ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಸುಖ ಸಂಸಾರಕ್ಕಿದೆ ಹಲವು ಉಪಾಯಗಳು- ಇಲ್ಲಿವೆ ಕೆಲವೊಂದು ಟಿಪ್ಸ್‌!

ಸಂಸಾರವೆಂದರೆ ಬರೀ ದುಡಿಮೆ ಮತ್ತು ಕುಟುಂಬಸ್ಥರು ಇದ್ದರೇ ಸಾಕಾಗದು, ಪ್ರೀತಿ, ವಾತ್ಸಲ್ಯ, ಪರಸ್ಪರ ಹೊಂದಾಣಿಕೆ ಮತ್ತು ಗೌರವದ ಅಗತ್ಯಗಳೂ ಕೂಡ ಇರುತ್ತವೆ. ನಿಮ್ಮ ಆರೋಗ್ಯ, ಉದ್ಯೋಗದಲ್ಲಿ ಅಥವಾ ವೈಯಕ್ತಿಕವಾಗಿ ಏನಾದರೂ ಸಮಸ್ಯೆ ಕಾಡುತ್ತಿದೆಯೇ ಒಮ್ಮೆ ಆಲೋಚಿಸಿ ನೋಡಿ.

ಸುಖ ಸಂಸಾರಕ್ಕಿದೆ ಹಲವು ಉಪಾಯಗಳು

-

Rakshita Karkera
Rakshita Karkera Nov 26, 2025 10:30 AM

ನನಗೆ ಈಗ 45ವರ್ಷ, ಒಳ್ಳೆಯ ದುಡಿಮೆ, ಹೆಂಡತಿ ಮತ್ತು ಒಬ್ಬ ಮಗನಿದ್ದಾನೆ. ಆದರೆ ಸದಾ ಏನೋ ಚಿಂತೆ, ಕೊರತೆ ಕಾಡುತ್ತದೆ. ಜೀವನದಲ್ಲಿ ನನಗೆ ನೆಮ್ಮದಿಯಿಲ್ಲ, ಸಮಾಧಾನವಿಲ್ಲ. ನಾನು ಸಂತೋಷವಾಗಿರುವುದೇ ಕಡಿಮೆ. ನನಗೆ ನೆಮ್ಮದಿ ಬೇಕು, ಸಂತೋಷದಿಂದಿರಬೇಕು. ನನ್ನ ಮನಸ್ಥಿಯನ್ನು ಹೇಗೆ ಸುಧಾರಿಸಕೊಳ್ಳಬೇಕು ದಯವಿಟ್ಟು ಹೇಳಿ.

ಧನ್ಯವಾದಗಳು.

ಮೇಲಿನ ನೋಟಕ್ಕೆ ಸಂಸಾರ ಸಾಗುವುದಕ್ಕೆ ಏನು ಅಗತ್ಯವೋ ಅವು ನಿಮ್ಮಲ್ಲಿವೆ. ಆದರೂ ಸಹ ನಿಮಗೆ ಕೊರತೆಯಿದ್ದು, ನೆಮ್ಮದಿಯೂ ಇಲ್ಲವೆಂದರೇ ಕಾರಣಗಳು ಖಂಡಿತ ಇರುತ್ತವೆ. ಸಂಸಾರವೆಂದರೆ ಬರೀ ದುಡಿಮೆ ಮತ್ತು ಕುಟುಂಬಸ್ಥರು ಇದ್ದರೇ ಸಾಕಾಗದು, ಪ್ರೀತಿ, ವಾತ್ಸಲ್ಯ, ಪರಸ್ಪರ ಹೊಂದಾಣಿಕೆ ಮತ್ತು ಗೌರವದ ಅಗತ್ಯಗಳೂ ಕೂಡ ಇರುತ್ತವೆ. ನಿಮ್ಮ ಆರೋಗ್ಯ, ಉದ್ಯೋಗದಲ್ಲಿ ಅಥವಾ ವೈಯಕ್ತಿಕವಾಗಿ ಏನಾದರೂ ಸಮಸ್ಯೆ ಕಾಡುತ್ತಿದೆಯೇ ಒಮ್ಮೆ ಆಲೋಚಿಸಿ ನೋಡಿ. ಮುಕ್ತವಾಗಿ ನಿಮ್ಮ ಪತ್ನಿಯ ಬಳಿ ನಿಮ್ಮ ಸಮಸ್ಯೆಯ ಕುರಿತು ಒಮ್ಮೆ ಮಾತಾನಾಡಿ ನೋಡಿ. ಇನ್ನೂ ಹೆಚ್ಚಿನ ಸಹಾಯ ಮತ್ತು ಮಾಗ೯ದಶ೯ನದ ಅಗತ್ಯವಿದ್ದರೆ ಆಪ್ತಸಮಾಲೋಚಕರನ್ನು ಸಂಪಕಿ೯ಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

Mana Santwana: ಮನ ಸಾಂತ್ವನ- ದೀಪದ ಬೆಳಕು ಮನಸ್ಸಿನ ಮೇಲೆ ಬೀರುವ ಪ್ರಭಾವ

ಹಾಗೆಯೇ, ಕೆಳಗೆ ವಿವರಿಸಿವಿರುವ ಈ ಅಂಶಗಳನ್ನೂ ಕೂಡ ಗಮನಿಸಿ

  1. ನಿಯಂತ್ರಣದಲ್ಲಿರುವ ಮತ್ತು ನಿಯಂತ್ರಣ ತಪ್ಪಿದ (Control ಮತ್ತು out of control - ನಿಮ್ಮ ಚಿಂತೆ ಮತ್ತು ಕೊರತೆಯ ಸಂಬಧಪಟ್ಟ ವಿಷಯಗಳು ನಿಮ್ಮ ನಿಯಂತ್ರಣದಲ್ಲಿ (ಮಿತಿಯಲ್ಲಿ) ಇವೆಯೇ ಎಂದು ಪರೀಶೀಲಿಸಿ ನೋಡಿ. ನಿಮ್ಮ ಪ್ರಯತ್ನದಿಂದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಬಹುದೇ ಅಥವಾ ನಿಮ್ಮ ಪ್ರಯತ್ನವನ್ನೂ ಮೀರಿದ ಸಮಸ್ಯೆಗಳು ಎಂದಿನಿಸಿದರೇ, ಸಮಸ್ಯೆಗಳನ್ನು ನಿಭಾಯಿಸಲು ಕಲಿಯಬೇಕು, ಇದರಿಂದ ಚಿಂತೆಮಾಡುವುದು ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
  2. ಮನಸ್ಸನ್ನು ಶುದ್ಧೀಕರಿಸಿ- ಮನಸ್ಸಿನ ಕಲ್ಮಶಗಳನ್ನು ಹೊರಹಾಕಿ. ನೆಗೆಟೀವ್ ಥಿಕಿಂಗ್ ಮತ್ತು ಅತಿಯಾದ ಯೋಚನೆಗಳಿಂದ ಹೊರಗೆ ಬರುವುದಕ್ಕೆ ಪ್ರಯತ್ನಿಸಿ. ಅತಿಯಾಗಿ ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಡಿ, ಇನ್ನೊಬ್ಬರನ್ನು ದೂಷಿಸಬೇಡಿ. ಪ್ರತೀಕೂಲದ ಪರಿಸ್ಥಿತಿ ಬಂದಾಗ ಬೇರೆಯವರಿಗೆ ಹೋಲಿಸಿಕೊಂಡು ಕುಗ್ಗಬೇಡಿ.
  3. ದೈಹಿಕ ಚಟುವಟಿಕೆಗಳು ಅಗತ್ಯ - ದೈಹಿಕವಾಗಿ ಚಟಿವಟಿಕೆಯಿಂದಿರುವುದನ್ನು ಮರೆಯಬೇಡಿ. ಯಾಕೆಂದರೇ ದೈಹಿಕ ಆರೋಗ್ಯ ಇದ್ದರೇ ಮಾನಸಿಕ ಆರೋಗ್ಯವೂ ಇರುತ್ತದೆ . ಜಡತ್ವ ದೇಹಕ್ಕೆ ಒಳ್ಳೆಯದಲ್ಲ. ಆಲಸ್ಯ ಬರುವುದಲ್ಲದೇ ಮನಸ್ಸು ಒಂದೇ ವಿಷಯವನ್ನು ಪದೇ ಪದೇ . ಯೋಚಿಸಿತ್ತಿರುತ್ತದೆ. ಇದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ವ್ಯಾಯಾಮ ಮಾಡಿದಾಗ ನಿಮ್ಮ ಮಿದುಳಿನಲ್ಲಿ ಎಂಡಾಫಿ೯ನ್ ಎನ್ನುವ ಹ್ಯಾಪಿ ಹಾರ್ಮೋನ್ ಉತ್ಪತ್ತಿಯಾಗಿ ನಿಮ್ಮನ್ನು ಸಂತೋಷವಾಗಿಡುವುದಕ್ಕೆ ಪ್ರಯತ್ನಿಸುತ್ತದೆ.
  4. ನಿಮ್ಮ ಆಯ್ಕೆ ಸಂತೋಷವಾಗಿರಲಿ- ಏನೇ ಇರಲಿ ನಾನು ಸಂತೋಷವಾಗಿರಲು ಪ್ರಯತ್ನಿಸುತ್ತೇನೆ. ಯಾರೂ ನನ್ನನ್ನು ಸಂತೋಷಪಡಿಸಲು ಸಾಧ್ಯವಿಲ್ಲ ಆದರೆ ನಾನು ನನ್ನನ್ನು ಸಂತೋಷಪಡಿಸಿಕೊಳ್ಳಬಲ್ಲೆ. ಸಂತೋಷವಾಗಿರಲು ಇತರರ ಮೇಲೆ ಅವಲಂಬಿಸುವುದನ್ನು ತಡೆಯುವುದು ಉತ್ತಮ.
  5. ಕೃತಜ್ಞತೆ - ಪ್ರತಿನಿತ್ಯ ನಿಮ್ಮ ಬದುಕು, ಸಂಬಧಗಳು, ಆರೋಗ್ಯ ಮತ್ತು ದುಡಿಮೆಗಳಿಗೆ ಕೃತಜ್ಞತೆ ಸಲ್ಲಿಸಿ. ಇದರಿಂದ ಮನಸ್ಸು ತೃಪ್ತಿ ಹಾಗೂ ಸಂತೋಷಗೊಳ್ಳುತ್ತದೆ. ಇವುಗಳನ್ನು ನೀವು ದಿನ ತಪ್ಪದೇ ಅಭ್ಯಾಸ ಮಾಡಿದ್ರೆ ನಿಮ್ಮ ಮಾನಸಿಕ ಆರೋಗ್ಯ ಖಂಡಿತವಾಗಿಯೂ ಸುಧಾರಿಸುತ್ತದೆ