Summer Fashion 2026: ಸಮ್ಮರ್ ವೆಡ್ಡಿಂಗ್ ಫ್ಯಾಷನ್‌ಗೆ ಕಾಲಿಟ್ಟ ಸ್ಲೀವ್‌ಲೆಸ್ ಸನ್ ಕಲರ್ ಲೆಹೆಂಗಾ
Sleeveless Sun-Colored Lehenga: ಸಮ್ಮರ್ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಇದೀಗ ಸನ್ ಕಲರ್‌ನ ಸ್ಲೀವ್‌ಲೆಸ್ ಲೆಹೆಂಗಾಗಳು ಕಾಲಿಟ್ಟಿವೆ. ಜೆನ್ ಜಿಯವರನ್ನು ಸವಾರಿ ಮಾಡತೊಡಗಿವೆ. ಈ ಲೆಹೆಂಗಾದ ವಿಶೇಷತೆಯಾದರೂ ಏನು ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಈ ಬಾರಿಯ ಸಮ್ಮರ್ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಇದೀಗ ವೈಬ್ರೆಂಟ್ ಶೇಡ್‌ನ ಸನ್ ಕಲರ್‌ನ ಸ್ಲೀವ್‌ಲೆಸ್ ಲೆಹೆಂಗಾಗಳು ಕಾಲಿಟ್ಟಿವೆ. ಇಂಡೋ-ವೆಸ್ಟರ್ನ್ ಲುಕ್ ಬಯಸುವ ಮಾನಿನಿಯರನ್ನು ಹಾಗೂ ಜೆನ್ ಜಿಯವರನ್ನು ಸವಾರಿ ಮಾಡತೊಡಗಿವೆ.
ಪಾಯಲ್ ರಜಪೂತ್ ಸ್ಲೀವ್‌ಲೆಸ್ ಲೆಹೆಂಗಾ
ಹೌದು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಪಾಯಲ್ ರಜಪೂತ್ ಫ್ಯಾಷನ್ ಶೂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದ ಸನ್ ಕಲರ್‌ನ ಸ್ಲೀವ್‌ಲೆಸ್-ಬ್ಯಾಕ್‌ಲೆಸ್ ಪ್ರಿಂಟೆಡ್ ಕಮ್ ಸಾದಾ ಕಾಂಬಿನೇಷನ್‌ನ ಕೋ ಆರ್ಡ್ ಸೆಟ್‌ನಂತೆ ಲುಕ್ ನೀಡುವ ಲೆಹೆಂಗಾವೇ ಸಾಕ್ಷಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಸ್ಲಿವ್‌ಲೆಸ್ ಸನ್ ಕಲರ್ ಲೆಹೆಂಗಾ ವಿಶೇಷತೆ
ಅಂದಹಾಗೆ, ಸಮ್ಮರ್ ವೆಡ್ಡಿಂಗ್ ಸೀಸನ್‌ನಲ್ಲಿ ಸನ್ ಕಲರ್ ಅಂದರೇ ನಾನಾ ಬಗೆಯ ವೈಬ್ರೆಂಟ್ ಯೆಲ್ಲೋ ಅಂದರೇ ಹಳದಿ ವರ್ಣದ ಲೆಹೆಂಗಾಗಳು ಪ್ರತಿ ಬಾರಿಯೂ ಮರಳುತ್ತವೆ. ಆದರೆ, ಈ ಬಾರಿ ಈ ಸನ್ ಕಲರ್ ಲೆಹೆಂಗಾದಲ್ಲಿ ಸ್ಲೀವ್‌ಲೆಸ್ ಕ್ರಾಪ್ ಟಾಪ್, ಬ್ಲೌಸ್‌ಗೆ ಸಾದಾ ಸನ್ ಕಲರ್‌ನ ಸ್ಕರ್ಟ್ ಜತೆಯಾಗಿದೆ. ಕೆಲವೆಡೆ ಇದನ್ನು ಉಲ್ಟಾ ವಿನ್ಯಾಸದಲ್ಲೂ ಕಾಣಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಆಕರ್ಷಕ ವೆಡ್ಡಿಂಗ್ ಲೆಹೆಂಗಾ
ಸಮ್ಮರ್ ವೆಡ್ಡಿಂಗ್ ಫ್ಯಾಷನ್‌ನಲ್ಲಿರುವ ಈ ಶೇಡ್‌ನ ವೆಡ್ಡಿಂಗ್ ಲೆಹೆಂಗಾ ಧರಿಸಿದವರನ್ನು ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ. ಅಲ್ಲದೇ ನೂರು ಜನರ ಮಧ್ಯೆಯೂ ಎದ್ದು ಕಾಣಿಸುವಂತೆ ಮಾಡುತ್ತವೆ. ಸೆಕೆಯ ಈ ಸೀಸನ್‌ನಲ್ಲೂ ಕಂಫರ್ಟಬಲ್ ಫೀಲ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸ್ಲೀವ್‌ಲೆಸ್ ಸನ್ ಕಲರ್ ಲೆಹೆಂಗಾ ಪ್ರಿಯರಿಗೆ ಟಿಪ್ಸ್
- ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಸನ್ ಕಲರ್ ಶೇಡ್ ಆಯ್ಕೆ ಮಾಡಿ.
- ಸ್ಲೀವ್‌ಲೆಸ್ ಲೆಹೆಂಗಾ ಧರಿಸುವ ಮುನ್ನ ವ್ಯಾಕ್ಸ್ ಮಾಡಿಸಿ.
- ಆದಷ್ಟೂ ಹೊಸ ಟ್ರೆಂಡಿ ಕಾಂಬಿನೇಷನ್ ವಿನ್ಯಾಸ ಟ್ರೈ ಮಾಡಿ.
- ಎದ್ದು ಕಾಣಿಸುವಂತಹ ಮೇಕಪ್ ಬೇಡ!