ಬೆಂಗಳೂರು, ಮಾ. 10: ಇತ್ತೀಚೆಗೆ ಮೊಡವೆ (Pimple) ಸಮಸ್ಯೆ ಎನ್ನುವುದು ಹೆಚ್ಚಿನವರಿಗೆ ತಲೆನೋವಾಗಿ ಬಿಟ್ಟಿದೆ. ವಿಶೇಷವಾಗಿ ಯುವ ಜನರಲ್ಲಿ ಈ ಸಮಸ್ಯೆ ಜಾಸ್ತಿಯಾಗಿದ್ದು ಹೆಚ್ಚಿದ ಉಷ್ಣತೆ, ಬೆವರು, ಧೂಳು ಹೀಗೆ ನಾನಾ ಕಾರಣದಿಂದ ಇದು ಉಂಟಾಗುತ್ತದೆ. ಅದೇ ರೀತಿ ಆಧುನಿಕ ಆಹಾರ ಕ್ರಮ, ಹಾರ್ಮೋನ್ ಬದಲಾವಣೆ ,ಕೆಲಸದ ಒತ್ತಡ ಹೀಗೆ ಹಲವು ಸಂದರ್ಭಗಳಲ್ಲೂ ಮೊಡವೆ ಮೂಡುತ್ತವೆ. ಇತ್ತೀಚಿಗೆ ಈ ಸಮಸ್ಯೆ ಯುವಜನತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು? ಇದಕ್ಕೆ ಯಾವ ರೀತಿಯಲ್ಲಿ ಮನೆಯಲ್ಲೇ ಮದ್ದು ಮಾಡಬಹುದು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.
ಹಿಂದೆ ಹೆಚ್ಚಾಗಿ ಆಯಿಲ್ ಸ್ಕೀನ್ ಅಥವಾ ಹಾರ್ಮೋನ್ ಬದಲಾವಣೆಯಿಂದಾಗಿ ಮೊಡವೆ ಸಮಸ್ಯೆ ಉಂಟಾಗುತ್ತಿತ್ತು. ಆದರೆ ಇತ್ತೀಚೆಗೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದಲೂ ಮೊಡವೆ ಮೂಡಬಹುದು. ಫೋನ್ ಸ್ಕ್ರೀನ್ ಮೇಲೆ ಬ್ಯಾಕ್ಟೀರಿಯಾಗಳು ಸುಲಭವಾಗಿ ಕಾಣಿಸಿಕೊಳ್ಳುತ್ತವೆ. ಫೋನ್ ಕಿವಿಗೆ ಹತ್ತಿರವಿಟ್ಟು ಮಾತನಾಡಿದಾಗ ಸ್ಕ್ರೀನ್ ಮೇಲಿನ ಬ್ಯಾಕ್ಟೀರಿಯಾ, ಅದರಲ್ಲಿರುವ ಧೂಳು ಮುಖಕ್ಕೆ ತಾಗಬಹುದು. ಇದು ಮೊಡವೆಗೆ ಕಾರಣವಾಗಬಹುದು.
ವಿಡಿಯೊ ನೋಡಿ:
ಅದೇ ರೀತಿ ನೀವು ಬಳಸುವ ಪಿಲ್ಲೋ ಕವರ್ ಕೂಡ ಮೊಡವೆಗೆ ಕಾರಣವಾಗಬಹುದು. ದಿಂಬಿನ ಕವರ್‌ನಲ್ಲಿ ಬ್ಯಾಕ್ಟೀರಿಯಾ, ಎಣ್ಣೆ, ಧೂಳು ಸಂಗ್ರವಾಗಿ ನಿಮ್ಮ ಮುಖಗಳಿಗೆ ಹರಡಬಹುದು. ಇದರಿಂದ ಚರ್ಮದ ಕೋಶಗಳು ಸಂಗ್ರಹವಾಗಿ ಮೊಡವೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ತಲೆದಿಂಬು ಕವರ್ ಬದಲಾಯಿಸುವ ಅಭ್ಯಾಸ ಮಾಡಿಕೊಳ್ಳಿ
ಗರ್ಭಾವಸ್ಥೆಯಲ್ಲಿ ಮಾಡುವ ಈ ತಪ್ಪಿನಿಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?
ಕೆಲವು ಆಹಾರಗಳು ನೇರವಾಗಿ ಮೊಡವೆಗೆ ಕಾರಣವಾಗುತ್ತವೆ. ಹಾಲಿನ ಉತ್ಪನ್ನಗಳು, ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಇರುವ ಆಹಾರಗಳು ಮೊಡವೆಗಳಿಗೆ ಕಾರಣವಾಗುತ್ತವೆ. ಹಾಗೆಯೇ ಅತೀಯಾದ ಮೇಕಪ್ ಮಾಡುವುದರಿಂದಲೂ ಮೊಡವೆ ಕಾಣಿಸಿಕೊಳ್ಳಬಹುದು.
ಪರಿಹಾರವೇನು?
- ತುಳಸಿ ,ಪುದೀನಾ, ದೊಡ್ಡಪತ್ರ, ಒಂದೆಲಗ ಹಾಗೂ ಅಲೋವೆರಾ ಇತ್ಯಾದಿಯನ್ನು ಸರಿಸಮಾನವಾಗಿ ತೆಗೆದುಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಲೇಪನವಾಗಿ ಹಚ್ಚಿ.
- ಹಸಿ ಹಾಲನ್ನು ಮುಖಕ್ಕೆ ಬಳಸುವುದರಿಂದ ಮೊಡವೆಯನ್ನು ಕಡಿಮೆ ಮಾಡಬಹುದು.
- ಮೊಡವೆಗಳ ಮೇಲೆ ಐಸ್ ಕ್ಯೂಬ್ ಮಸಾಜ್ ಮಾಡುವುದು ಕೂಡ ಉತ್ತಮ ಪರಿಹಾರ.
- ಮಲಗುವ ಮೊದಲು, ಮೊಡವೆಯ ಮೇಲೆ ಎರಡುಹನಿ ಜೇನುತುಪ್ಪವನ್ನು ಹಚ್ಚಿ ಬೆಳಗ್ಗೆ ಮುಖ ತೊಳೆದರೂ ಮೊಡವೆಗೆ ಪರಿಹಾರ ಕಂಡುಕೊಳ್ಳಬಹುದು.