ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಡೆನಿಮ್‌ ಟ್ಯೂನಿಕ್‌ನಲ್ಲಿ ಹುಮಾ ಖುರೇಷಿ ಬಿಂದಾಸ್ ಫ್ಯಾಷನ್‌

Huma Qureshi Glamorous Look: ಅಸ್ಸೆಮ್ಮಿಟ್ರಿಕಲ್‌ ಡೆನಿಮ್‌ ಟ್ಯೂನಿಕ್‌ ಡ್ರೆಸ್‌ನಲ್ಲಿ ಬಾಲಿವುಡ್‌ ನಟಿ ಹುಮಾ ಖುರೇಷಿ ಬಿಂದಾಸ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡೆನಿಮ್‌ನಲ್ಲೂ ಕೂಡ ಗ್ಲಾಮರಸ್‌ ಆಗಿ ಕಾಣಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಇದ್ಯಾವ ಬಗೆಯ ಫ್ಯಾಷನ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಹುಮಾ ಖುರೇಷಿ, ಬಾಲಿವುಡ್‌ ನಟಿ, ಫೋಟೋಗ್ರಫಿ: ರೋಹನ್‌ ಗೋರೆಗಾಂವ್ಕರ್‌
1/5

ಡೆನಿಮ್‌ ಡ್ರೆಸ್‌ನಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್‌ ನಟಿ ಹುಮಾ ಖುರೇಷಿ.‌ ಹೌದು, ನಟಿ ಹುಮಾ ಖುರೇಷಿ ರೆಡ್‌ ಕಾರ್ಪೆಟ್‌ ಸಮಾರಂಭವೊಂದರಲ್ಲಿ ಅಸ್ಸೆಮ್ಮಿಟ್ರಿಕಲ್‌ ಡೆನಿಮ್‌ನ ಟ್ಯೂನಿಕ್‌ ಡ್ರೆಸ್‌ನಲ್ಲಿ ಬಿಂದಾಸ್‌ ಸ್ಟೈಲ್‌ನಲ್ಲಿ ವಾಕ್‌ ಮಾಡಿರುವುದು ಡೆನಿಮ್‌ ಪ್ರಿಯರನ್ನು ಸೆಳೆದಿದೆ.

2/5

ಗೌನ್‌, ಮ್ಯಾಕ್ಸಿ, ಹೆವಿ ಡಿಸೈನರ್‌ವೇರ್‌ ಹೊರತುಪಡಿಸಿಯೂ ರೆಡ್‌ ಕಾರ್ಪೆಟ್‌ನಲ್ಲಿ ವಾಕ್‌ ಮಾಡಬಹುದು, ಅದರಲ್ಲೂ ಹಾಟ್‌ ಆಗಿ ಕಾಣಿಸಬಹುದು ಎಂಬುದನ್ನು ನಟಿ ಹುಮಾ ಖುರೇಷಿ ಪ್ರೂವ್‌ ಮಾಡಿದ್ದಾರೆ.

3/5

ವಿಂಟರ್‌ ಸೀಸನ್‌ನಲ್ಲಿ ಗ್ಲಾಮರಸ್‌ ಡೆನಿಮ್‌ ಡ್ರೆಸ್‌

ವಿಂಟರ್‌ ಸೀಸನ್‌ನಲ್ಲಿ ಡೆನಿಮ್‌ ಡ್ರೆಸ್‌ಗಳು ಮರಳುವುದು ಸಾಮಾನ್ಯ. ಆದರೆ, ಇದೇ ಫ್ಯಾಬ್ರಿಕ್‌ನಲ್ಲಿ ಅಂದಗಾಣುವ ಅದರಲ್ಲೂ ಹಾಟ್‌ ಲುಕ್‌ ನೀಡುವ ಕಟೌಟ್‌ ಡೆನಿಮ್‌ ಡ್ರೆಸ್‌ಗಳಲ್ಲಿಯೂ ಕಾಣಿಸಬಹುದು ಎಂಬುದನ್ನು ವನ್‌ ಟ್ರೂ ಪೇರಿಂಗ್‌ ಬ್ರಾಂಡ್‌ನ ಡ್ರೆಸ್‌ ಧರಿಸಿ ಹುಮಾ ಖುರೇಷಿ ತೋರಿಸಿದ್ದಾರೆ. ಇದು ಡೆನಿಮ್‌ ಪ್ರಿಯರಿಗೆ ಟ್ರೆಂಡ್‌ ಫಾಲೋ ಮಾಡಲು ಸಹಾಯವಾಗಬಹುದು ಎಂದಿದ್ದಾರೆ ಸ್ಟೈಲಿಸ್ಟ್‌ಗಳು.

4/5

ಡೆನಿಮ್‌ ಟ್ಯೂನಿಕ್‌ ಡ್ರೆಸ್‌

ಅಂದಹಾಗೆ, ಇದೊಂದು ಡೆನಿಮ್‌ ಫ್ಯಾಬ್ರಿಕ್‌ನ ಡ್ರೆಸ್‌ ಆಗಿದ್ದು, ಸೊಟ್ಟವಾಗಿ ಸೈಡ್‌ ಕಟ್‌ ಮಾಡಿದಂತಿದೆ. ಕಾಲುಗಳು ಸುಂದರವಾಗಿ ಕಾಣಿಸುವಂತೆ ಟಾಸೆಲ್ಸ್‌ನಂತಹ ಕಟೌಟ್‌ ಟೊರ್ನ್‌ ವಿನ್ಯಾಸ ಮಾಡಲಾಗಿದೆ. ಎಡಭಾಗದಲ್ಲಿ ಚೆಕ್ಸ್ ಪ್ರಿಂಟ್‌ನ ಪ್ಯಾಚ್‌ ವರ್ನ್‌ ಇಡೀ ಡ್ರೆಸ್‌ನ ಬ್ಯೂಟಿ ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

5/5

ಹುಮಾ ಹೈ ಫ್ಯಾಷನ್‌ ಮೇಕೋವರ್‌

ಹುಮಾ ಖುರೇಷಿಯವರು ಈ ಡೆನಿಮ್‌ ಡ್ರೆಸ್‌ಗೆ ನೀ ಲೆಂಥ್‌ ಬೂಟ್ಸ್ ಹಾಗೂ ಸನ್‌ಗ್ಲಾಸ್‌ ಧರಿಸಿರುವುದು ಹೈ ಫ್ಯಾಷನ್‌ ರೂಲ್ಸ್ ಹೈ ಲೈಟ್‌ ಮಾಡಿದೆ. ಜತೆಗೆ ವೆಸ್ಟರ್ನ್‌ ಲುಕ್‌ಗಾಗಿ ಅವರು ಮಾಡಿರುವ ಹೇರ್‌ಸ್ಟೈಲ್‌ ಹಾಗೂ ಮೇಕಪ್‌ ಕೂಡ ಕ್ಲಾಸಿ ಲುಕ್‌ ನೀಡಿದೆ. ಒಟ್ಟಾರೆ, ಸ್ಟೈಲಿಸ್ಟ್ ಸಂಜಮ್‌ ಕೌರ್‌ ಅವರ ಸ್ಟೈಲಿಂಗ್‌ ಹುಮಾ ಖುರೇಶಿಯವರನ್ನು ಹೈ ಫ್ಯಾಷನ್‌ ಗರ್ಲ್‌ನಂತೆ ಬಿಂಬಿಸಿದೆ ಎಂದು ಫುಲ್‌ ಮಾರ್ಕ್ಸ್ ನೀಡಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author