ಬೆಂಗಳೂರು: ಟಾಟಾ ಸಮೂಹದ ವಸ್ತ್ರ ಮತ್ತು ಉಡುಪುಗಳ ಮಾರಾಟ ಮಳಿಗೆ ತನೈರ, ಮಾರಾಟ ಮೇಳ ಆರಂಭಿಸುವುದಾಗಿ ಘೋಷಿಸಿದ್ದು, ಗ್ರಾಹಕರಿಗೆ ಅಸಾಧಾರಣ ಮೌಲ್ಯದ ಕೈಯಿಂದ ನೇಯ್ದ ಸೀರೆಗಳು ಮತ್ತು ಸಾಂಪ್ರದಾಯಿಕ ಸೀರೆಗಳ ಮಾರಾಟ ಮೇಳದ ಮೂಲಕ ಉತ್ಪನ್ನಗಳನ್ನು ಮನೆಗೆ ತರುವ ಅವಕಾಶ ನೀಡುತ್ತಿದೆ. 2026 ಜುಲೈ 1ರಿಂದ ಆರಂಭವಾಗಿರುವ ಈ ಮಾರಾಟವು ತನೈರಾ ಮಳಿಗೆಗಳು ಮತ್ತು ಆನ್‌ಲೈನ್‌ನಲ್ಲಿ ಆಯ್ದ ಸೀರೆಗಳ ಮೇಲೆ 40%ವರೆಗೆ, ಕುರ್ತಾಗಳು ಮತ್ತು ಕುರ್ತಾ ಸೆಟ್‌ಗಳ ಮೇಲೆ 50%ವರೆಗೆ ರಿಯಾಯಿತಿ ನೀಡುತ್ತಿದೆ.
ಮಾರಾಟದ ಮೊದಲ 5 ದಿನಗಳಲ್ಲಿ ತನೈರದ ನೋಂದಾಯಿತ ಸದಸ್ಯರು(ಎನ್‌ಸರ್ಕಲ್ ಸದಸ್ಯರು) ಹೆಚ್ಚುವರಿ 5% ರಿಯಾಯಿತಿ ಆನಂದಿಸಬಹುದು. ಈ ಮಾರಾಟವು ಗ್ರಾಹಕರಿಗೆ ಮದುವೆಗಳು, ಹಬ್ಬದ ಸಂದರ್ಭಗಳು ಮತ್ತು ಶುಭ ಆಚರಣೆಗಳ ಋತುವಿನ ಉದ್ದಕ್ಕೂ ತಮಗಿಷ್ಟವಾದ ಉಡುಪು ಗಳ ಮೇಲೆ ಹೂಡಿಕೆ ಮಾಡಲು ಸೂಕ್ತ ಅವಕಾಶ ನೀಡುತ್ತಿದೆ.
ಭಾರತದ ಶ್ರೀಮಂತ ಜವಳಿ ಪರಂಪರೆಯ ಆಚರಣೆಗೆ ಹೆಸರುವಾಸಿಯಾದ ತನೈರ, ದೇಶಾದ್ಯಂತದ ಪ್ರಸಿದ್ಧ ನೇಕಾರರು ಕೈಯಿಂದ ನೇಯ್ಗೆ ಮಾಡಿದ ಅಪರೂಪದ ವಿನ್ಯಾಸಗಳುಳ್ಳ ಸೀರೆಗಳ ವ್ಯಾಪಕ ಸಂಗ್ರಹವನ್ನು ಒಟ್ಟುಗೂಡಿಸಿದೆ. ಕಾಂಜೀವರಂ, ಬನಾರಸ್, ದಕ್ಷಿಣ ಭಾರತದ ಸಾಂಪ್ರದಾಯಿಕ ರೇಷ್ಮೆ ಸೀರೆಗಳು, ಟಸ್ಸಾರ್‌ಗಳು, ಜಮ್ದಾನಿಗಳು, ಸಂಬಲ್‌ಪುರಿಗಳು, ಇಕಾಟ್‌ಗಳು, ಚಂದೇರಿಗಳು, ಮಹೇಶ್ವರಿಗಳು, ಕೋಟಾ ಡೋರಿಯಾಗಳು ಮತ್ತು ಇನ್ನೂ ಹೆಚ್ಚಿನ ವಿನ್ಯಾಸಗಳನ್ನು ಒಳಗೊಂಡಂತೆ ಬ್ರ್ಯಾಂಡ್‌ನ ಅತ್ಯಂತ ಪ್ರೀತಿಯ ಸೀರೆ ಸಂಗ್ರಹಗಳನ್ನು ಮಾರಾಟಕ್ಕೆ ಇಡಲಾಗಿದೆ – ಪ್ರತಿಯೊಂದು ಸೀರೆ ಸಂಗ್ರಹವು ವಿಭಿನ್ನ ನೇಯ್ಗೆ ಕ್ಲಸ್ಟರ್‌ಗಳ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ: Saree Fashion 2026: ಪೈಥಾನಿ ಸಿಲ್ಕ್ ಸೀರೆ ಸ್ಟೈಲಿಂಗ್‌ಗೆ ಇಲ್ಲಿದೆ ಐಡಿಯಾ
ಮುಂಬರುವ ತಿಂಗಳುಗಳಲ್ಲಿ ಮದುವೆಗಳು, ಹಬ್ಬದ ಆಚರಣೆಗಳು ಮತ್ತು ಇತರೆ ವಿಶೇಷ ಸಂದರ್ಭಗಳಿಗೆ ಗ್ರಾಹಕರು ತಯಾರಿ ನಡೆಸುತ್ತಿರುವಾಗ, ತನೈರ ಮಾರಾಟವು ಸೊಗಸಾದ ಕುರ್ತಾಗಳು, ಕುರ್ತಾ ಸೆಟ್‌ಗಳು, ಬ್ಲೌಸ್‌ಗಳು, ಶುದ್ಧ ಮತ್ತು ನೈಸರ್ಗಿಕ ಬಟ್ಟೆಗಳಿಂದ ತಯಾರಿಸಿದ ಮತ್ತು ಕೈಯಿಂದ ನೇಯ್ಗೆ ಮಾಡಿದ ಸೀರೆಗಳ ಮಾರಾಟ ಮೇಳದ ಜತೆಗೆ, ಸಾಂಪ್ರದಾಯಿಕ (ಕರಕುಶಲ) ಸೀರೆಗಳ ಚಿಂತನಾಶೀಲ ಆಯ್ಕೆಯನ್ನು ಅನ್ವೇಷಿಸಲು ಸೂಕ್ತ ಅವಕಾಶ ಒದಗಿಸುತ್ತಿದೆ. ಪ್ರತಿ ಆಚರಣೆಗೆ ಕಾಲಾತೀತವಾದ ಮತ್ತು ಅತ್ಯುತ್ತಮ ಗುಣಮಟ್ಟದ ಕೈಮಗ್ಗದ ಸೀರೆಗಳನ್ನು ಆರಿಸಿಕೊಳ್ಳುವುದಿರಲಿ ಅಥವಾ ಸಮಕಾಲೀನ ಸಾಂಪ್ರದಾಯಿಕ ಉಡುಗೆಗಳನ್ನು ಆರಿಸಿಕೊಳ್ಳುವು ದಿರಲಿ, ಗ್ರಾಹಕರು ಭಾರತದ ಶ್ರೀಮಂತ ಜವಳಿ ಪರಂಪರೆಯನ್ನು ಸುಂದರವಾಗಿ ಪ್ರತಿಬಿಂಬಿಸುವ ಶೈಲಿ ಮತ್ತು ವಿನ್ಯಾಸಗಳನ್ನು ಕಂಡುಹಿಡಿಯಬಹುದು.
ತನೈರದ ಹೃದಯ ಭಾಗದಲ್ಲಿ ದೃಢತೆ ಮತ್ತು ಶುದ್ಧತೆಗೆ ಅಚಲವಾದ ಬದ್ಧತೆ ಇದೆ. ಪ್ರತಿಯೊಂದು ಶುದ್ಧ ರೇಷ್ಮೆ ಸೀರೆಯು ಸಿಲ್ಕ್ ಮಾರ್ಕ್‌ನೊಂದಿಗೆ ಪ್ರಮಾಣೀಕರಿಸಲ್ಪಟ್ಟಿದೆ, ಜತೆಗೆ ಆಯ್ದ ಸಂಗ್ರಹ ಗಳು ಜರಿ ಪ್ರಮಾಣೀಕರಣವನ್ನು ಸಹ ಹೊಂದಿವೆ, ಇದು ಬ್ರ್ಯಾಂಡ್‌ನ ನಿಜವಾದ ಗುಣಮಟ್ಟದ ಭರವಸೆಯನ್ನು ಬಲಪಡಿಸುತ್ತದೆ. ಅದರ ನಿರಂತರ ನಂಬಿಕೆಯ ಮೌಲ್ಯಗಳಿಂದ ಮಾರ್ಗದರ್ಶಿ ಸಲ್ಪಟ್ಟ ತನೈರ, ದೇಶದಲ್ಲಿ ಅನಾದಿ ಕಾಲದಿಂದಲೂ ಗೌರವಿಸಲ್ಪಟ್ಟ ನೇಯ್ಗೆ ಸಂಪ್ರದಾಯಗಳನ್ನು ಆಚರಿಸುವುದನ್ನು ಮತ್ತು ಸಂರಕ್ಷಿಸುವುದನ್ನು ಮುಂದುವರೆಸಿದೆ, ಜತೆಗೆ ಕರಕುಶಲ ಶ್ರೇಷ್ಠತೆಯನ್ನು ವಿವೇಚನಾಶೀಲ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ.
ಈ ಮಾರಾಟ ಕೊಡುಗೆ ಬಗ್ಗೆ ಮಾತನಾಡಿದ ತನೈರದ ಮುಖ್ಯ ಮಾರಾಟ ಮತ್ತು ಮಾರುಕಟ್ಟೆ ಅಧಿಕಾರಿ ಶ್ರೀ ಸೋಮಪ್ರಭಾ ಕುಮಾರ್ ಸಿಂಗ್, "ತನೈರದಲ್ಲಿ ಪ್ರತಿಯೊಂದು ಸೃಷ್ಟಿಯೂ ಭಾರತದ ಶ್ರೀಮಂತ ಜವಳಿ ಪರಂಪರೆಯಲ್ಲಿ ಬೇರೂರಿದೆ, ಅದನ್ನು ಅಧಿಕೃತ ಮಾನ್ಯತೆಯಿಂದ ರೂಪಿಸ ಲಾಗಿದೆ. ಸೀಸನ್ ಸೇಲ್ ಮೂಲಕ, ಕರಕುಶಲತೆ ಮತ್ತು ಶಾಶ್ವತ ವಿನ್ಯಾಸವನ್ನು ಆಚರಿಸುವ ಕೈಯಿಂದ ನೇಯ್ಗೆ ಮಾಡಿದ ಸೀರೆಗಳ ಮಾರಾಟ ಮೇಳವು ಚಿಂತನಾಶೀಲ ಸಂಗ್ರಹವನ್ನು ಅನ್ವೇಷಿ ಸುವಂತೆ ನಾವು ಗ್ರಾಹಕರಿಗೆ ಆಹ್ವಾನ ನೀಡುತ್ತೇವೆ" ಎಂದು ಹೇಳಿದರು.