ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಸೀರೆಯಂತೆ ಕಾಣಿಸುವ ಫ್ಯೂಶನ್‌ ಡ್ರೆಸ್‌ ಜಮಾನವಿದು!

Fusion Dress: ನೋಡಲು ಥೇಟ್‌ ಇಂಡೋ-ವೆಸ್ಟರ್ನ್‌ ಸೀರೆಯಂತೆ ಕಾಣಿಸುವ ಫ್ಯೂಶನ್‌ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಬಂದಿವೆ. ಇದ್ಯಾವ ಬಗೆಯ ಔಟ್‌ಫಿಟ್‌? ಕನ್‌ಫ್ಯೂಸ್‌ ಮಾಡುವಂತಹ ಡಿಸೈನ್‌ ಯಾವುದು? ಫ್ಯಾಷನಿಸ್ಟಾಗಳು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ರಶ್ಮಿ ದೇಸಾಯಿ, ನಟಿ
1/5

ನೋಡಲು ಥೇಟ್‌ ಸೀರೆಯಂತೆಯೇ ಕಾಣಿಸುವಂತಹ ಫ್ಯೂಶನ್‌ ಡ್ರೆಸ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ.

2/5

ನಾನಾ ರೂಪ ಪಡೆದ ಫ್ಯೂಶನ್‌ ಡ್ರೆಸ್‌ಗಳು

ಹೌದು, ಧರಿಸಿದಾಗ ಸೀರೆಯಂತೆ ಇಲ್ಯೂಷನ್‌ ಕ್ರಿಯೇಟ್‌ ಮಾಡುವಂತಹ ನಾನಾ ಬಗೆಯ ಫ್ಯೂಶನ್‌ ಉಡುಗೆಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿದ್ದು, ಕೆಲವು ಡಿಸೈನರ್‌ಗಳ ಕೈಗಳಲ್ಲಿ ಬಗೆಬಗೆಯ ರೂಪ ಪಡೆದು ಬಿಡುಗಡೆಗೊಂಡಿವೆ.

3/5

ರಶ್ಮಿ ದೇಸಾಯಿಯ ಫ್ಯೂಶನ್‌ ಡ್ರೆಸ್‌

ಇನ್ನು ಇದಕ್ಕೆ ಪೂರಕ ಎಂಬಂತೆ, ನಟಿ ರಶ್ಮಿ ದೇಸಾಯಿ ಇತ್ತೀಚೆಗೆ ಧರಿಸಿದ ಪ್ರೀ ಡ್ರೇಪ್ಡ್ ಇಂಡೋ-ವೆಸ್ಟರ್ನ್‌ ಸ್ಟೈಲ್‌ನ ಉಡುಗೆ ಸಾಕಷ್ಟು ಫ್ಯಾಷನ್‌ ಪ್ರಿಯರಿಗೆ ಕನ್‌ಫ್ಯೂಶನ್‌ ಕ್ರಿಯೇಟ್‌ ಮಾಡಿತ್ತು. ಇದು ಸೀರೆಯಾ ಅಥವಾ ಶರಾರ ಪ್ಯಾಂಟ್‌ಗೆ ಸೀರೆಯಂತೆ ಡಿಸೈನ್‌ ಮಾಡಿರುವುದಾ? ಎಂಬ ಇಲ್ಯೂಷನ್‌ ಕ್ರಿಯೇಟ್‌ ಮಾಡಿತ್ತು. ಆದರೆ ಈ ಕುರಿತಂತೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.

4/5

ಇದ್ಯಾವ ಬಗೆಯ ಫ್ಯೂಶನ್‌ ಡ್ರೆಸ್‌

ರಶ್ಮಿ ದೇಸಾಯಿ ಧರಿಸಿದ್ಧ ಫ್ಯೂಶನ್‌ ಡ್ರೆಸ್ ನಾನಾ ವಿನ್ಯಾಸಗಳನ್ನು ಹೊಂದಿದ್ದು, ಬ್ಯ್ಲೂ ಕಲರ್‌ನ ಜೆಮೆಟ್ರಿಕಲ್‌ ಪ್ರಿಂಟೆಡ್‌ ಸ್ಲೀವ್‌ಲೆಸ್‌ ಕ್ರಾಪ್‌ ಟಾಪ್‌ನಂತಿರುವ ಬ್ಲೌಸ್‌ ಒಳಗೊಂಡಿದೆ. ಅದರ ಮೇಲೊಂದು ಕ್ರೀಮ್‌ ಶೇಡ್‌ನ ಶೀರ್‌ ಫುಲ್‌ ಸ್ಲೀವ್‌ ಲೇಯರ್‌ ಲುಕ್‌ ನೀಡಲಾಗಿದೆ. ಜತೆಗೆ ಇದಕ್ಕೆ ಮ್ಯಾಚ್‌ ಆಗುವಂತೆ ಪ್ರೀ ಡ್ರೇಪ್ಡ್ ಸೀರೆಯಂತೆ ಅಥವಾ ಶರಾರದಂತೆ ಕಾಣಿಸುವ ಅಗಲವಾದ ಪ್ಯಾಂಟ್‌ ಕಾಂಬಿನೇಷನ್‌ ಮಾಡಲಾಗಿದೆ. ಇವೆರೆಡರ ಮೇಲೆ ಸೀರೆಯ ಸೆರಗಿನಂತೆ ಸೈಡಿಗೆ ಡ್ರೇಪ್‌ ಮಾಡಲಾಗಿದೆ ಎನ್ನುವ ಸ್ಟೈಲಿಸ್ಟ್‌ಗಳು ರಶ್ಮಿ ದೇಸಾಯಿಯ ಫ್ಯೂಶನ್‌ ಡ್ರೆಸ್‌ಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ‌

5/5

ಡಿಫರೆಂಟ್‌ ಲುಕ್‌ಗಾಗಿ ಫ್ಯೂಶನ್‌ ಡ್ರೆಸ್

ಇನ್ನು, ಈ ಬಗ್ಗೆ ರಶ್ಮಿ ದೇಸಾಯಿ ಹೇಳುವುದು ಹೀಗಿದೆ. ಯಾವುದೇ ಫ್ಯಾಷನ್‌ ಶೂಟ್‌ ಮಾಡಿದರೂ ಆ ಉಡುಗೆ ಎಲ್ಲರನ್ನು ಸೆಳೆಯಬೇಕು. ಅದರಲ್ಲೂ ಯೋಚಿಸುವಂತೆ ಮಾಡಬೇಕು. ಅದನ್ನು ನನ್ನ ಫ್ಯೂಶನ್‌ ಡ್ರೆಸ್‌ ಮಾಡಿದೆ ಎಂದು ನಗುತ್ತಾ ತಿಳಿಸುತ್ತಾರೆ.

ಶೀಲಾ ಸಿ ಶೆಟ್ಟಿ

View all posts by this author