Star Fashion Review 2026: ಮಹಿಳೆಯರನ್ನು ಸೆಳೆದ ನಟಿ ಅಮೃತಾ ಅಯ್ಯಂಗಾರ್ ಕಾಟನ್ ಸೀರೆ
Amrutha Iyengar: ಸ್ಯಾಂಡಲ್‌ವುಡ್ ನಟಿ ಅಮೃತಾ ಅಯ್ಯಂಗಾರ್ ಉಟ್ಟ ಬ್ಲ್ಯಾಕ್ ಕಾಟನ್ ಸೀರೆ ಸದ್ಯ ಮಹಿಳೆಯರನ್ನು ಸೆಳೆದಿದೆ. ಈ ಸೀರೆಯಲ್ಲಿ ಅವರ ಲುಕ್ ಹೇಗಿದೆ? ಫ್ಯಾಷನ್ ವಿಮರ್ಶಕರು ಹೇಳುವುದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಸ್ಯಾಂಡಲ್‌ವುಡ್ ನಟಿ ಅಮೃತಾ ಅಯ್ಯಂಗಾರ್ ಉಟ್ಟಿರುವ ಬ್ಲ್ಯಾಕ್ ಕಾಟನ್ ಸೀರೆ ಸದ್ಯ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ.
ನಟಿ ಅಮೃತಾ ಅಯ್ಯಂಗಾರ್ ಈ ಸೀರೆಯಲ್ಲಿ ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡಾರ್ಕ್ ಬ್ಲ್ಯಾಕ್ ಸೀರೆಯಲ್ಲೂ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಈ ಲುಕ್ ಕೇವಲ ಮಾನಿನಿಯರನ್ನು ಮಾತ್ರವಲ್ಲ, ಅವರ ಫಾಲೋವರ್‌ಗಳನ್ನು ಸೆಳೆದಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಅಮೃತಾ ಕಾಟನ್ ಸೀರೆ ಮ್ಯಾಜಿಕ್
ಅಂದಹಾಗೆ, ಅಮೃತಾ ಅಯ್ಯಂಗಾರ್ ಉಟ್ಟಿರುವ ಸೀರೆ ದುಬಾರಿಯದ್ದೇನಲ್ಲ! ಬದಲಿಗೆ ಸಿಂಪಲ್ ಕಾಟನ್ ಪ್ರಿಂಟೆಡ್ ಸೀರೆಯಿದು. ಒಡಲ ತುಂಬೆಲ್ಲಾ ಹೂ -ಎಲೆಗಳ ಪ್ರಿಂಟೆಡ್ ಚಿತ್ತಾರವನ್ನು ಹೊಂದಿದೆ. ಜತೆಗೆ ಒಂದು ಸೈಡ್ ಬಾರ್ಡರ್ ಹೊಂದಿದೆ. ನೋಡಲು ತೀರಾ ಸಿಂಪಲ್ ಆಗಿದ್ದರೂ ಎಲ್ಲರಿಗೂ ಇಷ್ಟವಾಗುವಂತಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಅಮೃತಾ ಬ್ಲ್ಯಾಕ್ ಸೀರೆ ಲವ್
ಇನ್ನು, ನಟಿ ಅಮೃತಾ ಅಯ್ಯಂಗಾರ್ ಮೊದಲಿನಿಂದಲೂ ಸೀರೆ ಪ್ರೇಮಿ ಕೂಡ ಹೌದು. ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಕಣ್ಣು ಹಾಯಿಸಿದರೇ ಗೊತ್ತಾಗುತ್ತದೆ. ಆಗಾಗ್ಗೆ ಇವೆಂಟ್‌ಗಳಲ್ಲೂ ಕೂಡ ಸಾಕಷ್ಟು ಬಾರಿ ಸೀರೆಯಲ್ಲೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದುವರೆಗೂ ಅವರು ಉಟ್ಟಿರುವ ಸೀರೆಗಳನ್ನು ಗಮನಿಸಿದಲ್ಲಿ ಹೆಚ್ಚಾಗಿ ಸಿಂಪಲ್ ಸೀರೆಗಳನ್ನೇ ಪ್ರಿಫರ್ ಮಾಡುತ್ತಾರೆಂಬುದನ್ನು ಗಮನಿಸಬಹುದು ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ಮಿಂಚು.
ಇಂಡೋ-ವೆಸ್ಟರ್ನ್ ಸ್ಟೈಲಿಂಗ್
ಅಮೃತಾ ಈ ಸೀರೆಗೆ ವಿ ನೆಕ್‌ನ ಕ್ರಾಪ್ ವೈಟ್ ಕಲರ್‌ನ ಬ್ಲೌಸ್ ಮ್ಯಾಚ್ ಮಾಡಿದ್ದು, ಇಂಡೋ-ವೆಸ್ಟರ್ನ್ ಲುಕ್ ನೀಡಿದೆ. ಜತೆಗೆ ಹಣೆಯ ಬಿಂದಿ ಹಾಗೂ ಕೈಗಳ ಮ್ಯಾಚಿಂಗ್ ಬಳೆಗಳು ಅವರನ್ನು ಮತ್ತಷ್ಟು ಚಲುವೆಯನ್ನಾಗಿಸಿದೆ ಎಂದಿದ್ದಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.