ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಕೀಲಿಕೈ ಎಲ್ಲಿಡಬೇಕು ಗೊತ್ತಾ? ವಾಸ್ತುಗೆ ವಿರುದ್ಧವಾಗಿ ಈ ತಪ್ಪುಗಳನ್ನು ಮಾಡಬೇಡಿ!

ಮನೆಯಲ್ಲಿ ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ವಾಸ್ತು ಪ್ರಕಾರ ಬಹಳ ಮುಖ್ಯ. ತಪ್ಪು ಸ್ಥಳದಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಬಹುದು, ಸರಿಯಾದ ಸ್ಥಳದಲ್ಲಿ ಇಟ್ಟರೆ ಸಕಾರಾತ್ಮಕ ಶಕ್ತಿ ಮತ್ತು ಸುರಕ್ಷತೆ ಹೆಚ್ಚುತ್ತದೆ. ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ ಕೀಲಿಗಳನ್ನು ಎಲ್ಲಿಡಬೇಕು, ಯಾವ ದಿಕ್ಕುಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಕೀಲಿ ಕೀ ವಾಸ್ತು ಶಾಸ್ತ್ರ

ಬೆಂಗಳೂರು: ಮನೆಯಲ್ಲಿ ಬಳಸುವ ಕೀಲಿಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿವೆ. ಮನೆ, ಕಪಾಟು, ವಾಹನ ಅಥವಾ ಸೇಫ್‌ಲಾಕರ್‌ಗಳ ಭದ್ರತೆಗಾಗಿ ಅವು ಅಗತ್ಯವಾಗಿದ್ದರೂ, ವಾಸ್ತು ಶಾಸ್ತ್ರದ ದೃಷ್ಟಿಯಲ್ಲಿ ಕೀಲಿಗಳ ಸ್ಥಾನ ಮತ್ತು ಅವುಗಳನ್ನು ಇಡುವ ವಿಧಾನವೂ ಅಷ್ಟೇ ಮಹತ್ವದ್ದಾಗಿದೆ.
ವಾಸ್ತು ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವೂ ಶಕ್ತಿಯನ್ನು ಹೊರಹಾಕುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿಯಲ್ಲಿ, ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಶಾಂತಿ, ಸಮೃದ್ಧಿ ಹಾಗೂ ಸುರಕ್ಷತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ಅದರ ವಿರುದ್ಧವಾಗಿ, ಕೀಲಿಗಳನ್ನು ತಪ್ಪು ಸ್ಥಳಗಳಲ್ಲಿ ಅಥವಾ ಅಸ್ತವ್ಯಸ್ತವಾಗಿ ಇಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಿ, ಹಣಕಾಸು ಸಮಸ್ಯೆಗಳು, ಅಶಾಂತಿ ಹಾಗೂ ಭದ್ರತಾ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬ ನಂಬಿಕೆಯಿದೆ. ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ(Vastu Tips) ಕೀಲಿಗಳನ್ನು ಎಲ್ಲಿಡಬೇಕು, ಯಾವ ದಿಕ್ಕುಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಕೀಲಿಗಳನ್ನು ಇಡಲು ನಿಗದಿತ ದಿಕ್ಕು ಇದೆ

ಮನೆ, ಕಪಾಟು, ಸೇಫ್‌ಲಾಕರ್‌ ಮತ್ತು ವಾಹನಗಳ ಭದ್ರತೆಗೆ ಕೀಲಿಗಳು ಅತ್ಯಗತ್ಯ. ಪ್ರತಿಯೊಬ್ಬರ ಮನೆಯಲ್ಲೂ ಕೀಲಿಗಳು ಇದ್ದರೂ, ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡುವ ಬಗ್ಗೆ ಹೆಚ್ಚು ಜನ ಗಮನ ಕೊಡುವುದಿಲ್ಲ. ಸಾಮಾನ್ಯವಾಗಿ ಸುಲಭವಾಗಿ ಸಿಗುವ ಸ್ಥಳದಲ್ಲಿ ಅಥವಾ ಮರೆತುಹೋಗದ ಜಾಗದಲ್ಲಿ ಕೀಲಿಗಳನ್ನು ಇಡುವುದು ಬಹಳ ಮಂದಿಯ ಅಭ್ಯಾಸವಾಗಿದೆ.
ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೀಲಿಗಳನ್ನು ಎಲೆಂದರಲ್ಲಿ ಇಡುವುದು ಸರಿಯಲ್ಲ. ಅವುಗಳಿಗೆ ನಿಗದಿತ ದಿಕ್ಕು ಮತ್ತು ಸ್ಥಳಗಳಿವೆ ಎಂದು ಹೇಳಲಾಗುತ್ತದೆ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗಿದೆ.
ವಾಸ್ತು ದೃಷ್ಟಿಯಿಂದ, ಮನೆಯಲ್ಲಿ ಇರುವ ಪ್ರತಿಯೊಂದು ಕೀಲಿಯೂ ಒಂದು ಶಕ್ತಿಯ ಮೂಲವಾಗಿದ್ದು, ಅದನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ಉತ್ತಮ ಫಲಿತಾಂಶ ನೀಡುತ್ತದೆ. ತಪ್ಪು ಸ್ಥಳದಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುವ ಸಾಧ್ಯತೆ ಇದೆ.

Vastu Tips: ಈ ದಿಕ್ಕಿನಲ್ಲಿ ಮಲಗಿದ್ರೆ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುತ್ತದೆ ವಾಸ್ತು ಶಾಸ್ತ್ರ

ಈ ಸ್ಥಳಗಳಲ್ಲಿ ಕೀಲಿಗಳನ್ನು ಇಡಬೇಡಿ

ಡ್ರಾಯಿಂಗ್ ರೂಮ್: ಎಲ್ಲರಿಗೂ ಕಾಣುವ ಸ್ಥಳದಲ್ಲಿ ಕೀಲಿಗಳನ್ನು ಇಡುವುದು ಸುರಕ್ಷತೆಯ ದೃಷ್ಟಿಯಿಂದಲೂ, ವಾಸ್ತು ಪ್ರಕಾರವೂ ಒಳ್ಳೆಯದಲ್ಲ.

ಪೂಜಾ ಕೋಣೆ: ಪವಿತ್ರ ಸ್ಥಳದಲ್ಲಿ ಕೀಲಿಗಳನ್ನು ಇಡುವುದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು.

ಅಡುಗೆಮನೆ: ಇದು ಆರೋಗ್ಯಕ್ಕೆ ಸಂಬಂಧಿಸಿದ ಸ್ಥಳವಾಗಿದ್ದು, ಇಲ್ಲಿ ಕೀಲಿಗಳನ್ನು ಇಡುವುದರಿಂದ ಕೆಟ್ಟ ಪರಿಣಾಮ ಬೀರುತ್ತದೆ.

ಈ ದಿಕ್ಕಿನಲ್ಲಿ ಇಡುವುದು ಸೂಕ್ತ

ಕೀಲಿಗಳನ್ನು ಮನೆಯ ಲಾಬಿ ಭಾಗದಲ್ಲಿ, ವಿಶೇಷವಾಗಿ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ಜೊತೆಗೆ, ಕೀಲಿಗಳನ್ನು ಸರಿಯಾಗಿ ವ್ಯವಸ್ಥೆ ಮಾಡಲು ಮರದ ಸ್ಟ್ಯಾಂಡ್ ಬಳಸುವುದು ಹಾಗೂ ಅದನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಮನೆಯಲ್ಲಿ ಶಿಸ್ತು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದಲ್ಲದೆ, ಬಳಕೆಯಿಲ್ಲದ, ಹಾಳಾದ ಅಥವಾ ತುಕ್ಕು ಹಿಡಿದ ಕೀಲಿಗಳನ್ನು ಮನೆಯಲ್ಲಿ ಇಡುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಹೇಳುತ್ತದೆ. ಇಂತಹ ಕೀಲಿಗಳನ್ನು ಸಂಗ್ರಹಿಸಿಡುವುದಕ್ಕಿಂತ ಅವನ್ನು ತಕ್ಷಣವೇ ತೆಗೆದುಹಾಕುವುದು ಉತ್ತಮ. ಸಣ್ಣ ವಿಷಯಗಳಂತೆ ಕಂಡರೂ, ಈ ರೀತಿಯ ವಾಸ್ತು ನಿಯಮಗಳನ್ನು ಪಾಲಿಸುವುದು ಮನೆಯಲ್ಲಿ ಶಾಂತಿ, ಸುರಕ್ಷತೆ ಮತ್ತು ಉತ್ತಮ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.