-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಜೆನಿಲಿಯಾ ಬಬ್ಲಿ ಲುಕ್ (Star Fashion Review 2026) ಫಾಲೋವರ್‌ಗಳ ಮನ ಗೆದ್ದಿದೆ. ಆದರೆ, ಈ ಸಮ್ಮರ್‌ನಲ್ಲಿ ಈ ಬಬ್ಲಿ ಲೇಯರ್ ಲುಕ್ ಯಾಕೆ ಎನ್ನುತ್ತಿದ್ದಾರೆ ಫ್ಯಾಷನ್ ವಿಮರ್ಶಕರು. ಸೀಸನ್‌ಗೆ ತಕ್ಕಂತೆ ಕಾಣಿಸಬಹುದಲ್ಲ! ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ ಫ್ಯಾಷನ್ ವಿಶ್ಲೇಷಕರು.
ಇದು ಔಟ್ ಆಫ್ ಸೀಸನ್ ಫ್ಯಾಷನ್
ಹೌದು, ಅವರು ಕೇಳುವ ಪ್ರಶ್ನೆಯಲ್ಲೂ ಲಾಜಿಕ್ ಇದೆ. ಈಗಾಗಲೇ ಬಿರು ಬೇಸಿಗೆ ಶುರುವಾಗಿದೆ. ಅಂತಹದ್ದರಲ್ಲಿ, ಲೇಯರ್ ಲುಕ್ ಮಾಡುವುದಿರಲಿ, ವಿಂಟರ್ ಸೀಸನ್‌ನ ಯಾವುದೇ ಉಡುಗೆ ಕೂಡ ಧರಿಸಲು ಸಾಧ್ಯವಾಗದು! ಆ ಮಟ್ಟಿಗೆ ಈಗಾಗಲೇ ಎಲ್ಲೆಡೆ ಸೆಕೆ ಹಾಗೂ ಬಿಸಿಲು ಶುರುವಾಗಿದೆ. ಹಾಗಾಗಿ ಫ್ಯಾಷನ್ ಪ್ರಿಯರು ಈ ರೀತಿಯ ಟ್ರೆಂಡ್ ಫಾಲೋ ಮಾಡಲು ಸಾಧ್ಯವಿಲ್ಲ! ಮಾಡಿದರೂ ಕೇವಲ ಫೋಟೋಶೂಟ್‌ಗಾಗಿ ಮಾಡಬಹುದು ಎನ್ನುತ್ತಿದ್ದಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಟ್ರೆಂಡ್ ಫಾಲೋ ಮಾಡದ ಜೆನಿಲಿಯಾ
ಅಂದಹಾಗೆ, ಜೆನಿಲಿಯಾ ಈ ಫ್ಯಾಷನ್ ಫೋಟೋ ಶೂಟ್‌ನಲ್ಲಿ ವೈಬ್ರೆಂಟ್ ಪಿಂಕ್ ಬ್ಲೇಜರ್ ಧರಿಸಿದ್ದಾರೆ. ಅದರೊಳಗೆ ಲೇಯರ್ ಲುಕ್ ನೀಡುವಂತಹ ಬ್ಲ್ಯಾಕ್ ಜಾಲರಿಯಂತಹ ಇನ್ನರ್‌ವೇರ್ ಅದರೊಳಗೆ ಕಾಲರ್ ಇರುವಂತಹ ಶರ್ಟ್, ಇನ್ನು ಇವೆರಡಕ್ಕೂ ಮ್ಯಾಚ್ ಆಗುವಂತಹ ಬ್ಲ್ಯಾಕ್ ದೊಗಲೆ ನ್ಯಾರೋ ಸ್ಟ್ರೇಟ್ ಕಟ್ ಪ್ಯಾಂಟ್ ಧರಿಸಿದ್ದಾರೆ. ಈ ಔಟ್‌ಫಿಟ್ ಇದೀಗ ಔಟ್ ಆಫ್ ಟ್ರೆಂಡ್ ಆಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಮುದ್ದಾಗಿ ಕಾಣಿಸುತ್ತಿರುವ ಜೆನಿಲಿಯಾ
ಅದೇನೇ ಇರಲಿ! ಜೆನಿಲಿಯಾ ಮಾತ್ರ ಈ ಔಟ್‌ಲುಕ್‌ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. ನೋಡಲು ಸಖತ್ ಯಂಗ್ ಆಗಿ ಕಾಣಿಸುತ್ತಿದ್ದಾರೆ ಎನ್ನುವ ಫ್ಯಾಷನ್ ವಿಮರ್ಶಕರು ಅವರ ಈ ಲುಕ್ ಚೆನ್ನಾಗಿದೆ ಆದರೆ, ಟ್ರೆಂಡ್ ಫಾಲೋ ಆಗಿಲ್ಲ! ಫ್ಯಾಷನ್ ರೂಲ್ಸ್ ಬ್ರೇಕ್ ಆಗಿದೆ ಎಂದಿದ್ದಾರೆ.
Summer Fashion 2026: ಶುರುವಾಯ್ತು ಸಮ್ಮರ್ ಫ್ಯಾಷನ್ ಹಂಗಾಮ!
ಫ್ಯಾನ್ಸ್‌ಗೆ ಇಷ್ಟವಾದ ಜೆನಿಲಿಯಾ ಲುಕ್
ಒಟ್ಟಾರೆ, ಅದು ಏನೇ ಇರಲಿ! ಜೆನಿಲಿಯಾ ಅಭಿಮಾನಿಗಳಿಗೆ ಇವರ ಈ ಲುಕ್ ಸಖತ್ ಇಷ್ಟವಾಗಿದೆಯಂತೆ!
(ಲೇಖಕಿ: ಫ್ಯಾಷನ್ ಪತ್ರಕರ್ತೆ)