ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಾಟ್ ಜಿಪಿಟಿ ಮೂಲಕ ಆತ್ಮಹತ್ಯೆಯ ವಿಧಾನ ಹುಡುಕಾಡಿದ ಯುವತಿಯರು; ಎಲಾನ್‌ ಮಸ್ಕ್ ಹೇಳಿದ್ದೇನು?

ಗುಜರಾತ್‌ನ ಸೂರತ್‌ನ ಸ್ವಾಮಿನಾರಾಯಣ ದೇವಸ್ಥಾನದ ಶೌಚಾಲಯದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. 18–20 ವರ್ಷದ ಬಾಲ್ಯದ ಸ್ನೇಹಿತೆಯರಾದ ಅವರು ಕಳೆದ ಶುಕ್ರವಾರ (ಮಾರ್ಚ್‌ 6) ಕಾಲೇಜಿಗೆ ಹೋಗಿ ಮನೆಗೆ ಮರಳಿರಲಿಲ್ಲ. ಮೊಬೈಲ್ ಲೊಕೇಶನ್ ಆಧರಿಸಿ ಹುಡುಕಿದಾಗ ದೇವಸ್ಥಾನದ ಶೌಚಾಲಯದಲ್ಲಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಘಟನಾ ಸ್ಥಳದಲ್ಲಿ ಅರಿವಳಿಕೆ ಮದ್ದು ಮತ್ತು ಸಿರಿಂಜ್‌ಗಳು ದೊರೆತಿದೆ. ಅದನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮೊಬೈಲ್ ಪರಿಶೀಲಿಸಿದಾಗ ಆತ್ಮಹತ್ಯೆಗೆ ಯಾವ ಔಷಧ ಬಳಸಬಹುದು ಎಂದು ChatGPTನಲ್ಲಿ ಹುಡುಕಿರುವುದು ತಿಳಿದುಬಂದಿದೆ. ಈ ಬಗ್ಗೆ ಎಲಾನ್‌ ಮಸ್ಕ್‌ ಪ್ರತಿಕ್ರಿಯಿಸಿದ್ದಾರೆ.

ಆತ್ಮಹತ್ಯೆಯ ವಿಧಾನಕ್ಕಾಗಿ ಚಾಟ್ ಜಿಪಿಟಿ ಮೊರೆ ಹೋದ ವಿದ್ಯಾರ್ಥಿನಿಯರು

ಆತ್ಮಹತ್ಯೆ ಮಾಡಿಕೊಂಡ ಯುವತಿಯರು -

Profile
Sushmitha Jain Mar 9, 2026 5:14 PM

ಗಾಂಧಿನಗರ, ಮಾ. 9: ಗುಜರಾತ್‌ನ ಸೂರತ್‌ನ (Surat) ದೇವಸ್ಥಾನವೊಂದರ ಶೌಚಾಲಯದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆಯಾd ಆಘಾತಕಾರಿ ಘಟನೆ ನಡೆದಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮಾರ್ಗಗಳಿಗಾಗಿ ಚಾಟ್ ಜಿಪಿಟಿ (ChatGPT) ಮೂಲಕ ಮಾಹಿತಿ ಹುಡುಕಿದ್ದರು ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಎಕ್ಸ್ ಮಾಲಕ ಮತ್ತು ಟೆಸ್ಲಾ ಸಿಇಒ (Tesla CEO) ಎಲಾನ್‌ ಮಸ್ಕ್ (Elon Musk) ಕೇವಲ ಒಂದು ಪದದಲ್ಲಿ "Yikes" ಎಂದು ಪ್ರತಿಕ್ರಿಯಿಸುವ ಮೂಲಕ ತಮ್ಮ ತೀವ್ರ ಆಘಾತವನ್ನು ವ್ಯಕ್ತಪಡಿಸಿದ್ದಾರೆ. 18ರಿಂದ 20 ವರ್ಷ ವಯಸ್ಸಿನ ಈ ಇಬ್ಬರು ಬಾಲ್ಯದ ಸ್ನೇಹಿತೆಯರು ಕಳೆದ ಶುಕ್ರವಾರ (ಮಾರ್ಚ್‌ 6) ಕಾಲೇಜಿಗೆ ತೆರಳಿದವರು ಮನೆಗೆ ಮರಳದಿದ್ದಾಗ, ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ಲೊಕೇಶನ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ, ಸೂರತ್‌ನ ಸ್ವಾಮಿನಾರಾಯಣ ದೇವಸ್ಥಾನದ ಶೌಚಾಲಯದಲ್ಲಿ ಅವರ ಮೃತದೇಹಗಳು ಪತ್ತೆಯಾಗಿವೆ.

ಘಟನಾ ಸ್ಥಳದಲ್ಲಿ ಅರಿವಳಿಕೆ ಮದ್ದು ಮತ್ತು ಸಿರಿಂಜ್‌ಗಳು ಪತ್ತೆಯಾಗಿದ್ದು, ಇವುಗಳನ್ನು ಬಳಸಿಯೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸೂರತ್ ಎಸಿಪಿ ಎನ್.ಪಿ. ಗೋಹಿಲ್ ಈ ಬಗ್ಗೆ ಮಾತನಾಡಿ, "ಯುವತಿಯರ ಫೋನ್ ಪರಿಶೀಲಿಸಿದಾಗ ಅವರ ಚಾಟ್ ಜಿಪಿಟಿ ಸರ್ಚ್ ಹಿಸ್ಟರಿಯಲ್ಲಿ ಆತ್ಮಹತ್ಯೆಗೆ ಯಾವ ಔಷಧಗಳನ್ನು ಬಳಸಬಹುದು ಎಂಬ ಹುಡುಕಾಟ ಕಂಡುಬಂದಿದೆʼʼ ಎಂದಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಚಾಲಕ ಸಜೀವ ದಹನ

ʼʼಅಲ್ಲದೆ, ಅವರ ಫೋಟೋ ಗ್ಯಾಲರಿಯಲ್ಲಿ ಅರಿವಳಿಕೆ ಮದ್ದು ಚುಚ್ಚಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಹಳೆಯ ಸುದ್ದಿಯ ಸ್ಕ್ರೀನ್‌ಶಾಟ್ ಕೂಡ ಇತ್ತು" ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಸ್ತುತ ಶವಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದು, ಇಬ್ಬರು ಸ್ನೇಹಿತೆಯರು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಎಲಾನ್ ಮಸ್ಕ್ ಈ ಘಟನೆಯನ್ನು ಮುಂದಿಟ್ಟುಕೊಂಡು ಚಾಟ್ ಜಿಪಿಟಿ ತಯಾರಕ ಸಂಸ್ಥೆಯಾದ ಓಪನ್ ಎಐ (OpenAI) ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ. ಮಸ್ಕ್ ಮತ್ತು ಓಪನ್ ಎಐ ನಡುವೆ ಈಗಾಗಲೇ ಕಾನೂನು ಸಮರ ನಡೆಯುತ್ತಿದ್ದು, ಚಾಟ್ ಜಿಪಿಟಿ ಸಂಸ್ಥೆಯು ತನ್ನ ಲಾಭರಹಿತ ಉದ್ದೇಶವನ್ನು ಬಿಟ್ಟು ಹಣದ ಹಿಂದೆ ಹೋಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. "ಗ್ರೋಕ್ (Grok) ಬಳಕೆಯಿಂದ ಇದುವರೆಗೆ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆದರೆ ಚಾಟ್ ಜಿಪಿಟಿ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ" ಎಂದು ಅವರು ಟೀಕಿಸಿದ್ದಾರೆ. ಎಐ ತಂತ್ರಜ್ಞಾನದ ಸುರಕ್ಷತೆಯ ಬಗ್ಗೆ ಈ ಘಟನೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.