/5

ಅಲ್ಟ್ರಾ ಮಾಡರ್ನ್‌ ಯುವತಿಯರಿಗೆ ಹೊಸ ಐಡಿಯಾ

ಬಾಲಿವುಡ್‌ ನಟಿ ಶನಾಯ ಕಪೂರ್‌‌ ಅವರ ಈ ಹೊಸ ಬಗೆಯ ಪ್ಯಾಂಟ್‌ಸೂಟ್‌ ಹೊಸ ಪ್ರಯೋಗಗಳನ್ನು ಮಾಡಲು ಬಯಸುವ ಅಲ್ಟ್ರಾ ಮಾಡರ್ನ್‌ ಯುವತಿಯರನ್ನು ಸೆಳೆದಿದೆ. ಪ್ಯಾಂಟ್‌ಸೂಟ್‌ನಲ್ಲಿ ಆಕರ್ಷಕವಾಗಿ ಕಾಣಿಸಲು ಅಸಾಧ್ಯ ಎನ್ನುವ ಹುಡುಗಿಯರಿಗೆ ಈ ಡಿಸೈನ್‌ ಹೊಸ ಐಡಿಯಾ ನೀಡಿದೆ.

3/5

ಏನಿದು ಕಟೌಟ್‌ ಬ್ಲೇಜರ್‌ನ ಪ್ಯಾಂಟ್‌ ಸೂಟ್‌ ?

ಅಂದಹಾಗೆ, ಪ್ಯಾಂಟ್‌ಸೂಟ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೇ ಪ್ಯಾಂಟ್‌ಸೂಟನ್ನು ಕೊಂಚ ಮಾಡರ್ನ್‌ ಆಗಿ ಕಾಣಿಸುವಂತೆ ಮಾಡಿರುವ ಕಟೌಟ್‌ ಡಿಸೈನ್‌ ಇದು. ಸೊಂಟದ ಸುತ್ತಾಬೆಲ್ಟ್‌ನಂತೆ ಹಿಡಿದಿಟ್ಟಂತೆ ಕಾಣಿಸುವ ಹಾಗೆ ಡಿಸೈನ್‌ ಮಾಡಿರುವ ಬ್ಲೇಜರ್‌ ಇದು. ನೆಕ್‌ಲೈನ್‌ ಹಾಗೂ ವೇಸ್ಟ್‌ಲೈನ್‌ನನ್ನು ಹೈಲೈಟ್‌ ಮಾಡಿರುವ ಕಟೌಟ್‌ಗಳು ಇಡೀ ಬ್ಲೇಜರನ್ನು ಆವರಿಸಿಕೊಂಡಿದ್ದು, ಇವನ್ನು ಸಿಂಪಲ್‌ ಆಗಿ ಹೇಳುವುದಾದಲ್ಲಿ ಕಟೌಟ್‌ ಬ್ಲೇಜರ್‌ ಅಥವಾ ಕಟೌಟ್‌ ಪ್ಯಾಂಟ್‌ಸೂಟ್‌ ಎನ್ನಲಾಗುತ್ತದೆ ಎನ್ನುತ್ತಾರೆ ಡಿಸೈನರ್ಸ್.

4/5

ಕಟೌಟ್‌ ಬ್ಲೇಜರ್‌ನಲ್ಲಿ ಶನಾಯ ಹಾಟ್‌ ಲುಕ್‌

ಇನ್ನು ಶನಾಯ ಈ ಜನರೇಷನ್‌ನ ನಟಿ, ಸದಾ ಒಂದಲ್ಲ ಒಂದು ಬಗೆಯ ಫ್ಯಾಷನ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಈ ಬಾರಿ ಕೊಂಚ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದು ಮಾಡರ್ನ್‌ ಹುಡುಗಿಯರನ್ನು ಸೆಳೆದಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಪ್ರಯೋಗಾತ್ಮಕ ಸ್ಟೈಲಿಂಗ್‌

ತೀರಾ ಸಿಂಪಲ್‌ ಮೇಕೋವರ್‌ನಲ್ಲಿ ಕಾಣಿಸಿಕೊಂಡಿರುವ ಶನಾಯರ ಈ ಕಟೌಟ್‌ ಪ್ಯಾಂಟ್‌ ಸೂಟ್‌ ಲುಕ್‌ ಸದ್ಯ ಯುವತಿಯರ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಸೇರಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author