ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಪ್ಯಾಂಟ್‌ ಇಲ್ಲದ ಬ್ಲೇಜರ್‌ ಫ್ಯಾಷನ್‌ಗೆ ಸೈ ಎಂದ ಟಾಕ್ಸಿಕ್‌ ನಟಿ ತಾರಾ ಸುತಾರಿಯಾ

Tara Sutaria: ಪ್ಯಾಂಟ್‌ ಇಲ್ಲದ ಬ್ಲೇಜರ್‌ ಡ್ರೆಸ್‌ ಅನ್ನು ಧರಿಸಿರುವ ಟಾಕ್ಸಿಕ್‌ ನಟಿ ತಾರಾ ಸುತಾರಿಯಾರ ಈ ಲುಕ್‌ ಫ್ಯಾಷನ್‌ ಪ್ರಿಯರ ಹುಬ್ಬೆರಿಸಿದೆ. ಫ್ಯಾಷನ್‌ ಎಕ್ಸ್‌ಪರ್ಟ್‌ಗಳ ಪ್ರಕಾರ, ತಾರಾ ಸುತಾರಿಯಾ ಧರಿಸಿರುವ ಈ ಡ್ರೆಸ್‌ನ ಲುಕ್‌ಗೆ ಬ್ಲೇಜರ್‌ ಡ್ರೆಸ್‌ ಸ್ಟೈಲಿಂಗ್‌ ಎನ್ನಲಾಗುತ್ತದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ತಾರಾ ಸುತಾರಿಯಾ, ನಟಿ
1/5

ಪ್ಯಾಂಟ್‌ ಇಲ್ಲದ ಬ್ಲೇಜರನ್ನು ಧರಿಸಿದ್ದಾರೆ ಟಾಕ್ಸಿಕ್‌ ನಟಿ ತಾರಾ ಸುತಾರಿಯಾ. ಹೌದು, ಟಾಕ್ಸಿಕ್‌ ಸಿನಿಮಾದ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ನ ಯಂಗ್‌ ನಟಿ ತಾರಾ ಸುತಾರಿಯಾ ಇದೀಗ ಪ್ಯಾನ್‌ ಇಂಡಿಯಾ ನಟಿಯಾಗಿದ್ದು, ತಮ್ಮದೇ ಆದ ಫ್ಯಾಷನ್‌ ಶೂಟ್‌ಗಳ ಮೂಲಕವೂ ಸೋಷಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸುತ್ತಿದ್ದಾರೆ.

2/5

ಪ್ಯಾಂಟ್‌ ಇಲ್ಲದ ಬ್ಲೇಜರ್‌ ವಿಶೇಷತೆ

ಅಂದಹಾಗೆ, ಫ್ಯಾಷನ್‌ ಎಕ್ಸ್‌ಪರ್ಟ್‌ಗಳ ಪ್ರಕಾರ, ತಾರಾ ಸುತಾರಿಯಾ ಧರಿಸಿರುವ ಈ ಡ್ರೆಸ್‌ನ ಲುಕ್‌ಗೆ ಬ್ಲೇಜರ್‌ ಡ್ರೆಸ್‌ ಸ್ಟೈಲಿಂಗ್‌ ಎನ್ನಲಾಗುತ್ತದೆ.

3/5

ಇದ್ಯಾವ ಬಗೆಯ ಸೂಟ್‌?

ತಾರಾ ಧರಿಸಿರುವ ಈ ಬ್ಲೇಜರ್‌ ಟ್ವೀಡ್‌ ಎಸ್‌ ಕರ್ವ್‌ ವಿನ್ಯಾಸದ್ದಾಗಿದ್ದು, ಹೆಲ್ಸಾ ಸ್ಟುಡಿಯೋ ಬ್ರಾಂಡ್‌ನದ್ದಾಗಿದೆ. ಈ ಬ್ಲೇಜರ್‌ನ ಬೆಲೆ ಸರಿ ಸುಮಾರು 31 ರಿಂದ 32 ಸಾವಿರ ರೂ. ಗಳಾಗಿರಬಹುದು. ಹೆವಿ ಪ್ಯಾಡೆಡ್‌ ಶೋಲ್ಡರ್‌ ಹೊಂದಿದ್ದು, ವಿಶೇಷವಾಗಿ ಸೊಂಟದ ಭಾಗ ಶೇಪ್‌ನಲ್ಲಿ ಕಾಣಿಸುವಂತೆ ಹವರ್‌ ಗ್ಲಾಸ್‌ ಡಿಸೈನ್‌ ಮಾಡಲಾಗಿದೆ ಎಂದಿದ್ದಾರೆ ಡಿಸೈನರ್ಸ್.

4/5

ಬ್ಲೇಜರ್‌ಗೆ ಮೈಕ್ರೋ ಶಾರ್ಟ್ಸ್

ಪ್ಯಾಂಟ್‌ ಇಲ್ಲದ ಈ ಬ್ಲೇಜರ್‌ಗೆ ತಾರಾ, ಕಣ್ಣಿಗೆ ಬೀಳದಂತಹ ಮಿನಿ ಬ್ಲ್ಯಾಕ್‌ ಶಾರ್ಟ್ಸ್ ಧರಿಸಿದ್ದಾರೆ. ತಕ್ಷಣಕ್ಕೆ ನೋಡಲು ಕೇವಲ ಬ್ಲೇಜರ್‌ ಮಾತ್ರ ಧರಿಸಿದ್ದಾರೇನೋ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.

5/5

ಮಾಡರ್ನ್‌ ವಿಂಟೇಜ್‌ ಲುಕ್‌ ‌

ಈ ಬ್ಲೇಜರ್‌ ತಾರಾ ಸುತಾರಿಯಾಗೆ ವಿಂಟೇಜ್‌ ಲುಕ್‌ ದೊರೆತಿದೆ. ಜತೆಗೆ ಮಾಡರ್ನ್‌ ಲುಕ್‌ ಟಚ್‌ ಕೂಡ ನೀಡಲಾಗಿದೆ. ಒಟ್ಟಾರೆ, ಟಾಕ್ಸಿಕ್‌ ಸಿನಿಮಾ ನಟಿ ತಾರಾ ಸುತಾರಿಯಾ ತಮ್ಮ ಔಟ್‌ಫಿಟ್‌ಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author