ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Saree Fashion 2026: ಭೂಮಿ ಪೆಡ್ನೇಕರ್ ಉಟ್ಟ ಸ್ಯಾಟಿನ್‌ ಫ್ಲೋರಲ್‌ ಸೀರೆಯ ಜಾದೂ

Bhumi Pednekar: ನಟಿ ಭೂಮಿ ಪೆಡ್ನೇಕರ್ ಉಟ್ಟಿದ್ದ ಸ್ಯಾಟಿನ್‌ ಫ್ಲೋರಲ್‌ ಸೀರೆ ಇದೀಗ ಯುವತಿಯರನ್ನು ಸಮ್ಮೋಹನಗೊಳಿಸಿದೆ. ರೆಟ್ರೊ ಲುಕ್‌ ನೀಡುವ ಈ ಸೀರೆಯ ವಿಶೇಷತೆಯಾದರೂ ಏನು? ಅವರಂತೆಯೇ ಕಾಣಿಸುವುದು ಹೇಗೆ? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಭೂಮಿ ಪೆಡ್ನೇಕರ್‌, ನಟಿ
1/5

ನಟಿ ಭೂಮಿ ಪೆಡ್ನೇಕರ್‌ ಉಟ್ಟ ಫ್ಲೋರಲ್‌ ಸ್ಯಾಟೀನ್‌ ಸೀರೆ ಇದೀಗ ಸೀಸನ್‌ಗೆ ಮರಳಿವೆ. ಹೌದು, ರೆಟ್ರೋ ಲುಕ್‌ ನೀಡುವ ಈ ಶೈಲಿಯ ಸೀರೆಗಳು ಗ್ರಾಫಿಕ್‌ ಫ್ಲೋರಲ್‌ ಚಿತ್ತಾರ ನಯಾ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಹೊಸತನ ಮೂಡಿಸಿವೆ.

2/5

ಭೂಮಿ ಪೆಡ್ನೇಕರ್‌ ಸ್ಯಾಟಿನ್‌ ಫ್ಲೋರಲ್‌ ಸೀರೆ

ಅಂದಹಾಗೆ, ಭೂಮಿ ಪೆಡ್ನೇಕರ್‌, ಆಶ್‌ದೀನ್‌ ಲೈಲೋವಾಲಾ ಬ್ರ್ಯಾಂಡ್‌ನ ಕೌಡಿಯಾ ಸೀರೆ ಅಂದರೇ, ಲೈಲಾಕ್‌ /ಲ್ಯಾವೆಂಡರ್‌ ಶೇಡ್‌ನ ವಿಂಟೇಜ್‌ ಲುಕ್‌ ನೀಡುವ ಫ್ಲೋರಲ್‌ ಪ್ರಿಂಟ್ಸ್ ಸೀರೆಯನ್ನು ಫ್ಯಾಷನ್‌ ಶೂಟ್‌ಗಾಗಿ ಉಟ್ಟಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ಅಪ್‌ಲೋಡ್‌ ಆಗಿದ್ದೇ ತಡ, ಆಗಲೇ ಲೋಕಲ್‌ ಸೀರೆ ಬ್ರ್ಯಾಂಡ್‌ಗಳು ತಮ್ಮ ಸೀರೆಗಳನ್ನು ಪ್ರದರ್ಶನಕ್ಕಿರಿಸಿ, ಆನ್‌ಲೈನ್‌ನಲ್ಲಿ ಈ ಶೈಲಿಯ ಸೀರೆಗಳ ಮಾರಾಟ ಹೆಚ್ಚಿಸಿಕೊಂಡವು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ಭೂಮಿ ಸೀರೆಯ ಸ್ಪೆಷಾಲಿಟಿ

ಒಟ್ಟಿನಲ್ಲಿ, ಭೂಮಿ ಉಟ್ಟ ಈ ಸೀರೆ ವಿಂಟೇಜ್‌ ಲುಕ್‌ ನೀಡುವಂತದ್ದಾಗಿದ್ದು, ರೋಮನ್‌ ಹಾಲಿಡೇ ಕಲೆಕ್ಷನ್‌ದ್ದಾಗಿದೆ. ಸ್ಕಲೋಪ್ಡ್ ಬಾರ್ಡರ್‌ ಹೊಂದಿದ್ದು ಹಾಲ್ಟರ್‌ ನೆಕ್‌ಲೈನ್‌ ಇರುವ ಬ್ಲೌಸ್‌ ಮ್ಯಾಚ್‌ ಮಾಡಲಾಗಿದೆ.

4/5

ಸಾದಾ ಬದಲು ಬಂತು ಪ್ರಿಂಟೆಡ್‌ ಸ್ಯಾಟಿನ್‌ ಸೀರೆ

ಇನ್ನು, ಎಲ್ಲರಿಗೂ ಗೊತ್ತಿರುವಂತೆ, ಸಾದಾ ಸ್ಯಾಟಿನ್‌ ಸೀರೆಗಳು ಮಾತ್ರ ಇನ್ನೂ ಟ್ರೆಂಡ್‌ನಲ್ಲಿವೆ. ರೆಟ್ರೊ ಲುಕ್‌ ಕೆಟಗರಿಯಲ್ಲಿದ್ದ, ಸೈಡಿಗೆ ಸರಿದಿದ್ದ ಸ್ಯಾಟಿನ್‌ ಗ್ರಾಫಿಕ್‌ ಫ್ಲೋರಲ್‌ ಸೀರೆಗಳು ಮತ್ತೊಮ್ಮೆ ಎಂಟ್ರಿ ನೀಡಿವೆ. ಬಗೆಬಗೆಯ ಹೂ-ಬಳ್ಳಿಗಳ ಚಿತ್ತಾರಗಳ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಪರಿಣಾಮ, ಮಾನಿನಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ರಿಯಾ.

5/5

ಭೂಮಿಯಂತೆ ಕಾಣಿಸಲು 5 ಟಿಪ್ಸ್

  • ಫ್ಲೋರಲ್‌ ಸ್ಯಾಟೀನ್‌ ಸೀರೆ ಆಯ್ಕೆ ಮಾಡಿ ಉಡಿ.
  • ಹೊಸತನ ಮೂಡಿಸುವಂತಹ ಫ್ಲೋರಲ್‌ ಚಿತ್ತಾರದ್ದಾಗಿರಲಿ.
  • ಇಂಡೋ-ವೆಸ್ಟರ್ನ್‌ ಲುಕ್‌ ನೀಡಿ.
  • ಗ್ಲಾಮರಸ್‌ ಬ್ಲೌಸ್‌ ಧರಿಸಿ.
  • ಸಿಂಪಲ್‌ ಮೇಕೋವರ್‌ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author